ವ್ಯಕ್ತಿ ಸತ್ತ ನಂತರ ಆತನ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಏನಾಗುತ್ತೆ ಗೊತ್ತಾ?

ನೀವು ಸೋಶಿಯಲ್ ಮೀಡಿಯಾ (Social media) ಬಳಕೆದಾರರಾಗಿದ್ರೆ, ವ್ಯಕ್ತಿ ಸತ್ತ ನಂತರ ಆತನ ಖಾತೆಯನ್ನು ಯಾರು ಬಳಸಬಹುದು ಅಥವಾ ಆತನ ಖಾತೆ ಏನಾಗಬಹುದು ಎನ್ನುವುದರ ಬಗ್ಗೆ ನಿಮಗೆ ಗೊತ್ತಾ

ಇಂದು ನಾವು ಊಟ, ತಿಂಡಿ, ನಿದ್ದೆ ಬಿಟ್ಟು ಬದುಕಬಹುದೋ ಏನೋ, ಆದರೆ ಸೋಶಿಯಲ್ ಮೀಡಿಯಾ (Social media) ವನ್ನು ಬಳಸದೆ ಒಂದು ದಿನವೂ ಕೂಡ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾರ ಬಳಿಯೂ ಸ್ಮಾರ್ಟ್ ಫೋನ್ (smartphone) ಇಲ್ಲ ಎನ್ನುವಂತಿಲ್ಲ. ಎಲ್ಲರೂ ಕೂಡ ಕೈಯಲ್ಲಿ ಮೊಬೈಲ್ (mobile) ಹಿಡಿದು ಇಡೀ ಜಗತ್ತೇ ಕೈ ಬೆರಳ ತುದಿಯಲ್ಲಿ ಇದೆ ಎನ್ನುವಂತೆ ವರ್ತಿಸುತ್ತಾರೆ.

ಸೋಶಿಯಲ್ ಮೀಡಿಯಾ ಬಳಸದೆ ಇರುವವರಂತೂ ಹೆಚ್ಚು ಕಡಿಮೆ ಯಾರು ಇಲ್ಲ ಎಂದೇ ಹೇಳಬಹುದು. ಇನ್ಸ್ಟಾಗ್ರಾಮ್, ಫೇಸ್ಬುಕ್, ಯೂಟ್ಯೂಬ್ ಹೀಗೆ ಬೇರೆ ಬೇರೆ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳು ಲಭ್ಯವಿದ್ದು ಕನಿಷ್ಠ ಒಂದಾದರೂ ಅಪ್ಲಿಕೇಶನ್ (application) ಬಳಕೆಯನ್ನು ಜನ ಹೆಚ್ಚಾಗಿ ಮಾಡುತ್ತಾರೆ ಎನ್ನಬಹುದು.

ವ್ಯಕ್ತಿ ಸತ್ತ ನಂತರ ಆತನ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಏನಾಗುತ್ತೆ ಗೊತ್ತಾ? - Kannada News

ಹೆಚ್ಚಾದರೆ ಅಮೃತವು ವಿಷ ಎನ್ನುವ ಮಾತನ್ನು ನೀವು ಕೇಳಿರುತ್ತೀರಿ. ಇಂದು ಸೋಶಿಯಲ್ ಮೀಡಿಯಾ (Social media) ಕೂಡ ಅದೇ ಸ್ಥಿತಿಗೆ ಬಂದು ತಲುಪಿದೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ವಿಚಾರಗಳಿಗಿಂತಲೂ ಬೇಡದ ಹಾಗೂ ಅಗತ್ಯವೇ ಇಲ್ಲದ ವಿಷಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಸೋಶಿಯಲ್ ಮೀಡಿಯಾ ವ್ಯಕ್ತಿಯ ಮಾನಸಿಕ ಬೆಳವಣಿಗೆಯ ಮೇಲೆ ಸಾಕಷ್ಟು ದೊಡ್ಡ ಪರಿಣಾಮ ಬೀರುತ್ತಿದೆ ಎನ್ನಬಹುದು.

ಸೋಶಿಯಲ್ ಮೀಡಿಯಾವನ್ನು ಕೆಲವರು ಬಹಳ ಮುತುವರ್ಜಿಯಿಂದ ಬಳಸುತ್ತಾರೆ. ಇನ್ನು ಕೆಲವರಿಗೆ ಬೇಕಾಬಿಟ್ಟಿಯಾಗಿ ಬಳಸುವುದನ್ನು ಹೊರತುಪಡಿಸಿ ಬೇರೇನು ಗೊತ್ತಿರುವುದೇ ಇಲ್ಲ. ಸೋಶಿಯಲ್ ಮೀಡಿಯಾ ನ ಬಹಳ ಹುಷಾರಿತನದಿಂದ ಹ್ಯಾಂಡಲ್ ಮಾಡಬೇಕು. ಇಲ್ಲವೇ ಸಾಮಾಜಿಕ ಜಾಲತಾಣದ ಮೂಲಕ ನಡೆಯುವ ವಂಚನೆಗಳಿಗೆ ನೀವು ಬಲಿಯಾಗಬಹುದು. ಹಾಗಾಗಿ ಸೋಶಿಯಲ್ ಮೀಡಿಯಾದ ಬಳಕೆಗೆ ಸೆಕ್ಯೂರಿಟಿ (security) ಬಹಳ ಮುಖ್ಯ.

ಇನ್ನು ನೀವು ಸೋಶಿಯಲ್ ಮೀಡಿಯಾ (Social media) ಬಳಕೆದಾರರಾಗಿದ್ರೆ, ವ್ಯಕ್ತಿ ಸತ್ತ ನಂತರ ಆತನ ಖಾತೆಯನ್ನು ಯಾರು ಬಳಸಬಹುದು ಅಥವಾ ಆತನ ಖಾತೆ ಏನಾಗಬಹುದು ಎನ್ನುವುದರ ಬಗ್ಗೆ ನಿಮಗೆ ಗೊತ್ತಾ?

Social Mediaಫೇಸ್ಬುಕ್ (Facebook)

ಇದು ಬಹಳ ಇಂಟರೆಸ್ಟಿಂಗ್ ವಿಚಾರ. ಒಬ್ಬ ವ್ಯಕ್ತಿ ಸತ್ತ ನಂತರ ಆತನ ಸೋಶಿಯಲ್ ಮೀಡಿಯಾ ಖಾತೆ ಏನಾಗಬಹುದು? ಎನ್ನುವ ಕುತೂಹಲ ಹಲವರಲ್ಲಿ ಇರುತ್ತೆ. ಇದಕ್ಕೆ ಇಲ್ಲಿದೆ ಉತ್ತರ. ಮೊದಲನೇದಾಗಿ ಫೇಸ್ಬುಕ್ ಖಾತೆಯನ್ನು ತೆಗೆದುಕೊಂಡರೆ ನೀವು ಫೇಸ್ಬುಕ್ ಪ್ರೈವೇಟ್ ಸೆಟ್ಟಿಂಗ್ (private setting) ನಲ್ಲಿ ನಿಮ್ಮ ಮರಣದ ನಂತರ ನಿಮ್ಮ ಖಾತೆಯನ್ನು ಯಾರು ಬಳಕೆ ಮಾಡಬಹುದು ಎನ್ನುವುದನ್ನ ಆಯ್ಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಖಾತೆಯಲ್ಲಿ ಪ್ರೈವೇಟ್ ಸೆಟ್ಟಿಂಗ್ಸ್ ಗೆ ಲಿಗಸಿ ಕಾಂಟ್ಯಾಕ್ಟ್ ಎನ್ನುವ ಆಯ್ಕೆಯನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಸ್ನೇಹಿತರಾಗಿರುವ ಯಾವುದೇ ವ್ಯಕ್ತಿಯನ್ನು ನೀವು ಮರಣ ಹೊಂದಿದ ನಂತರ ಖಾತೆ ಬಳಸಲು ಅನುಮತಿ ನೀಡಬಹುದು. ಇದು ಫೇಸ್ಬುಕ್ನ ಒಂದು ಉತ್ತಮ ಫೀಚರ್ ಆಗಿದೆ.

ಇನ್ಸ್ಟಾಗ್ರಾಮ್! (Instagram)

ಇಂದು ಜನ ಹೆಚ್ಚಾಗಿ ಬಳಸುವ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಇನ್ಸ್ಟಾಗ್ರಾಮ್ ಮುಂಚೂಣಿಯಲ್ಲಿದೆ ಎನ್ನಬಹುದು. ಫೇಸ್ಬುಕ್ ನಂತೆ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಪ್ರೈವೇಟ್ ಸೆಟ್ಟಿಂಗ್ ನಲ್ಲಿ ವ್ಯಕ್ತಿ ಮರಣ ಹೊಂದಿದ ನಂತರ ಆತನ ಖಾತೆಯನ್ನು ಯಾರು ಬಳಕೆ ಮಾಡಬೇಕು? ಅಥವಾ ಖಾತೆಯನ್ನು ನಿಷ್ಕ್ರಿಯಗೊಳಿಸಬೇಕೇ ? ಎಂದು ಆಯ್ಕೆ ಮಾಡುವ ಅವಕಾಶ ಇದೆ. ಹಾಗಾಗಿ ದಾಖಲೆಗಳನ್ನು ನೀಡಿ ನೀವು ಆಯ್ಕೆಯನ್ನು ಮಾಡಿಕೊಳ್ಳಬಹುದು.

ಟ್ವಿಟರ್ (X) ಖಾತೆ! (Twitter account)

ಇದು ಸಾಮಾನ್ಯವಾಗಿ ಸೆಲೆಬ್ರಿಟಿ (celebrity) ಗಳಿಂದ ಹಿಡಿದು ಜನಸಾಮಾನ್ಯರವರೆಗೂ ಕೂಡ ಈ ಸಾಮಾಜಿಕ ವೇದಿಕೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಟ್ವಿಟ್ಟರ್ ಅಥವಾ X ಖಾತೆ ಯಾರಾದರೂ ಮರಣ ಹೊಂದಿದ ನಂತರ ಆತನ ಖಾತೆಯನ್ನು ಬೇರೆಯವರು ಬಳಸಬಹುದೇ ಎನ್ನುವುದನ್ನು ನೋಡುವುದಾದರೆ, ಸದ್ಯ ಇದಕ್ಕೆ ಯಾವುದೇ ನಿಯಮವನ್ನು ತಿಳಿಸಲಾಗಿಲ್ಲ. ಆದರೆ ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ಆತನ ಕುಟುಂಬದವರು ಟ್ವಿಟರ್ ಖಾತೆಯನ್ನು ನಿಷ್ಕ್ರಿಯೆಗೊಳಿಸುವಂತೆ ಕಂಪನಿಗೆ ತಿಳಿಸಬಹುದು.

ಆದರೆ ಇಲ್ಲಿ ಮೃತಪಟ್ಟ ವ್ಯಕ್ತಿಯ ಮರಣ ದಾಖಲೆ ನೀಡಬೇಕು. ಹಾಗೂ ತಾವು ಆ ವ್ಯಕ್ತಿಯ ಕುಟುಂಬಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸಬೇಕು. ಆಗ ಮಾತ್ರ ವ್ಯಕ್ತಿಯ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುವುದು ಹಾಗೂ ಅಪ್ಲೋಡ್ ಮಾಡಿರುವ ಎಲ್ಲಾ ಫೋಟೋ, ವಿಡಿಯೋ, ಮತ್ತಿತರ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗುವುದು.

ಒಂದು ವೇಳೆ ವ್ಯಕ್ತಿ ಮರಣ ಹೊಂದಿದ ನಂತರವೂ ಕೂಡ ಆತನ ಸೋಶಿಯಲ್ ಮೀಡಿಯಾ ಆಕ್ಟಿವ್ ಆಗಿದ್ದರೆ ಬೇರೆ ಯಾರೋ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅರ್ಥ. ಹಾಗಾಗಿ ನಾವು ಸ್ವಲ್ಪ ಮುತುವರ್ಜಿ ತೆಗೆದುಕೊಂಡು, ಸೋಶಿಯಲ್ ಮೀಡಿಯಾದ ಬಗ್ಗೆ ತಿಳಿದುಕೊಂಡು ಬಳಕೆ ಮಾಡುವುದು ಒಳ್ಳೆಯದು.

Do you know what happens to a social media accounts after the Person die

Follow us On

FaceBook Google News

Do you know what happens to a social media accounts after the Person die