ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ? ಚೆಕ್ ಮಾಡಿಕೊಳ್ಳಿ; ಮುಂದಾಗುವ ಸಮಸ್ಯೆ ತಪ್ಪಿಸಿ

Story Highlights

ಈಗ ಡ್ಯುಯಲ್ ಸಿಮ್ ಕಾರ್ಡ್ (dual sim card) ಬಳಸಬಹುದಾದ ಮೊಬೈಲ್ ಇರುವುದರಿಂದ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಇಟ್ಟುಕೊಂಡಿರುತ್ತಾರೆ.

ಇಂದು ಸ್ಮಾರ್ಟ್ ಫೋನ್ (smartphone) ಬಳಸದೆ ಇರುವವರು ಯಾರು ಇಲ್ಲ, ಸ್ಮಾರ್ಟ್ ಫೋನ್ ಮಾತ್ರವಲ್ಲ ಸಾಮಾನ್ಯ ಫೋನ್ ಬಳಕೆ ಮಾಡುವುದಿದ್ದರೂ ಕೂಡ ಅದಕ್ಕೆ ಒಂದು ಸಿಮ್ ಕಾರ್ಡ್ (SIM card) ಅಂತೂ ಬೇಕೇ ಬೇಕು.

ಮೊದಲೆಲ್ಲಾ ಒಂದು ಫೋನಿಗೆ ಒಂದು ಸಿಮ್ ಕಾರ್ಡ್ ಮಾತ್ರ ಹಾಕಲು ಅವಕಾಶವಿತ್ತು. ಈಗ ಡ್ಯುಯಲ್ ಸಿಮ್ ಕಾರ್ಡ್ (dual sim card) ಬಳಸಬಹುದಾದ ಮೊಬೈಲ್ ಇರುವುದರಿಂದ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಇಟ್ಟುಕೊಂಡಿರುತ್ತಾರೆ.

ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ (Aadhaar card) ಬಳಸಿ ಸುಮಾರು ಆರು ಸಿಮ್ ಕಾರ್ಡ್ ಗಳ ವರೆಗೆ ಖರೀದಿ ಮಾಡಬಹುದು, ಆದರೆ ಇಂತಹ ಸಂದರ್ಭದಲ್ಲಿ ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿ ಮಾಡಿ ದುರುಪಯೋಗ ಪಡಿಸಿಕೊಳ್ಳಬಹುದು. ಇದೇ ಕಾರಣಕ್ಕೆ ಟೆಲಿಕಾಂ ಕಂಪನಿಗಳು ಸಿಮ್ ಕಾರ್ಡ್ ನಿಯಮವನ್ನು ಕಟ್ಟುನಿಟ್ಟುಗೊಳಿಸಿವೆ.

ಫ್ಲಿಪ್‌ಕಾರ್ಟ್‌ ಇಯರ್ ಎಂಡ್ ಸೇಲ್‌; iPhone, Samsung ಫೋನ್‌ಗಳ ಮೇಲೆ ₹10,000 ರಿಯಾಯಿತಿ

ಒಬ್ಬರದೇ ಹೆಸರಿನಲ್ಲಿ ಬೇರೆ ಬೇರೆ ಸಿಮ್ ಕಾರ್ಡ್ ಖರೀದಿ ಮಾಡಿ ಬಳಕೆ!

ಯಾರಾದ್ರೂ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದುಕೊಂಡಿದ್ದಾರೆಯೇ ಮೊದಲು ಎಚ್ಚೆತ್ತುಕೊಳ್ಳಿ. ಯಾರಿಗೂ ಕೂಡ ನಿಮ್ಮ ಪರವಾಗಿ ಹೊಸ ಸಿಮ್ ಕಾರ್ಡ್ ಖರೀದಿ ಮಾಡಲು ಅವಕಾಶ ಮಾಡಿಕೊಡಬೇಡಿ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ದುರುಪಯೋಗ ಜಾಸ್ತಿಯಾಗುತ್ತಿದೆ, ಇದರಿಂದ ಸೈಬರ್ ಕ್ರೈಂ (cyber crime) ಕೂಡ ಹೆಚ್ಚುತ್ತಿದೆ.

ಸಿಮ್ ಕಾರ್ಡ್ ದುರ್ಬಳಕೆಗೆ ತಡೆ!

Sim Cardಸಿಮ್ ಕಾರ್ಡ್ ನಲ್ಲಿ ನಡೆಯುತ್ತಿರುವ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ದೂರ ಸಂಪರ್ಕ ಇಲಾಖೆ ಹೊಸ ವೆಬ್ ಪೋರ್ಟಲ್ ಒಂದನ್ನು ಆರಂಭಿಸಿದೆ. ಈ ವೆಬ್ ಸೈಟ್ (website) ಮೂಲಕ ಒಬ್ಬರು ಎಷ್ಟು ಸಿಮ್ ಕಾರ್ಡ್ ಬಳಸುತ್ತಿದ್ದಾರೆ ಹಾಗೂ ಯಾರ ಹೆಸರಿನಲ್ಲಿ ಸಿಮ್ ಕಾರ್ಡ್ ನೀಡಲಾಗಿದೆ ಮೊದಲಾದ ಮಾಹಿತಿಗಳನ್ನ ತಿಳಿದುಕೊಳ್ಳಬಹುದು.

Telecom analytics for fraud management and consumer protection ( TAFCOP) ಇದು ವೆಬ್ ಪೋರ್ಟಲ್ ಆಗಿದ್ದು ಗ್ರಾಹಕರು ತಮ್ಮ ಸಿಮ್ ಕಾರ್ಡ್ ಬಗೆಗಿನ ಮಾಹಿತಿ ಪಡೆದುಕೊಳ್ಳಲು ಬಳಸಬಹುದು.

ಕ್ರಿಸ್‌ಮಸ್ ಸೇಲ್‌! ₹10 ಸಾವಿರಕ್ಕೆ ಥಿಯೇಟರ್‌ ಎಫೆಕ್ಟ್ ನೀಡೋ ಸ್ಮಾರ್ಟ್ ಟಿವಿ ಖರೀದಿಸಿ

ಆನ್ಲೈನ್ ಮೂಲಕವೇ ನಕಲಿ ಸಂಖ್ಯೆಯನ್ನು ಬ್ಲಾಕ್ ಮಾಡಿ! (How to block fake sim)

https://www.sancharsaathi.gov.in/ ಈ ವೆಬ್ ಸೈಟ್ ನಲ್ಲಿ ನೀವು ಮುಖಪುಟ ದ ಗುರುತಿನ ಮಾಹಿತಿ ನೀಡಲು ಸೂಚಿಸುತ್ತದೆ.

*ಇನ್ಪುಟ್ ವಿಭಾಗದಲ್ಲಿ ಓಟಿಪಿ ಕಳುಹಿಸಲು ಅವಕಾಶವಿರುತ್ತದೆ ಅದನ್ನು ನೀವು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು ನಂತರ ಅದನ್ನು ನಮೂದಿಸಬೇಕು.

*ಈಗ ಮೊಬೈಲ್ ಸಂಖ್ಯೆಯ ಪಟ್ಟಿ ತೆರೆದುಕೊಳ್ಳುತ್ತದೆ.

*ಈಗ ನೀವು ಈ ಸಂಖ್ಯೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಬಳಕೆಯಲ್ಲಿ ಇಲ್ಲದೆ ಇರುವ ಸಂಖ್ಯೆ ಕಾಣಿಸಿದರೆ ಅದನ್ನು ತಕ್ಷಣವೇ ದೂರ ಸಂಪರ್ಕ ಇಲಾಖೆಗೆ ದೂರು ಸಲ್ಲಿಸಬೇಕು.

*ನಿಮ್ಮ ಹೆಸರಿನಲ್ಲಿ ಇರುವ ಸಂಖ್ಯೆ ನಿಮ್ಮದಲ್ಲ ಎಂದಾಗಿದ್ದರೆ ಇದು ನನ್ನ ಸಂಖ್ಯೆ ಅಲ್ಲ ಎನ್ನುವ ಆಯ್ಕೆ ಮಾಡುವ ಮೂಲಕ ದೂರಸಂಪರ್ಕ ಇಲಾಖೆಗೆ ದೂರು ಸಲ್ಲಿಸಬಹುದು ಈ ರೀತಿ ನೀವು ಮಾಡಿದರೆ ಆ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುತ್ತದೆ ಬೇರೆಯವರು ಅದನ್ನು ಬಳಸುತ್ತಿದ್ದರು ಇನ್ನು ಮುಂದೆ ಬಳಸಲು ಸಾಧ್ಯ ಆಗುವುದಿಲ್ಲ.

₹9,899ಕ್ಕೆ ಸ್ಯಾಮ್‌ಸಂಗ್‌ನ ಅದ್ಭುತ 5G ಫೋನ್ ಖರೀದಿಸಿ! ಮೊದಲ ಬಾರಿಗೆ ಇಷ್ಟೊಂದು ಡಿಸ್ಕೌಂಟ್

Check How many SIM cards are there in your name or ID