ದರ್ಶನ್ ದೋಷಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ: ಸುಮಲತಾ ಅಂಬರೀಶ್

Story Highlights

ದರ್ಶನ್ ಪತ್ನಿ ನನ್ನ ಸಂಪರ್ಕದಲ್ಲಿದ್ದಾರೆ. ದರ್ಶನ್ ಆರೋಗ್ಯ ಸುಧಾರಿಸಬೇಕು. ದರ್ಶನ್ ಮುಂದೆ ಹಲವು ಸವಾಲುಗಳಿವೆ. ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ.

ಮಂಡ್ಯ (Mandya): ಬಿಜೆಪಿ ಬಲವರ್ಧನೆಗೆ ಶ್ರಮಿಸಲಿದ್ದು, ಜನವರಿ ನಂತರ ಸಂಪೂರ್ಣವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಮೋದಿ ಮಾತಿಗೆ ಬೆಲೆ ಕೊಟ್ಟು ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೂರ ಉಳಿದಿದ್ದೆ. ಸದ್ಯ ಕಾಲು ನೋವಿಗೆ ಚಿಕಿತ್ಸೆ ಪಡೆದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ.

ಮಂಡ್ಯದಲ್ಲಿ ಬಿಜೆಪಿಯನ್ನು ಬಲಪಡಿಸುತ್ತೇನೆ ಎಂದು ಪಕ್ಷದ ಹೈಕಮಾಂಡ್‌ಗೆ ಹೇಳಿದ್ದೇನೆ. ನಟ ದರ್ಶನ್ ಪತ್ನಿ (Actor Darshan Wife Vijayalakshmi) ನನ್ನ ಸಂಪರ್ಕದಲ್ಲಿದ್ದಾರೆ. ದರ್ಶನ್ ಆರೋಗ್ಯ ಸುಧಾರಿಸಬೇಕು. ದರ್ಶನ್ ಮುಂದೆ ಹಲವು ಸವಾಲುಗಳಿವೆ. ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ.

ನಾನು ಬದುಕಿರುವವರೆಗೂ ದರ್ಶನ್ (Actor Darshan) ನನ್ನ ಮಗನಿದ್ದಂತೆ, ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಸತ್ಯ ಹೊರಬರಲಿ, ದರ್ಶನ್ ನಿರಪರಾಧಿಯಾಗಲಿ ಎಂದು ಹಾರೈಸುತ್ತೇನೆ ಎಂದರು.

Sumalatha Ambareesh Talks About Actor Darshan

Related Stories