ನಿಮ್ಮ ಮೊಬೈಲ್ ನಲ್ಲಿಯೇ ಹೀಗೆ ಡೌನ್ಲೋಡ್ ಮಾಡಿಕೊಳ್ಳಿ ಡಿಜಿಟಲ್ ವೋಟರ್ ಐಡಿ

ಬ್ಯಾಂಕ್ (Banks) ವ್ಯವಹಾರಗಳು ಮಾತ್ರವಲ್ಲದೆ ಇದೀಗ ಡಿಜಿಟಲ್ ವೋಟರ್ ಐಡಿ (digital voter ID) ಪಡೆದುಕೊಳ್ಳಲು ಕೂಡ ಸರ್ಕಾರ ಅನುವು ಮಾಡಿಕೊಟ್ಟಿದೆ.

Bengaluru, Karnataka, India
Edited By: Satish Raj Goravigere

ಒಬ್ಬ ಭಾರತೀಯ ಪ್ರಜೆ ಮತದಾನದ ಹಕ್ಕನ್ನು (voting rights) ಪಡೆಯಬೇಕು ಅಂದ್ರೆ ಆತನ ಬಳಿ ವೋಟರ್ ಐಡಿ (voter ID) ಅಥವಾ ಮತದಾನದ ಚೀಟಿ ಹೊಂದಿರುವುದು ಕಡ್ಡಾಯ

ಒಂದು ವೇಳೆ ವೋಟರ್ ಐಡಿ ಇಲ್ಲದೆ ಇದ್ರೆ ಆತ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾನೆ, ಅಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕರಿಗೂ ಸಿಗುವಂತಹ ಗುರುತಿನ ಚೀಟಿ ಕೂಡ ಇದಾಗಿದೆ.

Leave the old voter ID and get a new digital ID, Here is the information

ಇಂದು ನಾವು ಡಿಜಿಟಲೀಕರಣದತ್ತ (digitalisation) ಮುಖ ಮಾಡಿದ್ದೇವೆ ಹಾಗಾಗಿ ಪ್ರತಿಯೊಂದು ವ್ಯವಹಾರವನ್ನು ಕೂಡ ಸ್ಮಾರ್ಟ್ ಫೋನ್ (smartphone) ಮೂಲಕವೇ ಮಾಡಬಹುದು.

ಬ್ಯಾಂಕ್ (Banks) ವ್ಯವಹಾರಗಳು ಮಾತ್ರವಲ್ಲದೆ ಇದೀಗ ಡಿಜಿಟಲ್ ವೋಟರ್ ಐಡಿ (digital voter ID) ಪಡೆದುಕೊಳ್ಳಲು ಕೂಡ ಸರ್ಕಾರ ಅನುವು ಮಾಡಿಕೊಟ್ಟಿದೆ. ಭಾರತೀಯ ಚುನಾವಣಾ ಆಯೋಗ ಡಿಜಿಟಲ್ ವೋಟರ್ ಐಡಿಯನ್ನು ಪರಿಚಯಿಸಿದೆ. ಇದನ್ನು ಇ-ಇಪಿಐಸಿ ಅಥವಾ ಎಲೆಕ್ಟ್ರಾನಿಕ್ ಎಲೆಕ್ಟೋರಲ್ ಫೋಟೋ ಐಡೆಂಟಿಟಿ ಕಾರ್ಡ್ ಎನ್ನಲಾಗುತ್ತದೆ.

ಈ ಸ್ಯಾಮ್‌ಸಂಗ್ 5G ಫೋನ್‌ ಏಕ್‍ದಮ್ ₹599 ರೂಪಾಯಿಗೆ ಸಿಗುತ್ತಿದೆ! ಬಾರೀ ಆಫರ್ ಅಲ್ವೇ

E-EPIC ವೋಟರ್ ಐಡಿ ಪಡೆದುಕೊಳ್ಳುವುದು!

ಇದೊಂದು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ಆಗಿದೆ, ಯಾರು ತಮ್ಮ ಪರ್ಸ್ ನಲ್ಲಿ ವೋಟರ್ ಐಡಿ ಇಟ್ಟುಕೊಳ್ಳಲು ಬಯಸುವುದಿಲ್ಲವೋ ಅಂತವರಿಗೆ ಇದು ಬಹಳ ಉಪಯೋಗವಾಗಲಿದೆ ಎನ್ನಬಹುದು.

ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿ ಒಬ್ಬ ಪ್ರಜೆ ಕೂಡ ವೋಟರ್ ಐಡಿ ಹೊಂದಿರುವುದು ಕಡ್ಡಾಯ. ಯಾವುದೇ ಚುನಾವಣೆಗೆ ಮತದಾನ ಮಾಡುವುದಿದ್ದರು ಮತದಾನದ ಚೀಟಿ ಇರಲೇಬೇಕು.

ಆದರೆ ಇನ್ನು ಮುಂದೆ ನೀವು ಭೌತಿಕವಾಗಿ ಮತದಾನದ ಚೀಟಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವ ಅಗತ್ಯ ಇಲ್ಲ. ಈ ರೀತಿಯಾದ ಒಂದು ಪಿಡಿಎಫ್ ಫೈಲ್ (PDF file) ನಿಮ್ಮ ಬಳಿ ಇದ್ದರೆ ನೀವು ಮುಂದಿನ ಬಾರಿ ಚುನಾವಣೆ ಸಮಯದಲ್ಲಿ ಮತದಾನ ಮಾಡಲು ಅರ್ಹರಾಗುತ್ತೀರಿ.

ಮೊಬೈಲ್ ಫೋನ್ ಅಥವಾ ಡಿಜಿಲಾಕರ್ ಮೂಲಕ ಈ ಐಡಿ ನಿಮ್ಮ ಬಳಿ ಇಟ್ಟುಕೊಂಡಿರಬಹುದು. ಇದು ನಿಮ್ಮ ಬಳಿ ಇದ್ದರೆ ನೀವು ವೋಟರ್ ಐಡಿ ಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ.

ಎಲ್ಲ ವ್ಯವಹಾರಕ್ಕೆ ಇದನ್ನು ಬಳಸಬಹುದು!

Download Digital Voter IDE-EPIC ಡಿಜಿಟಲ್ ವೋಟರ್ ಐಡಿ ಮತದಾನಕ್ಕೆ ಮಾತ್ರವಲ್ಲದೆ ನೀವು ಬೇರೆ ಎಲ್ಲಾ ವ್ಯವಹಾರಗಳಿಗೆ ಕೂಡ ಬಳಸಬಹುದು. ಅಂದ್ರೆ ನಿಮ್ಮ ಬಳಿ ಇರುವ ಹಾರ್ಡ್ ಕಾಪಿ ವೋಟರ್ ಐಡಿ ಎಷ್ಟು ಮಾನ್ಯತೆಯನ್ನು ಪಡೆದುಕೊಂಡಿರುತ್ತದೆಯೋ ಇದು ಕೂಡ ಅಷ್ಟೇ ಮಾನ್ಯವಾಗಿರುತ್ತದೆ.

ಸರ್ಕಾರಿ ಅಥವಾ ಖಾಸಗಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ವಿಳಾಸ ಪರಿಶೀಲನೆ, ಡಿಜಿಟಲ್ ವೋಟರ್ ಐಡಿ ಬಳಸಿಕೊಳ್ಳಬಹುದಾಗಿದೆ. ಇದು ವ್ಯಕ್ತಿಯ ವಯಸ್ಸು ಹಾಗೂ ವಿಳಾಸಕ್ಕೆ ಪ್ರೂಫ್ (address proof) ನೀಡುತ್ತದೆ.

ಫೋನಿನಲ್ಲಿ ಡೌನ್ಲೋಡ್ ಮಾಡಿ ಡಿಜಿಟಲ್ ವೋಟರ್ ಐಡಿ!

ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಆಗಿರುವ https://www.nvsp.in/ ನಲ್ಲಿ ನೀವು ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳ ಬಹುದು. ಇದೊಂದು ಪಿಡಿಎಫ್ ಫಾರ್ಮೆಟ್ ನಲ್ಲಿ ಇದ್ದು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬಹುದು.

ಮೊದಲಿಗೆ ಈ ವೆಬ್ಸೈಟ್ ಅನ್ನು ಓಪನ್ ಮಾಡಿ ನೀವು ಹೊಸ ಬಳಕೆದಾರರಾಗಿದ್ರೆ ಲಾಗ್ ಇನ್ (login) ಆಗಬೇಕು. ನಂತರ e-EPIC ಡೌನ್ಲೋಡ್ (Download) ಎನ್ನುವ ಆಯ್ಕೆ ಮಾಡಿ. ಇಲ್ಲಿ ನಿಮ್ಮ ವೋಟರ್ ಐಡಿ ಸಂಖ್ಯೆಯನ್ನು ಹಾಕಬೇಕು. ಆಗ ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ನಮೂದಿಸಿದರೆ ತಕ್ಷಣವೇ ನೀವು ನಿಮ್ಮ ಮೊಬೈಲ್ ನಲ್ಲಿ ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

Download Digital Voter ID on your Smartphone by This Easy Steps