ರಾಕಿಂಗ್ ಸ್ಟಾರ್ ಯಶ್ ಒಟ್ಟಾರೆ ಆಸ್ತಿ ಎಷ್ಟು ಗೊತ್ತಾ, 1 ಸಿನಿಮಾಗೆ ಎಷ್ಟು ಸಂಭಾವನೆ ಪಡಿತಾರೆ?
ರಾಕಿಂಗ್ ಸ್ಟಾರ್ ಯಶ್ ಅವರ ಆಸ್ತಿ ಎಷ್ಟು ಹಾಗೂ ಸಿನಿಮಾಗೆ ಎಷ್ಟು ಸಂಭಾವನೆ ಪಡಿತಾರೆ? ನಿಮಗೆ ಗೊತ್ತಿಲ್ದೆ ಇರೋ ಮಾಹಿತಿ ಇಲ್ಲಿದೆ ನೋಡಿ.
- ರಾಕಿಂಗ್ ಸ್ಟಾರ್ ಯಶ್ ಒಟ್ಟಾರೆ ಆಸ್ತಿ ಎಷ್ಟು?
- ಒಂದು ಸಿನಿಮಾಗೆ ಯಶ್ ಪಡೆದುಕೊಳ್ಳುವ ಸಂಭಾವನೆ ಎಷ್ಟಿದೆ ಗೊತ್ತಾ?
- ಯಶ್ ಅವರ ಮುಂದಿನ ಸಿನಿಮಾಗಳ ಮಾಹಿತಿ ಇಲ್ಲಿದೆ ನೋಡಿ.
Actor Rocking Star Yash : ಕನ್ನಡ ಚಿತ್ರರಂಗದಲ್ಲಿ ಆರಂಭದಲ್ಲಿ ಧಾರವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನ ನಿರ್ವಹಿಸಿಕೊಂಡು ಬರ್ತಾ ಇದ್ದ ಆ ಒಬ್ಬ ಕಲಾವಿದ ಮುಂದೊಂದು ದಿನ ಇಡೀ ಕನ್ನಡ ಚಿತ್ರರಂಗದ ಭವಿಷ್ಯವನ್ನು ಬದಲಾಯಿಸುವ ರೀತಿಯಲ್ಲಿ ಬೆಳೆದು ನಿಲ್ಲುತ್ತಾನೆ ಎನ್ನುವಂತಹ ಅರಿವು ಕೂಡ ಯಾರಿಗೂ ಇರಲಿಲ್ಲ.
ಯಾರಿಗೆ ಯಾಕೆ ಖುದ್ದಾಗಿ ಆ ನಟನಿಗೆ ಇರಲಿಲ್ಲ. ಹೌದು, ನಾವು ಮಾತಾಡ್ತಿರೋದು ಜನವರಿ 8ರಂದು ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿರುವಂತಹ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ (Actor Yash) ಅವರ ಬಗ್ಗೆ.
ಕೆಜಿಎಫ್ ನಂತರ ಅವರ ಸಿನಿಮಾ ಯಾವಾಗ ಬರುತ್ತೆ ಅಂತ ಅಭಿಮಾನಿಗಳು ಕಾಯ್ತಾ ಇದಾರೆ. ಅವರ ಬರ್ತಡೆಗೆ ಟಾಕ್ಸಿಕ್ ಸಿನಿಮಾದ ಅಪ್ಡೇಟ್ ಕೂಡ ನೀಡಲಾಗಿದ್ದು ಸಿನಿಮಾ ಹಾಲಿವುಡ್ ಲೆವೆಲ್ ನಲ್ಲಿ ರೆಡಿ ಆಗ್ತಾ ಇದೆ ಅನ್ನೋದು ತಿಳಿದುಬಂದಿದೆ.
ಯಶ್ ಅವರ ಆಸ್ತಿ ಹಾಗೂ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?
ಕೆಜಿಎಫ್ ಸಿನಿಮಾದ ನಂತರ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆದುಕೊಳ್ಳುವಂತಹ ನಟರಲ್ಲಿ ನಮ್ಮ ಕನ್ನಡದ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳು ಕೂಡ ಗೂಗಲ್ ನಲ್ಲಿ ಇದನ್ನೇ ಸರ್ಚ್ ಮಾಡ್ತಿರ್ತಾರೆ. ಅವರಿಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡ್ತೇವೆ ಬನ್ನಿ.
ಕೆಜಿಎಫ್ ಸೀರೀಸ್ ಸಿನಿಮಾಗಳ ಯಶಸ್ಸಿನ ನಂತರ ಕೇವಲ ಕನ್ನಡ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗವೇ ಯಶ್ ಅವರ ಬಗ್ಗೆ ಕುತೂಹಲ ದೃಷ್ಟಿಯಿಂದ ನೋಡ್ತಾ ಇದೆ. ನ್ಯಾಷನಲ್ ಲೆವೆಲ್ ನಲ್ಲಿ ಮಿಂಚಿದ್ದಾಯಿತು ಅಂತಹ ರಾಕಿಂಗ್ ಸ್ಟಾರ್ ಯಶ್ ಈಗ ತಮ್ಮ ಮುಂದಿನ ಸಿನಿಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಸದ್ದು ಮಾಡೋದಕ್ಕೆ ಹೊರಟಿದ್ದಾರೆ.
ಸಿನಿಮಾದ ಟೀಸರ್ ಯಾವುದೇ ಹಾಲಿವುಡ್ ಸಿನಿಮಾಗೂ ಕೂಡ ಕಡಿಮೆ ಇಲ್ಲದಂತೆ ಕಂಡು ಬರ್ತಾ ಇದೆ. ಕನ್ನಡಿಗರು ಕಾಲರ್ ಎತ್ತೋ ಸಮಯ ಇದೀಗ ಬಂದಾಗಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಬಂದಿರುವ ಒಟ್ಟಾರೆ ಕಲೆಕ್ಷನ್ ನಲ್ಲಿ ಪ್ರಾಫಿಟ್ ಶೇರಿಂಗ್ ಅನ್ನು ಪಡೆದುಕೊಂಡಿದ್ದಾರೆ ಅಂತ ತಿಳಿದು ಬಂದಿದ್ದು, ಇದು 250 ರಿಂದ 300 ಕೋಟಿ ಆಗಿರಬಹುದು ಅನ್ನೋ ಲೆಕ್ಕಾಚಾರ ಇದೆ.
ಮುಂದಿನ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಇವರೇ ಸಹ ನಿರ್ಮಾಪಕರು ಕೂಡ ಆಗಿದ್ದಾರೆ. ಮೂಲಗಳ ಪ್ರಕಾರ 350 ರಿಂದ 400 ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಯಶ್ ಹೊಂದಿದ್ದಾರೆ. ಹಾಸನದಲ್ಲಿ 70ರಿಂದ 80 ಎಕರೆ ವಿಸ್ತೀರ್ಣದ ಫಾರ್ಮ್ ಹೌಸ್ ಕೂಡ ಯಶ್ ಅವರ ಹೆಸರಿನಲ್ಲಿ ಇದೆಯಂತೆ (Total Net Worth).
ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಡೂಪ್ಲೆಕ್ಸ್ ಪ್ಲಾಟ್ ನಲ್ಲಿ ತಮ್ಮ ಕುಟುಂಬದ ಜೊತೆಗೆ ಯಶ್ ಅವರು ಈಗ ಇದಾರಂತೆ. ಸದ್ಯಕ್ಕೆ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಪ್ರತಿಯೊಬ್ಬರ ಚಿತ್ತ ನೆಟ್ಟಿದೆ.
Do You Know Kannada Actor Rocking Star Yash Total Net Worth