ಪ್ರಾಣ ಇರೋತನಕ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡೋಲ್ಲ ಎಂದು ಶಪಥ ಮಾಡಿದ್ದ ನಟ ಭಯಂಕರ ವಜ್ರಮುನಿ! ಕಾರಣ ಏನು ಗೊತ್ತಾ?
ಸ್ನೇಹಿತರೆ, ಕಣ್ಣಂಚಿನ ಅಭಿನಯದ ಮೂಲಕವೇ ಕಲಾವಿದನನ್ನು ನಡುಗುವಂತೆ ಮಾಡುತ್ತಿದ್ದ ವಜ್ರಮುನಿ (Actor Vajramuni) ಅವರ ಅಭಿನಯಕ್ಕೆ ಸರಿಸಾಟಿ ನೀಡುವಂತಹ ನಟ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ (Kannada Film News) ಹುಟ್ಟಿಲ್ಲ ಮತ್ತೆಂದು ಹುಟ್ಟೋದು ಇಲ್ಲ ಎಂದರೆ ತಪ್ಪಾಗಲಾರದು.
ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ನಟಭಯಂಕರ ವಜ್ರಮುನಿ ಅವರು ಕನ್ನಡ ಸಿನಿಮಾ ರಂಗದಲ್ಲಿ (Kannada Movies) ಪಡೆಯುತ್ತಿದ್ದ ಸಂಭಾವನೆ ಎಷ್ಟು?
ಅವಕಾಶಗಳ ಕೋಡಿಯೇ ಹರಿದರು ವಜ್ರಮುನಿ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸದೇ ಇರಲು ಕಾರಣವೇನು? ಎಂಬ ಎಲ್ಲ ಇಂಟರೆಸ್ಟಿಂಗ್ ಮಾಹಿತಿಯನ್ನು (Interesting Facts) ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಾಮಾನ್ಯವಾಗಿ ಸದಾನಂದ ಸಾಗರ ಎಂಬ ಹೆಸರು ಕೇಳಿದರೆ ಯಾರಿಗೂ ಅಷ್ಟು ಬೇಗ ಆತ ಅದೆಂತ ಪ್ರಖ್ಯಾತ ಕಲಾವಿದ ಎಂಬುದರ ಅರಿವಾಗುವುದಿಲ್ಲ.
ಆದರೆ ವಜ್ರಮುನಿ ಎನ್ನುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಅವರ ಭಯಾನಕ ಕಣ್ಣೋಟ, ಕಂಚಿನ ಕಂಠ, ಗರ್ಜಿಸಿ ಎದುರಿಗಿರುವವರನ್ನು ಬೆಚ್ಚಿ ಬೀಳುವಂತೆ ಮಾಡುತ್ತಿದ್ದ ನಟನ ಪರಿಚಯವಾಗಿ ಬಿಡುತ್ತದೆ.
ಇನ್ನು ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ವಜ್ರಮುನಿ ಅವರು ಹೇಗೆ ತೆರೆಯ ಮೇಲೆ ಅಬ್ಬರಿಸಿ ಬೊಬ್ಬೆರಿಯುತ್ತಿದ್ದರೋ ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ದವಾಗಿದಂತಹ ನಟ.
ಇನ್ನು ಚಿಕ್ಕಂದಿನಿಂದಲೂ ಕಲೆಯ ಮೇಲೆ ಅಗಾಧವಾದ ಆಸಕ್ತಿಯನ್ನು ಹೊಂದಿದಂತಹ ವಜ್ರಮುನಿಯವರು ಸೆಂಟ್ರಲ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ ಸಾಕಷ್ಟು ನಾಟಕಗಳಲ್ಲಿ ಭಾಗವಹಿಸ ತೊಡಗಿದರು.
ತಮ್ಮ ಊರಿನಲ್ಲಿ ನಡೆದ ಪ್ರಚಂಡ ರಾವಣ ನಾಟಕದಲ್ಲಿ ಅಭಿನಯಿಸುವ ಮೂಲಕ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡಂತಹ ವಜ್ರಮುನಿ ಅವರಿಗೆ ಸಿನಿಮಾಗಳ ಅವಕಾಶ ಕೈಬೀಸಿ ಕರೆದವು.
ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ವಜ್ರಮುನಿ ಅವರು ತಮ್ಮ ಕೊನೆ ದಿನಗಳವರೆಗೂ ಕನ್ನಡ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟನಾಗಿ ಮೆರೆದರು.
ಇನ್ನು ಹಿಂದಿ ತೆಲುಗು ತಮಿಳು ಭಾಷೆಯ ಸಿನಿಮಾಗಳು ವಜ್ರಮುನಿ ಅವರಿಗೆ ಒಳ್ಳೊಳ್ಳೆ ಆಫರ್ಗಳನ್ನು ನೀಡಿ ಕರೆದರೂ ಸಹ ಕನ್ನಡ ನನಗೆ ಅನ್ನ ನೀಡಿದೆ ಅದಕ್ಕೆ ನಾನೆಂದು ದ್ರೋಹ ಬಗೆಯುವುದಿಲ್ಲ ಎನ್ನುವ ಮೂಲಕ ಕನ್ನಡದ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ ವಜ್ರಮುನಿ ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಬಯಕೆಯನ್ನು ವ್ಯಕ್ತಪಡಿಸಲಿಲ್ಲ.
ಇನ್ನು ಆಗಿನ ಸ್ಟಾರ್ ಕಲಾವಿದರಷ್ಟೇ ಬೇಡಿಕೆಯನ್ನು ಹೊಂದಿದ್ದಂತಹ ವಜ್ರಮುನಿ ಅವರಿಗೆ ಒಂದು ಸಿನಿಮಾದಲ್ಲಿ ಅಭಿನಯಿಸಲು ಹತ್ತರಿಂದ ಐವತ್ತು ಸಾವಿರ ರುಪಾಯಿ ಸಂಭಾವನೆಯನ್ನು ನೀಡಲಾಗುತ್ತಿತ್ತಂತೆ. ಆಗಿನ ಹತ್ತು ಸಾವಿರ ಈಗಿನ ಒಂದು ಲಕ್ಷಕ್ಕೆ ಸಮ.
Why Actor Vajramuni not acted in other language than Kannada
Our Whatsapp Channel is Live Now 👇