ಈಕೆ ಸಿನಿಮಾಗೆ ಅಪಶಕುನ ಎಂದು ಹೀಯಾಳಿಸಿದವರ ಮುಂದೆ ನಟಿ ಕಲ್ಪನಾ ಮೆರೆದಿದ್ದು ಹೇಗೆ ಗೊತ್ತಾ?

ನಟಿ ಕಲ್ಪನಾ (Kannada Actress Kalpana) ಅವರಿಗೆ ನಟನೆಯಲ್ಲಿ ಬಹಳ ಆಸಕ್ತಿ ಇದ್ದ ಕಾರಣ ಅವರ ಚಿಕ್ಕಮ್ಮನ ಬಳಿ ಈ ಒಂದು ಇಂಗಿತವನ್ನು ತೋಡಿಕೊಂಡಿರುತ್ತಾರೆ.

ಸ್ನೇಹಿತರೆ, ಚಿಕ್ಕಂದಿನಿಂದಲೂ ನಟಿ ಕಲ್ಪನಾ (Kannada Actress Kalpana) ಅವರಿಗೆ ನಟನೆಯಲ್ಲಿ ಬಹಳ ಆಸಕ್ತಿ ಇದ್ದ ಕಾರಣ ಅವರ ಚಿಕ್ಕಮ್ಮನ ಬಳಿ ಈ ಒಂದು ಇಂಗಿತವನ್ನು ತೋಡಿಕೊಂಡಿರುತ್ತಾರೆ.

ಅದರಂತೆ ಕಲ್ಪನಾ ಅವರ ಚಿಕ್ಕಮ್ಮನವರಿಗೆ ಸಿನಿರಂಗದಲ್ಲಿ (Cinema Industry) ಕೆಲಸ ಮಾಡುವಂತಹ ಶಶಿಕುಮಾರ್ ಎಂಬುವವರ ಪರಿಚಯ ಇದ್ದ ಕಾರಣ ಅವರ ಬಳಿ ಈ ಒಂದು ಮಾಹಿತಿಯನ್ನು ಹೇಳಿ ಯಾರಿಂದಾದರೂ ಒಂದು ಚಿತ್ರದಲ್ಲಿ ಆಕೆಗೆ ಪಾತ್ರ ಕೊಡಿಸಿ ಎಂದು ಕೇಳಿಕೊಂಡಿರುತ್ತಾರೆ.

ಅದರಂತೆ ಶಶಿಕುಮಾರ್ ನರಸಿಂಹ ರಾಜು ಅವರನ್ನು ಭೇಟಿ ಮಾಡಿ ಕಲ್ಪನಾ ಅವರ ಕುರಿತು ಹೇಳಿದಾಗ ನರಸಿಂಹ ರಾಜು ಕಲ್ಪನಾ ಅವರಿಗೆ

ಈಕೆ ಸಿನಿಮಾಗೆ ಅಪಶಕುನ ಎಂದು ಹೀಯಾಳಿಸಿದವರ ಮುಂದೆ ನಟಿ ಕಲ್ಪನಾ ಮೆರೆದಿದ್ದು ಹೇಗೆ ಗೊತ್ತಾ? - Kannada News

“ನೋಡಮ್ಮ ಸದ್ಯದ ದಿನಗಳಲ್ಲಿ ಕನ್ನಡ ಚಿತ್ರರಂಗದ (Kannada Film Industry) ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ ನಾವೇ ಒಂದೊಂದು ಪಾತ್ರಗಳಿಗೆ ಪರದಾಡುತ್ತಿದ್ದೇವೆ, ಇಂತಹದರಲ್ಲಿ ನೀನು ಅತಿ ಚಿಕ್ಕ ಹುಡುಗಿ ಸಿನಿಮಾ ಇಂಡಸ್ಟ್ರಿಗೆ ಬಂದು ನಿನ್ನ ಓದನ್ನು ಹಾಳು ಮಾಡಿಕೊಳ್ಳಬೇಡ” ಎಂಬ ಸಲಹೆ ನೀಡಿರುತ್ತಾರೆ.

ಅದರಂತೆ ಒಂದು ಅನುಭವ ಇರಲಿ ಎಂಬ ಕಾರಣಕ್ಕೆ ನರಸಿಂಹ ರಾಜು ಅವರು ಕಲ್ಪನಾ ಅವರನ್ನು ಬಳ್ಳಾರಿಯಲ್ಲಿ ಇರುವಂತಹ ಲಲಿತಮ್ಮ ನಾಟಕ ಕಂಪನಿಗೆ ಸೇರಿಸುತ್ತಾರೆ. ಆನಂತರ ಇವರ ಪ್ರತಿಭೆ ಕಂಡು ಲಲಿತಮ್ಮ ನಾಟಕ ಕಂಪನಿಯ ಮ್ಯಾನೇಜರ್ ಮಂಗಳೂರಿನ ಪ್ರಸಿದ್ಧ ನಾಟಕ ಕಂಪನಿಯೊಂದಕ್ಕೆ (Drama Company) ಸೇರಿಸುತ್ತಾರೆ.

ಇಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ನಟಿ ಕಲ್ಪನಾ ಅವರಿಗೆ ಡಾ. ರಾಜಕುಮಾರ್ ಅವರ ‘ಸಾಕು ಮಗಳು’ ಸಿನಿಮಾದಲ್ಲಿ ಉಮಾ ಎಂಬ ಪಾತ್ರ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಕಲ್ಪನಾ ಅವರು ಅತಿ ಅದ್ಭುತವಾಗಿ ನಟನೆ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಾರೆ.

ಆದರೆ ನಕಾರಾತ್ಮಕ ಕಮೆಂಟ್ಗಳೆಂಬುದು ನಟಿ ಕಲ್ಪನಾ ಅವರನ್ನು ಬಿಡಲಿಲ್ಲ, ಹೌದು ಗೆಳೆಯರೇ ಕೆಲ ನಿರ್ಮಾಪಕರು ಕಲ್ಪನಾ ಅವರನ್ನು ನೋಡಲೇನೊ ಬಹಳ ಸುಂದರವಾಗಿಯೇ ಇದ್ದಾಳೆ. ಆದರೆ ಆಕೆಯ ವಾಯ್ಸ್ ಚೆನ್ನಾಗಿಲ್ಲ, ಕನ್ನಡ ಚೆನ್ನಾಗಿಲ್ಲ (Kannada Language) ಕೊಂಕಣಿ ತುಳು ಎಲ್ಲವನ್ನು ಬೆರೆಸಿ ಕನ್ನಡ ಮಾತನಾಡುತ್ತಾಳೆ ಎಂದೆಲ್ಲಾ ಕಾಮೆಂಟ್ ಮಾಡುತ್ತಾರೆ.

Kannada Actress Kalpanaಇದನ್ನು ಬಹಳ ತಮಾಷೆನೀಯವಾಗಿ ತೆಗೆದುಕೊಂಡಂತಹ ಕಲ್ಪನಾ ಅವರು ತಮ್ಮ ಮಲ್ಲಿಗೆ ಅಂಕಣದಲ್ಲಿ ಕನ್ನಡತಿ ಒಬ್ಬರ ಧ್ವನಿಯನ್ನು ಕನ್ನಡತಿಯಿಂದಲೇ ಡಬ್ ಮಾಡಿಸಿದ್ದು ಬಹುಶಃ ನಾನೇ ಮೊದಲೇನೋ, ಎಂದು ಕಲ್ಪನಾ ಎಲ್ಲದರಲ್ಲೂ ಮೊದಲೇ ಬರೆದುಕೊಳ್ಳುತ್ತಾರೆ. (ಸಾಕು ಮಗಳು ಸಿನಿಮಾದಲ್ಲಿ ಇರುವಂತಹ ಧ್ವನಿ ಕಲ್ಪನಾ ಅವರದ್ದಲ್ಲ).

ಇದಾದ ಬಳಿಕ ಪುಟ್ಟಣ್ಣ ಕಣಗಾಲ್ ಅವರ ಪರಿಚಯ ಕಲ್ಪನಾ ಅವರಿಗಾದಾಗ ನಿರ್ಮಾಪಕ ಆರ್‌ಎನ್ ಜೈ ಗೋಪಾಲ್ ಅವರ ಬಳಿ ಕಲ್ಪನಾ ಅವರನ್ನು ಕರೆದುಕೊಂಡು ಹೋಗಿ ನೋಡಿ ಪದ್ಮಿನಿ ಪಿಕ್ಚರ್ಸ್ ನಲ್ಲಿ ಈ ಹುಡುಗಿಗೆ ಅವಕಾಶ ದೊರಕುತ್ತಿಲ್ಲ, ಏನಾದರೂ ಮಾಡಿ ಎಂದು ಕೇಳಿಕೊಳ್ಳುತ್ತಾರೆ, ಇದರಿಂದಾಗಿ ಕಲ್ಪನಾ ಅವರಿಗೆ ಅವಕಾಶಗಳು ಸಿಗಲಾರಂಭವಾಗುತ್ತದೆ.

ಆದರೆ ಕಲ್ಪನಾ ಅವರನ್ನು ತಮ್ಮ ಪದವೀಧರ ಸಿನಿಮಾಗೆ ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಆಕೆಯ ಮನೆಗೆ ಬಂದಾಗ ಕಲ್ಪನಾ ತಮ್ಮ ಚಿಕ್ಕಮ್ಮನಿಂದ ಎಣ್ಣೆ ನೀರನ್ನು ತಲೆಗೆ ಹಾಕಿಸಿಕೊಳ್ಳುತ್ತಿದ್ದರಂತೆ.

ಇದನ್ನು ಕಂಡಂತಹ ನಿರ್ಮಾಪಕರು ಇದು ನಮ್ಮ ಸಿನಿಮಾಗೆ ಅಪಶಕುನವಾಗಬಹುದು, ಈಕೆ ಬೇಡ ಎಂದು ಹೇಳಿದಾಗ ನಿರ್ದೇಶಕರು ಬೇಡ ಒಮ್ಮೆ ಅವಕಾಶ ಕೊಟ್ಟು ಮಾಡಿಸಿ ನೋಡೋಣ ಎಂದು ಹೇಳುತ್ತಾರೆ.

ಇದಾದ ಬಳಿಕ ‘ಇವಳ ಬೆನ್ನು ಸರಿಯಾಗಿ ಇಲ್ಲ, ಗೂನಿದೆ. ನೀವೇ ಗಮನಿಸಿ ನೋಡಿ ಜನ ಈಕೆಯನ್ನು ಒಪ್ಪುತ್ತಾರೆಯೇ? ಹೀರೋಯಿನ್ ಈ ತರ ಇದ್ದುಬಿಟ್ಟರೆ ನಮ್ಮ ಸಿನಿಮಾದ ಗತಿಯೇನು?’ ಎಂದೆಲ್ಲ ಕೊಂಕು ಮಾತುಗಳಿಂದ ಕಲ್ಪನಾ ಅವರ ಬಾಹ್ಯ ರೂಪವನ್ನು ಹೀಯಾಳಿಸಿದರಂತೆ.

ನಿರ್ದೇಶಕ ಶಿವಶಂಕರ್ ಅವರು ಅಯ್ಯೋ ಇದನ್ನೆಲ್ಲಾ ಯಾರು ಗಮನಿಸುತ್ತಾರೆ ಬಿಡಿ ಎಂದು ತಮ್ಮ ಪದವೀಧರ ಸಿನಿಮಾಗೆ ಏನೇ ಆದರೂ ಕಲ್ಪನಾ ಅವರೇ ಹೀರೋಯಿನ್ ಎಂದು ಘೋಷಿಸಿ ತಮ್ಮ ಚಿತ್ರದಲ್ಲಿ ಅಭಿನಯಿಸುವಂತಹ ಅವಕಾಶ ನೀಡಿದರು. ಇಲ್ಲಿಂದ ನಟಿ ಕಲ್ಪನಾ ಅವರ ಸಿನಿ ಪರ್ವ ಸೃಷ್ಟಿಯಾಯಿತು.

Kannada Actress Kalpana Unknown Facts when she enters Cinema Industry

Follow us On

FaceBook Google News

Kannada Actress Kalpana Unknown Facts when she enters Cinema Industry