Sandalwood NewsBangalore News
ಯಶ್ ‘ಟಾಕ್ಸಿಕ್’ ಸಿನಿಮಾ ಬಜೆಟ್ ಶೇ.40 ಏರಿಕೆ, ಇಂಗ್ಲಿಷ್ ಭಾಷೆಯಲ್ಲೂ ಬಿಡುಗಡೆ
‘ಕೆಜಿಎಫ್’ ಖ್ಯಾತಿಯ ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿದೆ. ಈ ನಿರ್ಧಾರದಿಂದ ಬಜೆಟ್ ಶೇ.40 ಹೆಚ್ಚಾಗಿದೆ ಎಂದು ವರದಿ.
- ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಕನ್ನಡ, ಇಂಗ್ಲಿಷ್‌ನಲ್ಲಿ ಒಂದೇ ಸಮಯದಲ್ಲಿ
- ಈ ನಿರ್ಧಾರದಿಂದ ಬಜೆಟ್ ಶೇ.40 ಏರಿಕೆ
- ಹಾಲಿವುಡ್ ತಂತ್ರಜ್ಞರ ಜತೆ ಮಾತುಕತೆ ನಡೆಸಿರುವ ಯಶ್
‘ಕೆಜಿಎಫ್’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಯಶ್ (Actor Yash), ‘ಟಾಕ್ಸಿಕ್’ ಚಿತ್ರದೊಂದಿಗೆ ಹೊಸ ಪ್ಲಾನ್ ಮಾಡಿದ್ದಾರೆ. ಈ ಚಿತ್ರವನ್ನು ಕನ್ನಡ ಜೊತೆಗೆ ಇಂಗ್ಲಿಷ್‌ನಲ್ಲೂ (Kannada and English) ಶೂಟ್ ಮಾಡಲಾಗುತ್ತಿದೆ. ಅದೇ ಭಾಷೆಯಲ್ಲಿ ಡಬ್ ಮಾಡದೆ, ವಿಭಿನ್ನ ನಿರೂಪಣೆಗೆ ತಂಡ ಮುಂದಾಗಿದೆ.
ಈ ನಿರ್ಧಾರದಿಂದ ಚಿತ್ರದ ಬಜೆಟ್ ಶೇ.40 ಹೆಚ್ಚಾಗಿದೆ. ಆದರೆ, ನಿರ್ಮಾಣ ಸಂಸ್ಥೆ ಇದಕ್ಕೆ ಸಿದ್ಧವಾಗಿದೆ. ಈಗಾಗಲೇ ಬೆಂಗಳೂರು, ಗೋವಾ ಮುಂತಾದ ಸ್ಥಳಗಳಲ್ಲಿ ಶೂಟಿಂಗ್ ನಡೆದಿದೆ. ಹಾಲಿವುಡ್ (Hollywood) ನಿರ್ಮಾಣ ಸಂಸ್ಥೆಗಳ ಜತೆ ಯಶ್ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ನಿರ್ಧಾರ ಯಶ್ ಅವರದ್ದೇ ಎಂಬ ಮಾತುಗಳು ಕೇಳಿಬರುತ್ತಿವೆ.
Yash Toxic Movie Takes a Bold Step with Dual-Language Shoot
English Summary▼
Our Whatsapp Channel is Live Now 👇