ಇನ್ಮುಂದೆ ಇಂಟರ್ನೆಟ್ ಇಲ್ಲದೆ ಇದ್ರೂ ಜಿಮೇಲ್ ವರ್ಕ್ ಆಗುತ್ತೆ! ಬಳಸುವ ವಿಧಾನ ತಿಳಿದುಕೊಳ್ಳಿ
ಗೂಗಲ್, ಈಗ Gmail ನಲ್ಲಿ offline mode ಪರಿಚಯಿಸಿದೆ. ಹಾಗಾಗಿ ಇನ್ನು ಮುಂದೆ ಇಂಟರ್ನೆಟ್ ಸಹಾಯವಿಲ್ಲದೆ ಸಂದೇಶವನ್ನು ಓದುವುದು ಹಾಗೂ ಸಂದೇಶ ಕಳುಹಿಸುವುದನ್ನು ಮಾಡಬಹುದು.
ಮೊಬೈಲ್ ಬಳಕೆ (mobile users) ಮಾಡುವವರು ವಾಟ್ಸಾಪ್ (WhatsApp application) ಅಪ್ಲಿಕೇಶನ್ ಅನ್ನು ಸಂದೇಶ (messaging app) ಕಳುಹಿಸುವುದಕ್ಕಾಗಿ ಸಾಕಷ್ಟು ಬಳಕೆ ಮಾಡುತ್ತಾರೆ
ಅದೇ ರೀತಿ ಗೂಗಲ್ (Google company) ಕಂಪನಿಯ ಜಿಮೇಲ್ ಅಕೌಂಟ್ (Gmail account) ಕೂಡ ಸಾಕಷ್ಟು ಜನ ಹೊಂದಿರುತ್ತಾರೆ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕವೇ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಮಾಡಿಕೊಳ್ಳುವುದರಿಂದ ಓಟಿಪಿ (OTP) ಯಿಂದ ಹಿಡಿದು ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಸಂದೇಶಗಳು ಕೂಡ ಜಿಮೇಲ್ ಅಕೌಂಟ್ ಗೆ ಬಂದು ಸೇರುತ್ತದೆ.
24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು Oppo ಫೋನ್ ಬುಕ್ ಮಾಡಿದ ಗ್ರಾಹಕರು! ಯಾಕಿಷ್ಟು ಕ್ರೇಜ್
ಇನ್ನು ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗಂತೂ ಜಿಮೇಲ್ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಎಲ್ಲರ ಜೊತೆಗೆ ಸಂಪರ್ಕದಲ್ಲಿ ಇರಲು ಜಿಮೇಲ್ ಅಕೌಂಟ್ ಬಳಕೆ ಮಾಡಲಾಗುತ್ತದೆ. ಕಂಪನಿ ತನ್ನ ರೂಲ್ಸ್ (rules) ಅಥವಾ ಇತರ ಯಾವುದೇ ರೀತಿಯ ಸಂದೇಶವನ್ನು ತನ್ನ ನೌಕರರಿಗೆ ತಿಳಿಸಲು ಜಿಮೇಲ್ ಅನ್ನೇ ಬಳಕೆ ಮಾಡುತ್ತದೆ.
ಜಿಮೇಲ್ ಗೆ ಇಂಟರ್ನೆಟ್ ಬೇಕೇ ಬೇಕು!
ಯಾರು ಜಿಮೇಲ್ ಅಕೌಂಟ್ ಹೊಂದಿರುತ್ತಾರೋ ಅವರು ಈ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಯಾಕೆಂದರೆ ಜಿಮೇಲ್ ಬಳಕೆ ಮಾಡಲು ಇಂಟರ್ನೆಟ್ (internet) ಬೇಕೇ ಬೇಕು. ಇಂಟರ್ನೆಟ್ ಸಹಾಯವಿಲ್ಲದೆ Gmail ಸಂದೇಶವನ್ನು ಓದುವುದು ಅಥವಾ ಸಂದೇಶ ಕಳುಹಿಸುವುದನ್ನು ಮಾಡಲು ಸಾಧ್ಯವಿಲ್ಲ.
ಆದರೆ ಗೂಗಲ್ ಈಗ ಅಪ್ಡೇಟ್ (Google update) ಒಂದನ್ನು ನೀಡಿದ್ದು ಇಂಟರ್ನೆಟ್ ಇಲ್ಲದೆಯೂ ಜಿಮೇಲ್ ಬಳಸುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ.
ಹೌದು, ಗೂಗಲ್, ಈಗ ಜಿಮೇಲ್ ನಲ್ಲಿ offline mode ಪರಿಚಯಿಸಿದೆ. ಹಾಗಾಗಿ ಇನ್ನು ಮುಂದೆ ಇಂಟರ್ನೆಟ್ ಸಹಾಯವಿಲ್ಲದೆ ಆಫ್ ಲೈನ್ (offline) ನಲ್ಲಿಯೂ ಕೂಡ ಜಿಮೇಲ್ ಸಂದೇಶವನ್ನು ಓದುವುದು ಹಾಗೂ ಜಿಮೇಲ್ ಮೂಲಕ ಸಂದೇಶ ಕಳುಹಿಸುವುದನ್ನು ಮಾಡಬಹುದು.
₹10,000 ಕ್ಕಿಂತ ಕಡಿಮೆ ಬೆಲೆಗೆ 50MP ಕ್ಯಾಮೆರಾ, 5000mAh ಬ್ಯಾಟರಿ ಇರೋ 5G ಫೋನ್ ಖರೀದಿಸಿ
ಆಫ್ಲೈನ್ ನಲ್ಲಿ ಜಿಮೇಲ್ ಬಳಸುವುದು ಹೇಗೆ?
ನಂತರ ಸೆಟ್ಟಿಂಗ್ಸ್ ನಲ್ಲಿ ಕಸ್ಟಮೈಸ್ (customise) ಮಾಡಿಕೊಳ್ಳುವುದರ ಮೂಲಕ ನೀವು ಎಷ್ಟು ದಿನಗಳ ಮೇಲ್ ಸಿಂಕನೈಸ್ (synchronise) ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಬೇಕು.
ಈ ಪ್ರಕ್ರಿಯೆ ಮುಗಿದ ನಂತರ ಸೇವ್ ಚೇಂಜಸ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಈಗ ನಿಮ್ಮ ಆಫ್ಲೈನ್ Gmail ಮೋಡ್ ಸಕ್ರಿಯಗೊಳ್ಳುತ್ತದೆ. ಹೀಗೆ ಮಾಡಿದ್ರೆ ನೀವು ಆಫ್ಲೈನ್ ನಲ್ಲಿಯೂ mail ಸಂದೇಶ ಪಡೆದುಕೊಳ್ಳಲು ಹಾಗೂ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ.
ಹಾಗಾಗಿ ಇನ್ನು ಮುಂದೆ ಇಂಟರ್ನೆಟ್ ಸಿಗುತ್ತಿಲ್ಲ ಅಥವಾ ಇಂಟರ್ನೆಟ್ ಡಾಟಾ (internet data) ಮುಗಿದು ಹೋಗಿದೆ ಎನ್ನುವ ಕಾರಣಕ್ಕೆ ಜಿಮೇಲ್ ಬಳಕೆ ಮಾಡದೆ ಪರಿತಪಿಸುವ ಅಗತ್ಯವಿಲ್ಲ ಆಫ್ಲೈನ್ ಮೂಲಕ Gmail ಸಂದೇಶ ಕಳುಹಿಸಬಹುದು.
Gmail will work even without the Internet, Learn how to use it
Follow us On
Google News |