ನಿಮ್ಮ ಹೆಸರಿನಲ್ಲಿ ಯಾರಾದ್ರೂ ನಕಲಿ ಸಿಮ್ ಕಾರ್ಡ್ ಖರೀದಿಸಿದ್ದಾರಾ? ಹೀಗೆ ಚೆಕ್ ಮಾಡಿ
ಅಪಾಯಕ್ಕೂ ಮುನ್ನ ಎಚ್ಚರಿಕೆ (Caution before danger) ವಹಿಸುವುದು ಎಲ್ಲ ವಿಚಾರಗಳಲ್ಲಿಯೂ ಕೂಡ ಒಳ್ಳೆಯದು. ಅದರಲ್ಲೂ ಡಿಜಿಟಲ್ ಲೈಫ್ (digital life) ಗೆ ಹೊಂದಿಕೊಂಡಿರುವ ನಾವು ಯಾವುದೇ ರೀತಿಯ ವಂಚನೆಗೂ ಕೂಡ ಗುರಿ ಆಗಬಹುದು
ಹಾಗಾಗಿ ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಿದ್ದರೆ ಅಥವಾ ನಮ್ಮ ಸರಿಯಾದ ದಾಖಲೆಗಳನ್ನು ನೀಡಿ ಏನನ್ನಾದರೂ ಖರೀದಿಸುವುದಿದ್ದರೆ ಬಹಳ ಜಾಗರೂಕತೆಯಿಂದ ಇರಬೇಕು.
ಆಧಾರ್ ಕಾರ್ಡ್ (Aadhaar Card) , ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಮೊದಲಾದವು ಪ್ರಮುಖ ಗುರುತಿನ ಚೀಟಿಗಳಾಗಿವೆ. ಒಂದು ವೇಳೆ ಇವುಗಳು ದುರುಪಯೋಗ (miss use) ವಾದರೆ ನಿಮ್ಮ ಹೆಸರಿನಲ್ಲಿ ಈ ದಾಖಲೆಗಳನ್ನು ಬಳಸಿಕೊಂಡು ಸಿಮ್ ಕಾರ್ಡ್ ಖರೀದಿ (sim card purchase) ಮಾಡಿದ್ರೆ ಅದರಿಂದ ಸಮಸ್ಯೆ ಅನುಭವಿಸಬೇಕಾಗಿದ್ದು ಕೂಡ ನೀವೇ, ಹಾಗಾಗಿ ಈ ಗುರುತಿನ ಚೀಟಿಗಳನ್ನು ಬೇರೆ ಎಲ್ಲಾದರೂ ಬಳಸುವುದಕ್ಕೂ ಮೊದಲು ಬಹಳ ಜಾಗರೂಕತೆಯಿಂದ ಇರಬೇಕು.
ನಕಲಿ ಸಿಮ್ ಕಾರ್ಡ್ ಹಾವಳಿ! (Fake SIM card)
ನಿಮ್ಮದೇ ಗುರುತಿನ ಚೀಟಿ ನಕಲಿ ಪ್ರತಿಯನ್ನು ಬಳಸಿ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿ ಅದರಿಂದ ಸಾಕಷ್ಟು ವಂಚನೆ (fraud cases) ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಹೌದು, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಜಾಸ್ತಿ ಆಗುತ್ತಿವೆ. ನಿಮ್ಮ ಯಾವುದೇ ಗುರುತಿನ ಚೀಟಿಯ ನಕಲು ಪ್ರತಿ ವಂಚಕರ ಕೈಗೆ ಸಿಕ್ಕರೆ ಅದನ್ನು ಬಳಸಿಕೊಂಡು ಸಿಮ್ ಕಾರ್ಡ್ ಖರೀದಿ ಮಾಡಿ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಡಿವಾಣ ಹಾಕುವ ಸಲುವಾಗಿ ದೂರಸಂಪರ್ಕ ಕಾಯಿದೆ ಅನುಷ್ಠಾನಕ್ಕೆ ಬಂದಿದ್ದು ಜನವರಿ ಒಂದರಿಂದ ಗ್ರಾಹಕರಿಗೆ ಈ ಕಾಯ್ದೆ ಅಡಿಯಲ್ಲಿ ಪರಿಹಾರ ಸಿಗಲಿದೆ.
ದೂರಸಂಪರ್ಕ ಇಲಾಖೆ (department of telecommunication) ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ವಂಚನೆ ಮಾಡಿರುವ ಸುಮಾರು 55.52 ಲಕ್ಷ ನಕಲಿ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗಿದೆ.
ಇದೇ ಕಾರಣಕ್ಕೆ ಈಗ ಸಿಮ್ ಕಾರ್ಡ್ ಖರೀದಿ ಹಾಗೂ ಮಾರಾಟದ ನಿಯಮವನ್ನು ಇನ್ನಷ್ಟು ಕಟ್ಟು ನಿಟ್ಟು ಗೊಳಿಸಲಾಗಿದ್ದು, ಸಿಮ್ ಕಾರ್ಡ್ ಮಾರಾಟ ಮಾಡುವವರು ಸಿಮ್ ಕಾರ್ಡ್ ಖರೀದಿ ಮಾಡುವವರ ಬಯೋಮೆಟ್ರಿಕ್ (biometric) ಮಾಡಿಸಿಕೊಳ್ಳದೆ ಕಾರ್ಡ್ ವಿತರಣೆ ಮಾಡುವಂತಿಲ್ಲ.
ಅದೇ ರೀತಿ ಸಿಮ್ ಕಾರ್ಡ್ ಮಾರಾಟ ಮಾಡುವವರು ಪೊಲೀಸ್ ಪರಿಶೀಲನೆ ಹಾಗೂ ಬಯೋಮೆಟ್ರಿಕ್ ಮಾಡಿಸಿಕೊಳ್ಳದೆ ಸಿಮ್ ಕಾರ್ಡ್ ಮಾರಾಟ ಮಾಡುವುದಿಲ್ಲ. ಒಂದು ವೇಳೆ ಮಾರಾಟಗಾರರು ಪೊಲೀಸ್ ಪರಿಶೀಲನೆಗೆ (police verification) ಒಳಪಡದೆ ಇದ್ದರೆ ಅಂತವರಿಗೆ ಬಾರಿ ಪ್ರಮಾಣದಲ್ಲಿ ತಂಡ ವಿಧಿಸಲಾಗುವುದು ಜೊತೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ.
ನಕಲಿ ಸಿಮ್ ಕಾರ್ಡ್ ಪತ್ತೆ ಹಚ್ಚುವುದು ಹೇಗೆ?
ಒಂದು ವೇಳೆ ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಯಾರಾದರೂ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿದರೆ ಅದನ್ನ ನೀವು ಆನ್ಲೈನ್ ಮೂಲಕವೇ ಪತ್ತೆ ಹಚ್ಚಬಹುದು. ಹಾಗೂ ಆ ರೀತಿ ನೀವು ಬಳಸುವ ನಂಬರ್ ಹೊರತುಪಡಿಸಿ ಬೇರೆ ಸಿಮ್ ಕಾರ್ಡ್ ನಂಬರ್ ಕಾಣಿಸಿದ್ರೆ ತಕ್ಷಣ ಅದನ್ನು ಬ್ಲಾಕ್ ಮಾಡುವಂತೆ ದೂರು ಸಲ್ಲಿಸಬಹುದು.
https://tafcop.sancharsaathi.gov.in/telecomUser/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಈಗ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ಹಾಕಿ ಸಬ್ಮಿಟ್ ಎಂದು ಕೊಡಿ.
ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಒಂದು ಓಟಿಪಿ ಕಳುಹಿಸಲಾಗುತ್ತದೆ, ಅದನ್ನು ನಮೂದಿಸಿ. ಈಗ ನೀವು ಬಳಕೆ ಮಾಡುತ್ತಿರುವ ಫೋನ್ ಸಂಖ್ಯೆ ಜೊತೆಗೆ ಇತರ ಫೋನ್ ಸಂಖ್ಯೆ ಕೂಡ ಇದ್ದರೆ ಅದನ್ನು ತೋರಿಸಲಾಗುತ್ತದೆ. ಆ ಸಂಖ್ಯೆಗಳನ್ನು ನೀವು ಬಳಸುತ್ತಿಲ್ಲ ಎಂಬುದಾಗಿದ್ದರೆ ಉಳಿದ ಸಂಖ್ಯೆಗಳನ್ನು ಬ್ಲಾಕ್ ಮಾಡಲು ದೂರು ಸಲ್ಲಿಸಬಹುದು.
Check someone bought a fake SIM card in your name
Our Whatsapp Channel is Live Now 👇