ಬಂಗಾರದ ಪಂಜರ ಸಿನಿಮಾದಲ್ಲಿ ನಟಿಸಬೇಕಿದ್ದ ನಟಿ ಮಂಜುಳಾ ಫೋಟೋ ಕಸದ ಬುಟ್ಟಿ ಸೇರಿದ್ದು ಏಕೆ?

ನಾಯಕ ನಟಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದರೆ ಒಳ್ಳೆಯ ಯಶಸ್ಸು ಇವಳಿಗಿದೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದಂತಹ ಅಶ್ವಥ್ ಅವರ ನಟಿ ಮಂಜುಳಾ ಫೋಟೋಗಳನ್ನು ಸಂಗ್ರಹಿಸಿ ಕೆಸಿಎನ್ ಗೌಡರಿಗೆ ತೋರಿಸಲು ಬರುತ್ತಾರೆ.

ಇವತ್ತಿಗೂ ಹಳ್ಳಿ ಹುಡುಗಿ ಪಾತ್ರ ನಮ್ಮೆಲ್ಲರ ಕಣ್ಣ ಮುಂದೆ ಬರುವುದಕ್ಕೆ ನಟಿ ಮಂಜುಳಾ (Kannada Actress Manjula) ಅವರ ಅತಿ ಅದ್ಭುತ ಅಭಿನಯವೇ ಕಾರಣ, ಎಂತಹ ಪಾತ್ರ ನೀಡಿದರು, ಲೀಲಾ ಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಿದ್ದಂತಹ ಮಂಜುಳಾ ಅವರು ತಮ್ಮ ಮೊದಲ ಚಿತ್ರಕ್ಕೆ ಆಯ್ಕೆಯಾಗುವ ಮುನ್ನ ಅವರ ಜೀವನದಲ್ಲಿ ಮಹತ್ತರವಾದ ಘಟನೆ ಒಂದು ನಡೆದು ಹೋಗಿತ್ತಂತೆ.

ಹೌದು ಗೆಳೆಯರೇ ಅದು ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಬಂಗಾರದ ಪಂಜರ ಸಿನಿಮಾದ ತಯಾರಿ ಸಮಯ.

ಈ ಚಿತ್ರದ ನಿರ್ದೇಶಕರಾಗಿದ್ದಂತಹ ಕೆ ಸಿ ಎನ್ ಗೌಡರು ತಮ್ಮ ಬಂಗಾರದ ಪಂಜರ ಸಿನಿಮಾದ (Bangaarada Panjara Cinema) ಮೂಲಕ ಯಾವುದಾದರೂ ಹೊಸ ನಾಯಕನಟಿಯನ್ನು ಸಿನಿಮಾ ರಂಗಕ್ಕೆ ಪರಿಚಯಿಸಬೇಕೆಂಬ ನಿಟ್ಟಿನಲ್ಲಿ ಇರುತ್ತಾರೆ.

ಬಂಗಾರದ ಪಂಜರ ಸಿನಿಮಾದಲ್ಲಿ ನಟಿಸಬೇಕಿದ್ದ ನಟಿ ಮಂಜುಳಾ ಫೋಟೋ ಕಸದ ಬುಟ್ಟಿ ಸೇರಿದ್ದು ಏಕೆ? - Kannada News

ಈ ಸಂದರ್ಭದಲ್ಲಿ ಛಾಯಾಗ್ರಹಾಕರಾದ ಅಶ್ವತ್ ಅವರೊಟ್ಟಿಗೆ ಮಾತನಾಡಿ ಸಿನಿಮಾಗೆ ಯಾವುದಾದರು ಹೊಸ ಪ್ರತಿಭೆಯ ಫೋಟೋ ಇದ್ದರೆ ಕೊಡಿ ಎಂದು ಕೇಳಿರುತ್ತಾರೆ.

ಅದರಂತೆ ಅಶ್ವತ್ ಅವರು ಮರುದಿನ ತಮಗೆ ತಿಳಿದಿದ್ದಂತಹ ಹುಡುಗಿ… ಅಂದರೆ ಮಂಜುಳಾ ಅವರ ಫೋಟೋಗಳನ್ನು ಸಂಗ್ರಹಿಸುತ್ತಾರೆ, ಆವರೆಗೂ ಮಂಜುಳಾ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ತಕ್ಕಮಟ್ಟದ ಹೆಸರುವಾಸಿ ಆಗಿರುತ್ತಾರೆ.

ಇವರನ್ನು ನಾಯಕ ನಟಿಯಾಗಿ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ಪರಿಚಯಿಸಿದರೆ ಒಳ್ಳೆಯ ಯಶಸ್ಸು ಇವಳಿಗಿದೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದಂತಹ ಅಶ್ವಥ್ ಅವರ ನಟಿ ಮಂಜುಳಾ ಫೋಟೋಗಳನ್ನು ಸಂಗ್ರಹಿಸಿ ಕೆಸಿಎನ್ ಗೌಡರಿಗೆ ತೋರಿಸಲು ಬರುತ್ತಾರೆ.

ಆದರೆ ಆ ಸಂದರ್ಭದಲ್ಲಿ ಬೇರೆ ಕೆಲಸಗಳಲ್ಲಿ ಕೊಂಚ ಬಿಸಿ ಇದ್ದ ಕಾರಣ ಆ ಫೋಟೋಗಳನ್ನು ಟೇಬಲ್ ಮೇಲೆ ಇಡುವಂತೆ ಹೇಳುತ್ತಾರೆ. ಅದರಂತೆ ಅಶ್ವಥ್ ಫೋಟೋಗಳನ್ನು ಟೇಬಲ್ ಮೇಲೆ ಇಟ್ಟು ಹೊರ ಬಂದಾಗ ಫ್ಯಾನಿನ ಜೋರಾದ ಗಾಳಿಗೆ ಫೋಟೋಗಳೆಲ್ಲವೂ ಹಾರಿ ಹೋಗಿ ಡಸ್ಟ್ ಬಿನ್ಗೆ ಬಿದ್ದಿದ್ದವು.

Kannada Actress Manjulaಇದನ್ನು ಗಮನಿಸಿದಂತಹ ಕೆಸಿಎನ್ ಗೌಡರು ಅಶ್ವತ್ ಅವರನ್ನು ಕರೆದು ಇದೇನು ಸ್ವಾಮಿ ನಾವು ನೋಡುವ ಮುನ್ನವೇ ಫೋಟೋಗಳೆಲ್ಲವೂ ಕಸದ ಡಬ್ಬಿಗೆ ಬಿದ್ದಿವೆ.

ಇದು ಒಳ್ಳೆಯ ಸೂಚನೆಯಲ್ಲ, ಈಕೆ ನಮ್ಮ ಸಿನಿಮಾಗೆ ಬೇಡ ಬಿಡಿ ಎಂದು ಫೋಟೋ ನೋಡೋದೇನೆ ತಿರಸ್ಕರಿಸಿ ಬಿಡುತ್ತಾರೆ. ಆನಂತರ ಬಂಗಾರದ ಪಂಜರ ಪಾತ್ರಕ್ಕೆ ಆರತಿಯವರನ್ನು ಆಯ್ಕೆ ಮಾಡಿಕೊಂಡರು.

ಆದ್ರೆ ಅದೃಷ್ಟ ಎಂಬುದು ಮಂಜುಳಾ ಅವರನ್ನು ಹುಡುಕಿಕೊಂಡು ಬರುತ್ತದೆ, ಅದೇ ವರ್ಷ ಡಾ. ರಾಜಕುಮಾರ್ ಅವರೊಂದಿಗೆ ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಂಡಂತಹ ಮಂಜುಳಾ ಅವರು ಸಂಪತ್ತಿಗೆ ಸವಾಲ್ ಸಿನಿಮಾದ ಮೂಲಕ ಬಜಾರಿ ಬಾಯಿಬಡಿಕೆ ಗಯ್ಯಾಳಿ ಹುಡುಗಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

ಹೌದು ಗೆಳೆಯರೇ ಅಣ್ಣಾವ್ರು ಹಾಗೂ ಮಂಜುಳ ಅವರ ಕಾಂಬಿನೇಷನ್ ನಲ್ಲಿ ತೆರೆಗಪ್ಪಳಿಸಿದ ಸಂಪತ್ತಿಗೆ ಸವಾಲ್ ಸಿನಿಮಾದ ಕುರಿತು ವಿಶೇಷವಾಗಿ ಹೇಳ ಹೊರಟರೆ ಪುಟಗಳೇ ಸಾಲದು.

ಆಗಿನ ಸಿನಿ ಪ್ರೇಕ್ಷಕರ ಮನಸ್ಸಿಗೆ ನಾಟುವಂತಹ ಸಂಭಾಷಣೆ, ಅಭಿನಯ ಹಾಗೂ ಕಥಾ ಹಂದರವನ್ನು ಹೊಂದಿದ್ದಂತಹ ಈ ಸಿನಿಮಾ 1974ರ ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿತು. ಇಲ್ಲಿಂದ ನಟಿ ಮಂಜುಳರ ಸಿನಿ ಪರ್ವವೇ ಸೃಷ್ಟಿಯಾಗುತ್ತದೆ.

Kannada Actress Manjula was supposed to act in the movie Bangaarada Panjara

Follow us On

FaceBook Google News