ಸೋಶಿಯಲ್ ಮೀಡಿಯಾಗೆ ಕಾಲಿಟ್ಟ ನಯನತಾರಾ, ಒಂದೇ ಒಂದು ಪೋಸ್ಟಿಗೆ 1.5 ಮಿಲಿಯನ್ ಫಾಲೋವರ್ಸ್!
ಸೋಶಿಯಲ್ ಮೀಡಿಯಾದಿಂದ ಕೊಂಚ ಅಂತರ ಕಾಯ್ದುಕೊಂಡಿದಂತಹ ನಟಿ ನಯನತಾರಾ ಇದೀಗ ಇನ್ಸ್ಟಾಗ್ರಾಮ್ನಲ್ಲಿ ಖಾತೆಯೊಂದನ್ನು ತೆರೆದಿದ್ದಾರೆ
ಸ್ನೇಹಿತರೆ, ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸೆಲೆಬ್ರಿಟಿಗಳ ಎಂಟ್ರಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ, ಒಬ್ಬರಿಗಿಂತ ಮತ್ತೋರ್ವ ಸೆಲೆಬ್ರಿಟಿ ಭಿನ್ನ ವಿಭಿನ್ನವಾದ ಪೋಸ್ಟ್ಗಳನ್ನು ಮಾಡುತ್ತಾ ಪೈಪೋಟಿಗೆ ನಿಂತಿದ್ದಾರೆ.
ಒಂದೇ ಒಂದು ಪೋಸ್ಟ್ ಮಾಡಲು ಲಕ್ಷಾನುಲಕ್ಷ ಸಂಭಾವನೆಯನ್ನು ಪಡೆದುಕೊಳ್ಳುವ ಈ ಸ್ಟಾರ್ ನಟ-ನಟಿಯರು ಇದೀಗ ತಮ್ಮ ವೈಯಕ್ತಿಕ ಫೋಟೋಗಳ ಮೂಲಕ ನೆಟ್ಟಿಗರನ್ನು ತಮ್ಮತ್ತ ಆಕರ್ಷಿಸಿಕೊಳ್ಳುವಲ್ಲಿ ಮುಂದಾಗುತ್ತಿದ್ದಾರೆ.
ಹೌದು ಗೆಳೆಯರೇ ಹಲವು ಸೆಲೆಬ್ರಿಟಿಗಳು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದು, ಬಹು ಭಾಷಾ ತಾರೆ ಎಂದೇ ಕರೆಯಲ್ಪಡುವ ನಟಿ ನಯನತಾರಾ (Actress Nayanthara) ಕೂಡ ತಮ್ಮ ಮಕ್ಕಳ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ನೆಟ್ಟಿಗರ ಮನಸ್ಸನ್ನು ಸೆಳೆದಿದ್ದಾರೆ.
ಹೌದು ಸ್ನೇಹಿತರೆ ಮದುವೆಯಾಗಿ ಎರಡು ಅವಳಿ ಮಕ್ಕಳಾದ ನಂತರ ಸೋಶಿಯಲ್ ಮೀಡಿಯಾದಿಂದ ಕೊಂಚ ಅಂತರ ಕಾಯ್ದುಕೊಂಡಿದಂತಹ ನಟಿ ನಯನತಾರಾ ಇದೀಗ ಇನ್ಸ್ಟಾಗ್ರಾಮ್ನಲ್ಲಿ ಖಾತೆಯೊಂದನ್ನು ತೆರೆದಿದ್ದಾರೆ
ನಯನತಾರಾ ಇನ್ಸ್ಟಾಗ್ರಾಮ್ಗೆ (Instagram) ಲಗ್ಗೆ ಇಟ್ಟ ಒಂದೇ ಒಂದು ದಿನಕ್ಕೆ ಬರೋಬ್ಬರಿ 1.5 ಮಿಲಿಯನ್ ಫಾಲೋವರ್ಸ್ಗಳನ್ನು ಗಳಿಸಿದ್ದು, ತಮ್ಮ ಮೊದಲ ಪೋಸ್ಟ್ ಆಗಿ ನಟ ಶಾರುಖ್ ಖಾನ್ ಅವರೊಂದಿಗೆ ಅಭಿನಯಿಸುತ್ತಿರುವಂತಹ ಜವಾನ್ ಸಿನಿಮಾದ ಟ್ರೈಲರ್ (Jawan Cinema Trailer) ಅನ್ನು ಹಂಚಿಕೊಂಡಿದ್ದಾರೆ.
‘ಜವಾನ್’ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತೊಡಗಿಕೊಂಡಿರುವಂತಹ ನಯನತಾರಾ ಪ್ರಪ್ರಥಮ ಬಾರಿಗೆ ಬಾಲಿವುಡ್ ನ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರೊಟ್ಟಿಗೆ ಅಭಿನಯಿಸುತ್ತಿರುವುದು ನನಗೆ ಬಹಳ ಕುತೂಹಲವನ್ನು ಮೂಡಿಸಿತ್ತು.
ಇದೀಗ ಸಿನಿಮಾವನ್ನು ನೀವೆಲ್ಲರೂ ಹೇಗೆ ಒಪ್ಪಿಕೊಳ್ಳುತ್ತೀರಾ ಎಂಬುದನ್ನು ತಿಳಿಯಲು ಬಹಳ ಉತ್ಸುಕಳಾಗಿದ್ದೇನೆ ಎಂದು ತಮ್ಮ ಪ್ರಚಾರದ ವೇಳೆ ಹೇಳಿದರು, ಅದರಂತೆ ಈಗ ಇನ್ಸ್ಟಾಗ್ರಾಮ್ ಖಾತೆಯೊಂದನ್ನು (Instagram Account) ತೆರೆದು ಅದರಲ್ಲಿ ತಮ್ಮ ಮೊದಲ ಪೋಸ್ಟ್ ‘ಜವಾನ್’ ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡಿದ್ದು, “ನನ್ನ ನೆಚ್ಚಿನ ಶಾರುಖ್ ಖಾನ್ ಜೊತೆ ನನ್ನ ಮೊದಲ ಸಿನಿಮಾ, ಈ ಚಿತ್ರ ಮಾಡಲು ಸಾಕಷ್ಟು ಪ್ರೀತಿ, ಉತ್ಸಾಹ ಮತ್ತು ಕಠಿಣ ಪರಿಶ್ರಮವಿದೆ, ನೀವು ಎಂದಿನಂತೆ ಈ ಬಾರಿಯೂ ಈ ಚಿತ್ರವನ್ನು ಇಷ್ಟಪಟ್ಟು ತುಂಬು ಹೃದಯದ ಪ್ರೀತಿಯನ್ನು ತೋರಿಸುತ್ತೀರಿ ಎಂದು ಭಾವಿಸುತ್ತೇನೆ” ಎಂಬ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
View this post on Instagram
ಹಾಗೆ ತಮ್ಮ ಎರಡು ಮುದ್ದಾದ ಮಕ್ಕಳನ್ನು ಅಪ್ಪಿ ಮುದ್ದಾಡುತ್ತಿರುವ ಫೋಟೋಗಳನ್ನು ಹಾಗೂ ರೀಲ್ಸ್ ವಿಡಿಯೋ ಒಂದನ್ನು ಶೇರ್ ಮಾಡಿರುವ ನಯನತಾರಾ ತಮ್ಮ ಮುದ್ದು ಮಕ್ಕಳ ಹೆಸರನ್ನು ಸಹ ರಿವಿಲ್ ಮಾಡಿದ್ದಾರೆ.
‘ನಮ್ಮ ಓಯಿರ್ ಮತ್ತು ಓಲೋಗ್’ ಎಂಬ ಕ್ಯಾಪ್ಶನ್ ಬರೆದು ಮಕ್ಕಳೊಂದಿಗಿನ ಕ್ಯೂಟ್ ಫೋಟೋವನ್ನು ಹಂಚಿಕೊಂಡಿದ್ದು, ಈ ಅಪರೂಪದ ಚಿತ್ರಕ್ಕೆ ಅಭಿಮಾನಿಗಳ ವತಿಯಿಂದ ಅಲ್ಪಾವಧಿಯಲ್ಲಿಯೇ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬರುತ್ತಿದೆ.
Actress Nayanthara Opens Her Instagram Account and Posted First Time on Jawan Cinema