ಉಪೇಂದ್ರ ಹಾಗೂ ಶಿವಣ್ಣ ಬೇಡವೆಂದು ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ಕಿಚ್ಚ ಮಾಡಿ ದೊಡ್ಡ ಚರಿತ್ರೆ ಸೃಷ್ಟಿಸಿ ಬಿಟ್ರು, ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಉಪೇಂದ್ರ ಹಾಗೂ ಶಿವರಾಜಕುಮಾರ್ ರಂತಹ ದಿಗ್ಗಜ ನಟರುಗಳೆ ಬೇಡ ಎಂದು ರಿಜೆಕ್ಟ್ ಮಾಡಿದಂತಹ ಸಿನಿಮಾ ಒಂದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾಡಿ ಬಹುದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರೆ.

ಸ್ನೇಹಿತರೆ, ಸಿನಿಮಾ ರಂಗ ಎಂದ ಮೇಲೆ ಈ ರೀತಿಯಾದಂತಹ ಬದಲಾವಣೆಗಳು ಆಗುವುದು ಸರ್ವೇಸಾಮಾನ್ಯ. ನಿರ್ದೇಶಕರು ಯಾವುದೋ ನಟನನ್ನು ತಮ್ಮ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಿರುತ್ತಾರೆ. ಆದರೆ ಕೆಲವು ಕಾರಣಾಂತರಗಳಿಂದಾಗಿ ಆ ಒಂದು ಸಿನಿಮಾದಲ್ಲಿ ಆ ಪ್ರತ್ಯೇಕ ನಟನಿಗೆ ಅಭಿನಯಿಸಲು ಅವಕಾಶ ಕೂಡಿ ಬರುವುದಿಲ್ಲ. ಈ ಕಾರಣದಿಂದ ಮತ್ತೊಂದು ನಟ ಆ ಪಾತ್ರಕ್ಕೆ ಜೀವ ತುಂಬಿ ಬಹುದೊಡ್ಡ ಮಟ್ಟದ ಪ್ರಖ್ಯಾತಿಯನ್ನು ಪಡೆದುಕೊಂಡಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟಿದೆ.

ಉಪೇಂದ್ರ (Upendra) ಹಾಗೂ ಶಿವರಾಜಕುಮಾರ್ (Shiva Rajkumar) ರಂತಹ ದಿಗ್ಗಜ ನಟರುಗಳೆ ಬೇಡ ಎಂದು ರಿಜೆಕ್ಟ್ ಮಾಡಿದಂತಹ ಸಿನಿಮಾ ಒಂದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಮಾಡಿ ಬಹುದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರೆ.

Pushpa-2 Movie: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಪುಷ್ಪ-2.. ಕೆಜಿಎಫ್ ಮೀರಿಸಲು ಸಾಧ್ಯವಿಲ್ಲ ಅಂತಾರೆ ಅಭಿಮಾನಿಗಳು!

ಉಪೇಂದ್ರ ಹಾಗೂ ಶಿವಣ್ಣ ಬೇಡವೆಂದು ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ಕಿಚ್ಚ ಮಾಡಿ ದೊಡ್ಡ ಚರಿತ್ರೆ ಸೃಷ್ಟಿಸಿ ಬಿಟ್ರು, ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ? - Kannada News

ಅಷ್ಟಕ್ಕೂ ಆ ಸಿನಿಮಾ ಯಾವುದು? ಅದನ್ನು ಉಪ್ಪಿ ಹಾಗೂ ಶಿವಣ್ಣ ರಿಜೆಕ್ಟ್ ಮಾಡಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಇತ್ತೀಚಿಗಷ್ಟೇ ಉಪೇಂದ್ರ, ಶಿವಣ್ಣ ಹಾಗೂ ಕಿಚ್ಚ ಸುದೀಪ್ ಕಬ್ಜಾ ಸಿನಿಮಾದಲ್ಲಿ ಒಟ್ಟಿಗೆ ತ್ರಿಮೂರ್ತಿಗಳಂತೆ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಮೂವರಿಗೂ ಸಂಬಂಧ ಪಟ್ಟಂತಹ ಒಂದು ವಿಚಾರ ಹಲವಾರು ವರ್ಷಗಳ ಬಳಿಕ ರಿವೀಲ್ ಆಗಿದ್ದು, ಸುದೀಪ್ ಅಭಿನಯಿಸಿ ಬಹುದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಂಡಂತಹ ಸಿನಿಮಾ ಹುಚ್ಚ ದಲ್ಲಿ ಮೊದಲು ಶಿವಣ್ಣ ಅಭಿನಯಿಸುವ ಅವಕಾಶವನ್ನು ಪಡೆದುಕೊಂಡಿದ್ದರಂತೆ..

ಹೌದು ಗೆಳೆಯರೇ ಬೇರೆ ಭಾಷೆಯಲ್ಲಿ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದ ಕಾರಣ ನಿರ್ದೇಶಕರು ಇದನ್ನು ಕನ್ನಡಕ್ಕೆ ರೀಮೇಕ್ ಮಾಡಬೇಕು ಎಂಬ ಯೋಚನೆಯಲ್ಲಿ ಇದ್ದಾಗ… ಮೊದಮೊದಲು ಶಿವಣ್ಣನಿಗೆ ಈ ಒಂದು ಸಿನಿಮಾ ಸೂಕ್ತವಾಗುತ್ತದೆ ಎಂದು ಶಿವಣ್ಣನ ಮನೆಗೆ ಹೋಗಿ ಸಂಪೂರ್ಣ ಕಥೆಯನ್ನು ವಿವರಿಸಿದಾಗ ಕತೆಯನ್ನು ಕೇಳುತ್ತಲೇ ಶಿವಣ್ಣ ಹುಚ್ಚನ ಪಾತ್ರದಲ್ಲಿ ನಾನು ಅಭಿನಯಿಸುವುದಿಲ್ಲ ಎನ್ನುತ್ತಾರೆ.

Kiccha Sudeep Hutcha Movie

ಅದರಂತೆ ಗೀತಕ್ಕ ಕೂಡ ಸಿನಿಮಾ ವನ್ನು ರಿಜೆಕ್ಟ್ ಮಾಡಿದರು. ಆನಂತರ ಉಪೇಂದ್ರ ಅವರಿಗೆ ಕಥೆ ಹೇಳಿದಾಗ ಉಪ್ಪಿ ಸಿನಿಮಾದ ಕಥೆಯನ್ನು ಮೆಚ್ಚಿ ಮಾಡುತ್ತೇನೆ ಎಂದು ತಿಳಿಸಿದರು.

ಆದರೆ ಸಿನಿಮಾದ ಶೀರ್ಷಿಕೆ ಹುಚ್ಚ ಎಂದು ನಿಗದಿಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದ ಹಾಗೆ ಉಪೇಂದ್ರ ಅವರು ಕೂಡ ಈ ಸಿನಿಮಾದಲ್ಲಿ ನಾನು ನಟಿಸಲ್ಲ ಎಂದು ಹೇಳಿಬಿಡುತ್ತಾರೆ. ಕೊನೆಗೆ ಕಿಚ್ಚ ಸುದೀಪ್ ಅವರು ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಂತಹ ಸಂದರ್ಭದಲ್ಲಿ ಆ ಅವಕಾಶ ಸಿಕ್ಕಿದೆ.

ಹುಚ್ಚ ಸಿನಿಮಾ ಕಿಚ್ಚನ ಪಾಲಾಗುತ್ತದೆ.. ಸಿನಿಮಾ ಬಿಡುಗಡೆಗೊಂಡ ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಸೂಪರ್ ಡೂಪರ್ ಹಿಟ್ ಆದ ಸಿನಿಮಾ ಇದು ಎಂದರೆ ತಪ್ಪಾಗಲಾರದು. ನಿಮ್ಮ ಪ್ರಕಾರ ಈ ಒಂದು ಸಿನಿಮಾದಲ್ಲಿ ಯಾವ ನಟ ಅಭಿನಯಿಸಿದ್ದರೆ ಸೂಕ್ತವಾಗಿರುತ್ತಿತ್ತು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.

Upendra and Shiva Rajkumar rejected the movie created a big history by Kiccha Sudeep

Follow us On

FaceBook Google News

Upendra and Shiva Rajkumar rejected the movie created a big history by Kiccha Sudeep

Read More News Today