ಪ್ರಧಾನಿ ಮೋದಿ ಅವರಿಗೆ ಯೂಟ್ಯೂಬ್ ಚಾನೆಲ್ ನಿಂದ ಎಷ್ಟು ಹಣ ಬರುತ್ತೆ ಗೊತ್ತಾ?
- ಪ್ರಧಾನ ಮೋದಿ ಜಿ ಅವರ ಯೂಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿದ್ದೀರಾ
- ಮೋದಿಜಿ ಅವರು ಯೌಟ್ಯೂಬ್ ಚಾನೆಲ್ನಿಂದ ಎಷ್ಟು ಕೋಟಿ ಹಣ ಗಳಿಸುತ್ತಾರೆ ಗೊತ್ತಾ
- ಮೋದಿಜಿ ಅವರಿಗೆ ಇದ್ದಾರೆ ಮಿಲಿಯನ್ ಗಟ್ಟಲೆ ಫಾಲೋವರ್ಸ್
PM Narendra Modi YouTube Channel : ಸಾಮಾಜಿಕ ಜಾಲತಾಣದ ಬಗ್ಗೆ ಒಲವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರು ಏನೇನೋ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡಿದರೆ ಇನ್ನೂ ಕೆಲವರು ಅಂತಹ ವಿಡಿಯೋಗಳನ್ನು ನೋಡಿಕೊಂಡೆ ಕಾಲ ಕಳೆಯುತ್ತಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ಅನ್ನುವಂಥದ್ದು ಹಣ ಮಾಡುವ ಒಂದು ವೇದಿಕೆಯು ಆಗಿದೆ. ಸಾಕಷ್ಟು ಜನ ವಿಡಿಯೋ ವನ್ನು ಅಪ್ಲೋಡ್ ಮಾಡುವುದರ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಅದರಲ್ಲೂ ಜನರಿಗೆ ಹೆಚ್ಚು ಹತ್ತಿರವಾಗಿದ್ದು ಹಣ ಗಳಿಸುವುದಕ್ಕೆ ಒಂದು ಅತ್ಯುತ್ತಮ ವೇದಿಕೆಯಾಗಿದೆ.
ಪ್ರಧಾನ ಮಂತ್ರಿ ಅವರ ಯೂಟ್ಯೂಬ್ ಚಾನೆಲ್!
ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿಜಿ (PM Narendra Modi) ಅವರು ಎಲ್ಲರಂತಲ್ಲ ಅವರು ಈ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ. ಯೂಟ್ಯೂಬ್, ಟ್ವಿಟರ್, ಫೇಸ್ಬುಕ್ ಮೊದಲದ ಸಾಮಾಜಿಕ ವೇದಿಕೆಯಲ್ಲಿ ನರೇಂದ್ರ ಮೋದಿಜಿ ಅವರನ್ನು ಅನುಸರಿಸುವ ಅನುಯಾಯಿಗಳು ಕೋಟ್ಯಂತರ ಜನ.
ಅದಕ್ಕೆ ತಕ್ಕ ಹಾಗೆ ಬಂದಿರುವ ಹೊಸ ಹೊಸ ಯೋಜನೆಗಳ ಬಗ್ಗೆ ಅಥವಾ ಇತರ ಯಾವುದೇ ಇಂಪಾರ್ಟೆಂಟ್ ವಿಷಯಗಳ ಬಗ್ಗೆ ನರೇಂದ್ರ ಮೋದಿಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಯೂಟ್ಯೂಬ್ ಮೂಲಕ ಸಾಕಷ್ಟು ಜನ ದಿನೇ ದಿನೇ ಫೇಮಸ್ ಆಗುತ್ತಿದ್ದಾರೆ ನರೇಂದ್ರ ಮೋದಿಜಿ ಅವರ ಯುಟ್ಯೂಬ್ ಚಾನೆಲ್ ವೀಕ್ಷಣೆಯು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಂದು ಕೋಟ್ಯಾಂತರ ಜನ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಯುಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಂಡಿದ್ದಾರೆ.
ಪ್ರಧಾನ ಮಂತ್ರಿಯವರಿಗೆ ಯೂಟ್ಯೂಬ್ ನಿಂದ ಬರುವ ಆದಾಯ ಎಷ್ಟು?
ಯೂಟ್ಯೂಬ್ ಹಣ ಮಾಡುವ ಒಂದು ವೇದಿಕೆಯಾಗಿದ್ದು, ಸಾಕಷ್ಟು ಜನ YouTube ಚಾನಲ್ ಅನ್ನು ಹೊಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರ ಯೂಟ್ಯೂಬ್ ಚಾನೆಲ್ ಸಾಕಷ್ಟು ಫೇಮಸ್ ಆಗಿದೆ. ಅವರು ಹಾಕುವ ಸಣ್ಣ ಪುಟ್ಟ ಪೋಸ್ಟ್ಗಳು ಕೂಡ ಮಿಲಿಯನ್ ವೀವ್ಸ್ ಪಡೆದುಕೊಳ್ಳುತ್ತದೆ.
ವಿಶ್ವಾದ್ಯಂತ 20 ಮಿಲಿಯನ್ ಗಿಂತಲೂ ಹೆಚ್ಚು ಚಂದದಾರರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹೊಂದಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯದ ಸಂಗತಿ. ಪ್ರಧಾನ ಮಂತ್ರಿ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಸರ್ಕಾರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಸಂದರ್ಶನಗಳು ಪ್ರಸಾರವಾಗುತ್ತವೆ.
ಮೋದಿಜಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ಆರಂಭವಾಗಿದ್ದು 2007ರಲ್ಲಿ. ಈ ಚಾನಲ್ ನಲ್ಲಿ ಇದುವರೆಗೆ 29,272 ವಿಡಿಯೋಗಳು ಅಪ್ಲೋಡ್ ಆಗಿದ್ದು, ಒಟ್ಟು 636 ಕೋಟಿಗಿಂತ ಹೆಚ್ಚು ವೀಕ್ಷಣೆಗೊಂಡಿದೆ.
ಮೂಲಗಳ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಸುಮಾರು 1.62 ಕೋಟಿ ಇಂದ 4.88 ಕೋಟಿ ರೂಪಾಯಿಗಳ ಆದಾಯ ಗಳಿಸಿದ್ದಾರೆ ಎನ್ನಲಾಗುತ್ತದೆ. ಒಬ್ಬ ಅದ್ಭುತ ರಾಜಕೀಯ ನಾಯಕರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಇಷ್ಟು ಅನುಯಾಯಿಗಳು ಇರುವಾಗ ಅದರ ಮುಂದೆ ಅವರಿಗೆ ಬರುವ ಈ ಆದಾಯ ದೊಡ್ಡದೇನಿಸುವುದಿಲ್ಲ.
Do you know how much money PM Modi earns from his YouTube channel