ಸ್ಯಾಮ್‌ಸಂಗ್ ಅಗ್ರಸ್ಥಾನ! 10 ಕೋಟಿಗೂ ಅಧಿಕ ಜನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಖರೀದಿಸಿ ದಾಖಲೆ ಸೃಷ್ಟಿ
Foldable smartphones : ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ನಿರಂತರವಾಗಿ ಬೆಳೆಯುತ್ತಿದೆ. ಇದೀಗ ವರದಿಯೊಂದು ಹೊರಬಿದ್ದಿದ್ದು, 2027ರ ವೇಳೆಗೆ ಜಾಗತಿಕವಾಗಿ ಫೋಲ್ಡಬಲ್ ಸ್ಮಾರ್ಟ್‌ಫೋನ್ 00 ಮಿಲಿಯನ್ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
Foldable smartphones : ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ನಿರಂತರವಾಗಿ ಬೆಳೆಯುತ್ತಿದೆ. ಇದೀಗ ವರದಿಯೊಂದು ಹೊರಬಿದ್ದಿದ್ದು, 2027ರ ವೇಳೆಗೆ ಜಾಗತಿಕವಾಗಿ ಫೋಲ್ಡಬಲ್ ಸ್ಮಾರ್ಟ್‌ಫೋನ್ 100 ಮಿಲಿಯನ್ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಇದೀಗ ಸಣ್ಣ ಕಂಪನಿಗಳಿಂದ ಹಿಡಿದು ದೊಡ್ಡವರವರೆಗೆ ಎಲ್ಲಾ ಕಂಪನಿಗಳು ತಮ್ಮ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇದರೊಂದಿಗೆ ಫೋಲ್ಡಬಲ್ ಫೋನ್‌ಗಳನ್ನು ಖರೀದಿಸುವ ಬಯಕೆಯೂ ಜನರಲ್ಲಿ ಹೆಚ್ಚುತ್ತಿದೆ.
ಕೌಂಟರ್‌ಪಾಯಿಂಟ್ ರಿಸರ್ಚ್‌ನ ಇತ್ತೀಚಿನ ಗ್ಲೋಬಲ್ ಫೋಲ್ಡಬಲ್ ಸ್ಮಾರ್ಟ್‌ಫೋನ್ (Smartphone) ಟ್ರ್ಯಾಕರ್ ಮತ್ತು ಮುನ್ಸೂಚನೆಯ ಪ್ರಕಾರ, ಫೋಲ್ಡಬಲ್ ಸ್ಮಾರ್ಟ್‌ಫೋನ್ 2026 ರಲ್ಲಿ 78.6 ಮಿಲಿಯನ್‌ನಿಂದ 2027 ರಲ್ಲಿ 101.5 ಮಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ.
ಸದ್ಯಕ್ಕೆ ಫೋಲ್ಡಬಲ್ ಫೋನ್‌ಗಳು ‘ನಿಚ್’ ಆಗಿ ಉಳಿದಿವೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ಸಂಶೋಧನಾ ನಿರ್ದೇಶಕ ಟಾಮ್ ಕಾಂಗ್ ಹೇಳಿದ್ದಾರೆ. ಆದರೆ ಪ್ರೀಮಿಯಂ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಬಯಸುವ ಬ್ರ್ಯಾಂಡ್‌ಗಳಿಗೆ ಇದು ಮುಖ್ಯವಾಗಿದೆ.
ಸ್ಯಾಮ್‌ಸಂಗ್ ಮತ್ತು ಆಪಲ್
ಸ್ಯಾಮ್‌ಸಂಗ್ (Samsung) ಮತ್ತು ಆಪಲ್ (Apple iPhone) ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಲಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಹೇಳಿದೆ. ಸ್ಯಾಮ್ಸಂಗ್ ಅಗ್ರ ಕಂಪನಿ ನಂತರ ಆಪಲ್ ಆಗಲಿದೆ. 2027 ರಲ್ಲಿ, ಎಲ್ಲಾ ಸ್ಮಾರ್ಟ್‌ಫೋನ್ ಗಳಲ್ಲಿ ಫೋಲ್ಡಬಲ್‌ಗಳ ಪಾಲು 39% ಆಗಿರುತ್ತದೆ ಎಂದು ಹೇಳಲಾಗಿದೆ.
ಸ್ಯಾಮ್‌ಸಂಗ್ ಈಗಷ್ಟೇ Galaxy Z Fold 5 ಮತ್ತು Galaxy Z Flip 5 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದರೆ, ಆಪಲ್ ಇನ್ನೂ ಫೋಲ್ಡಬಲ್ ಐಫೋನ್ ಅನ್ನು ಪ್ರಾರಂಭಿಸುವ ಯಾವುದೇ ಯೋಜನೆಯನ್ನು ಬಹಿರಂಗಪಡಿಸಿಲ್ಲ. ಆಪಲ್ ಐಫೋನ್ ಫೋಲ್ಡಬಲ್ ಫೋನ್ 2025 ರ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಹಿರಿಯ ವಿಶ್ಲೇಷಕ ಜೆನ್ ಪಾರ್ಕ್ ಹೇಳಿದ್ದಾರೆ.
Foldable smartphone will break all records, Samsung will be on top