ಟಾಲಿವುಡ್ ಹಿರಿಯ ನಟ ಪೃಥ್ವಿ ರಾಜ್ ಆಸ್ಪತ್ರೆಗೆ ದಾಖಲು
Tollywood Actor Prudhvi Raj : ಟಾಲಿವುಡ್ ಹಿರಿಯ ನಟ, ಪ್ರಸಿದ್ಧ ಹಾಸ್ಯನಟ ಪೃಥ್ವಿ ರಾಜ್ ಅವರು ಅಸ್ವಸ್ಥ, ಹೈಬಿಪಿ ಕಾರಣದಿಂದ ಆಸ್ಪತ್ರೆಗೆ ದಾಖಲು
- ಟಾಲಿವುಡ್ ಹಿರಿಯ ನಟ ಪೃಥ್ವಿ ರಾಜ್ ಆಸ್ಪತ್ರೆಗೆ ದಾಖಲು.
- ಹೈ ಬಿಪಿ ಸಮಸ್ಯೆಯಿಂದಾಗಿ ಅನಾರೋಗ್ಯ.
- ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ.
ಟಾಲಿವುಡ್ ಹಿರಿಯ ನಟ ಮತ್ತು ಪ್ರಸಿದ್ಧ ಹಾಸ್ಯನಟ ಪೃಥ್ವಿ ರಾಜ್ (Tollywood Actor Prudhvi Raj) ಅವರಿಗೆ ಅನಾರೋಗ್ಯ ಉಂಟಾಗಿದ್ದು, ಹೈ ಬಿಪಿ ಸಮಸ್ಯೆಯಿಂದಾಗಿ ಕುಟುಂಬಸ್ಥರು ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆ ನಂತರ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಸಿನಿಮಾ ಈವೆಂಟ್‌ನಲ್ಲಿ ವಿವಾದಾತ್ಮಕ ಹೇಳಿಕೆ
ಇತ್ತೀಚೆಗೆ, ನಟ ಪೃಥ್ವಿ ರಾಜ್ ಲೈಲಾ ಚಲನಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಭಾಗವಹಿಸಿ, ತಮ್ಮ ಭಾಷಣದಲ್ಲಿ ವಿವಾದ ಹುಟ್ಟುಹಾಕಿದರು. ಅವರು ಚಲನಚಿತ್ರದ ಒಂದು ದೃಶ್ಯವನ್ನು ವಿವರಿಸುವ ವೇಳೆ, 2019ರ ವಿಧಾನಸಭಾ ಚುನಾವಣೆಯ ಪರೋಕ್ಷ ಉಲ್ಲೇಖ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದರು. ಇದು ವಾದಪ್ರತಿವಾದಕ್ಕೆ ಕಾರಣವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಗುರಿಯಾದರು.
ಅಸ್ಪತ್ರೆಗೆ ದಾಖಲು
ನಟ ಪೃಥ್ವಿ ರಾಜ್ ಅವರು ಈ ವಿವಾದದ ಕೆಲವೇ ದಿನಗಳ ಬಳಿಕ ಅನಾರೋಗ್ಯ ಅನುಭವಿಸಿ ಆಸ್ಪತ್ರೆಗೆ ದಾಖಲಾದ್ದರಿಂದ, ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ, ಈಗ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Tollywood Actor Prudhvi Raj Hospitalized Due to Health Issues
Our Whatsapp Channel is Live Now 👇