ಡಾ.ರಾಜಕುಮಾರ್-ಪ್ರಭಾಕರ್-ರವಿಚಂದ್ರನ್ ಅವರಂತಹ ದೈತ್ಯ ನಟರೊಂದಿಗೆ ತೆರೆ ಹಂಚಿಕೊಂಡು ಇದ್ದಕ್ಕಿದ್ದ ಹಾಗೆ ಕಣ್ಮರೆಯಾದ ಆ ಸ್ಟಾರ್ ನಟಿ ಯಾರು? ಈಗ ಹೇಗಿದ್ದಾರೆ ಗೊತ್ತಾ?
ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರಿಂದ ಹಿಡಿದು ಈಗಿನ ರವಿಚಂದ್ರನ್ ಅವರವರೆಗೂ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅದೊಂದು ಕಾಲದಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಕಪ್ಪು ವರ್ಣದ ಕೃಷ್ಣ ಸುಂದರಿ ಈಗ ಎಲ್ಲಿದ್ದಾರೆ?
ಸ್ನೇಹಿತರೆ, ಸಿನಿ ಬದುಕು ಎಷ್ಟು ಬೇಗ ನಮ್ಮನ್ನು ಯಶಸ್ಸಿನ ಉತ್ತುಂಗದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತೋ ಅಷ್ಟೇ ಬೇಗ ನಮ್ಮನ್ನು ಕೆಳಗೆ ತಂದು ತೋರಿಸಿಬಿಡುತ್ತದೆ. ಹೌದು ಕೆಲವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಿನಿಮಾ ಬದುಕಿನಲ್ಲಿ ಯಶಸ್ಸು ಕಾಣಲಾಗದೆ ವಾಪಸ್ ಹಿಂದಿರುಗಿ ಸಿನಿಮಾದ ಸಹವಾಸವೇ ಬೇಡ ಎಂದು ಹೊರಟು ಹೋಗುತ್ತಾರೆ.
ಎಲ್ಲೋ ಬೆರಳೆಣಿಕೆಯಷ್ಟು ಜನ ಮಾತ್ರ ತಾವು ಕಂಡಂತಹ ಕನಸನ್ನು ನನಸಾಗಿ ಕೊಳ್ಳುವ ಸಲುವಾಗಿ ಎಷ್ಟೇ ಅಡೆತಡೆಗಳು ಬಂದರೂ ಎದುರಿಸಿ ಅತಿಯಾದ ಪರಿಶ್ರಮದ ಮೂಲಕ ಉತ್ತುಂಗದ ಶಿಖರವನ್ನು ಏರುತ್ತಾರೆ. ಇಂತಹ ಸ್ಟಾರ್ ನಟ ನಟಿಯರು ಕನ್ನಡ ಸಿನಿಮಾ ರಂಗದಲ್ಲಿ ಹಾಗೂ ಇತರೆ ಭಾಷೆಯ ಸಿನಿಮಾ ರಂಗದಲ್ಲಿ ಸಾಕಷ್ಟು ಜನ ಇದ್ದಾರೆ.
ಅದರಂತೆ ನಾವಿವತ್ತು ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರಿಂದ ಹಿಡಿದು ಈಗಿನ ರವಿಚಂದ್ರನ್ ಅವರವರೆಗೂ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅದೊಂದು ಕಾಲದಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಕಪ್ಪು ವರ್ಣದ ಕೃಷ್ಣ ಸುಂದರಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಆ ನಟಿ ಯಾರು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಆಕೆ ಮತ್ಯಾರೂ ಅಲ್ಲ ಡಾಕ್ಟರ್ ರಾಜಕುಮಾರ್ ಗುರಿ ಸಿನಿಮಾದಲ್ಲಿ ತರೆ ಹಂಚಿಕೊಂಡು ಪ್ರಭಾಕರ್ ಅವರೊಂದಿಗೆ ಟೈಗರ್ ಸಿನಿಮಾದ ಮೂಲಕ ತಮ್ಮ ಮನೋಜ್ಞ ಅಭಿನಯವನ್ನು ತೆರೆಯ ಮೇಲೆ ತೆರೆದಿಟ್ಟು ಅದೆಷ್ಟೋ ಕನ್ನಡಿಗರ ಹೃದಯ ಗೆದ್ದಂತಹ ಅರ್ಚನಾ ಅವರು.
ಹೌದು ಗೆಳೆಯರೇ ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದಂತಹ ಒಂದು ಮುತ್ತಿನ ಕಥೆ ಸಿನಿಮಾಗೆ ಸಾಕಷ್ಟು ನಾಯಕಿಯರನ್ನು ತೋರಿಸಿದರು ಕೂಡ ಶಂಕ್ರಣ್ಣ ಅರ್ಚನಾ ಅವರೇ ನನ್ನ ಸಿನಿಮಾಗೆ ನಾಯಕಿ ಆಗಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಅಷ್ಟರ ಮಟ್ಟಿಗೆ ಇವರ ಅತ್ಯದ್ಭುತ ಅಭಿನಯ ಹೆಸರುವಾಸಿಯಾಗಿತ್ತು.
ಹೀಗೆ ಸಿನಿ ಬದುಕಿನ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ತಮ್ಮ ಸಂಪೂರ್ಣ ಗಮನವನ್ನು ವೈಯಕ್ತಿಕ ಜೀವನದತ್ತ ಹರಿಸಿದರು. ಆನಂತರ ತೆಲುಗು ಹಾಗೂ ತಮಿಳು ಕಿರುತೆರೆ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ಇಂದಿಗೂ ಬಣ್ಣ ಹಚ್ಚುತ್ತಲಿದ್ದಾರೆ.
Star Actress Archana who Shares Screen With Dr RajKumar, Tiger Prabhakar and Ravichandran
Follow us On
Google News |