Pushpa 2 Teaser: ಪುಷ್ಪ: ದಿ ರೂಲ್ ಚಿತ್ರದ ಟೀಸರ್ ಬಿಡುಗಡೆ, ಟೀಸರ್ ವಿಡಿಯೋದಲ್ಲಿ ಅಲ್ಲು ಅರ್ಜುನ್ ಅಬ್ಬರ
Pushpa 2 Teaser (Where is Pushpa): ಇಂದು (ಏಪ್ರಿಲ್ 7) ಅಲ್ಲು ಅರ್ಜುನ್ ಹುಟ್ಟುಹಬ್ಬ (Allu Arjun Birthday). ಈ ಸಂದರ್ಭದಲ್ಲಿ ನಿರ್ಮಾಪಕರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಬಹು ನಿರೀಕ್ಷಿತ ‘ಪುಷ್ಪ: ದಿ ರೂಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ (Pushpa 2 Movie Teaser Released).
‘ಪುಷ್ಪ’ ಡಿಸೆಂಬರ್ 2021 ರಲ್ಲಿ ತೆರೆಕಂಡಿತು ಮತ್ತು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಸಂಚಲನವನ್ನು ಸೃಷ್ಟಿಸಿತು. ಚಿತ್ರವು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು.
ಚಿತ್ರ ತಯಾರಕರು ಭಾಗ 2 ಅನ್ನು ಘೋಷಿಸಿದಾಗಿನಿಂದ, ಅದರ ಬಗ್ಗೆ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಳೆದ ವರ್ಷವಷ್ಟೇ ಚಿತ್ರದ ಶೂಟಿಂಗ್ ಶುರುವಾಗಿದೆ. ಕೆಲವು ದಿನಗಳ ಹಿಂದೆ ಪುಷ್ಪಾ ಜೈಲಿನಿಂದ ಪರಾರಿಯಾಗಿದ್ದಾನೆ ಎಂಬ ಪ್ರಚಾರದ ಟೀಸರ್ ವಿಡಿಯೋ ಹೊರಬಿದ್ದಿತ್ತು. ಪುಷ್ಪಾ ಎಲ್ಲಿ ಎಂಬ ಪ್ರಶ್ನೆ ಉಳಿದಿತ್ತು (Where is Pushpa). ಇದೀಗ ಈ ಟೀಸರ್ ಬಂದಿದ್ದು, ಅದಕ್ಕೆ ಉತ್ತರವೂ ಲಭ್ಯವಾಗಿದೆ.
ಪುಷ್ಪ ಭಾರತದಲ್ಲಿ ಬಹು ನಿರೀಕ್ಷಿತ ಸೀಕ್ವೆಲ್‌ಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಈ ಹ್ಯಾಟ್ರಿಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಯಾವುದೇ ನಿರೀಕ್ಷೆ ಇಲ್ಲದೆ ಹಿಂದಿಯಲ್ಲಿ ಬಿಡುಗಡೆಯಾಗಿ ಅಲ್ಲಿಯೂ ಕಲೆಕ್ಷನ್ ಸುನಾಮಿ ಸೃಷ್ಟಿಸಿತ್ತು. ಹಿಂದಿ ಬೆಲ್ಟ್ ನಲ್ಲಿ 100 ಕೋಟಿ ಗಳಿಕೆಯೊಂದಿಗೆ ಇನ್ನಿಲ್ಲದ ಕ್ರೇಜ್ ಗಳಿಸಿತು. ಪ್ರಸ್ತುತ, ಪುಷ್ಪಾ-2 ಅನ್ನು ಟಾಲಿವುಡ್ ಮತ್ತು ಎಲ್ಲಾ ಇಂಡಸ್ಟ್ರಿಯ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಸದ್ಯ ಚಿತ್ರೀಕರಣ ಹಂತದಲ್ಲಿರುವ ಚಿತ್ರ ಮುಂದಿನ ವರ್ಷ ಮಾರ್ಚ್‌ನಲ್ಲಿ ತೆರೆಕಾಣಲಿದೆ. ಏತನ್ಮಧ್ಯೆ, ಶುಕ್ರವಾರ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಷ್ಪಾ ದಿ ರೂಲ್ ಗ್ಲಿಂಪ್ಸಸ್ ಬಿಡುಗಡೆಯಾಯಿತು.
ಪುಷ್ಪಾ ಸೀಕ್ವೆಲ್ ಶೂಟಿಂಗ್ ಹಂತದಲ್ಲಿರುವಾಗಲೇ ಕೋಟಿಗಟ್ಟಲೆ ವ್ಯಾಪಾರ ಮಾಡಲಿದೆ. ಅನೇಕ ದೊಡ್ಡ ಕಂಪನಿಗಳು ಕೇವಲ ನಾನ್ ಥಿಯೇಟ್ರಿಕಲ್ ರೈಟ್ಸ್‌ಗಾಗಿ ಕೋಟಿಗಳನ್ನು ನೀಡುತ್ತಿವೆ. ಟಾಲಿವುಡ್‌ನ ಪಿಸುಮಾತುಗಳ ಪ್ರಕಾರ, ಹಲವಾರು OTT ಕಂಪನಿಗಳು ಎಲ್ಲಾ ಭಾಷೆಗಳಲ್ಲಿ ಪುಷ್ಪಾ-2 ಡಿಜಿಟಲ್ ಹಕ್ಕುಗಳಿಗಾಗಿ 200 ಕೋಟಿ ರೂ ಆಫರ್ ಮಾಡಿವೆ.
Pushpa 2 Movie Teaser Released for Allu Arjun Birthday Special