ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, 11 ರೂಪಾಯಿಗೆ ರಿಚಾರ್ಜ್ ಮಾಡಿದ್ರೆ 10GB ಡೇಟಾ
ಏರ್ಟೆಲ್ ಗ್ರಾಹಕರು 10 ಜಿಬಿ ಡೇಟಾವನ್ನು ಕೇವಲ 11 ರೂಪಾಯಿಗಳಿಗೆ ಪಡೆದುಕೊಳ್ಳಬಹುದು. ಇದರ ವ್ಯಾಲಿಡಿಟಿ ಕೇವಲ ಒಂದು ಗಂಟೆಗಳು ಮಾತ್ರ.
- ಕೇವಲ 11 ರೂಪಾಯಿಗೆ ಏರ್ಟೆಲ್ ರಿಚಾರ್ಜ್ ಪ್ಲಾನ್
- 49 ರೂಪಾಯಿ ರಿಚಾರ್ಜ್ ಮಾಡಿದ್ರೆ 20GB ಡಾಟಾ ಸಿಗುತ್ತೆ
- ರೂ.50 ಒಳಗಿನ ರಿಚಾರ್ಜ್ ಪ್ಲಾನ್ ಘೋಷಿಸಿದ ಏರ್ಟೆಲ್ ಕಂಪನಿ
Airtel Recharge Plan : ಇತ್ತೀಚಿಗೆ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಏರಿಕೆ ಮಾಡಿರುವುದು ಗ್ರಾಹಕರ ಕೋಪಕ್ಕೆ ಕಾರಣವಾಗಿದೆ. ಆದರೂ ಕೆಲವು ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಕಡಿಮೆ ಮಾಡಿದೆ ಜೊತೆಗೆ ಹೊಸ ಕಡಿಮೆ ದರದ ರಿಚಾರ್ಜ್ ಪ್ಲಾನ್ (Recharge Plan) ಅನ್ನು ಪರಿಚಯಿಸಿವೆ.
ರೂ.50 ಗಿಂತಲೂ ಕಡಿಮೆ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಏರ್ಟೆಲ್
ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿ ಆಗಿರುವ ಭಾರ್ತಿ ಏರ್ಟೆಲ್, ಇದೀಗ 11 ರೂಪಾಯಿಗಳಿಂದ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. 50 ರೂಪಾಯಿ ಒಳಗಿನ ರಿಚಾರ್ಜ್ ಪ್ಲಾನ್ ಗಳನ್ನು ಬಳಸಿಕೊಂಡು ಡಾಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಈಗಾಗಲೇ ವಾಯ್ಸ್ ಓನ್ಲಿ ರಿಚಾರ್ಜ್ ಪ್ಲಾನ್ ಅನ್ನು TRAI ನಿಯಮಾನುಸಾರವಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡಿವೆ. ಏರ್ಟೆಲ್ ಡೇಟಾ ಪ್ಲಾನ್ ಗಳ ಬಗ್ಗೆ ನೋಡುವುದಾದರೆ,
* 11 ರೂಪಾಯಿಗಳ ರಿಚಾರ್ಜ್ ಪ್ಲಾನ್; 10 ಜಿಬಿ ಡೇಟಾವನ್ನು ಕೇವಲ 11 ರೂಪಾಯಿಗಳಿಗೆ ಪಡೆದುಕೊಳ್ಳಬಹುದು. ಇದರ ವ್ಯಾಲಿಡಿಟಿ ಕೇವಲ ಒಂದು ಗಂಟೆಗಳು ಮಾತ್ರ.
* 22 ರೂಪಾಯಿ ರಿಚಾರ್ಜ್ ಪ್ಲಾನ್; ಇದರಲ್ಲಿ ಒಂದು ದಿನದ ವ್ಯಾಲಿಡಿಟಿಗೆ 1GB ಡೇಟಾ ಪಡೆದುಕೊಳ್ಳಬಹುದು.
* 26 ರೂಪಾಯಿ ರಿಚಾರ್ಜ್ ಪ್ಲಾನ್; ಒಂದು ದಿನದ ವ್ಯಾಲಿಡಿಟಿಯೊಂದಿಗೆ ಬರುವ ಈ ರಿಚಾರ್ಜ್ ಪ್ಲಾನ್ ನಲ್ಲಿ 1.5GB ಡೇಟಾ ಪ್ರಯೋಜನ ಸಿಗುತ್ತದೆ.
* 33 ರೂಪಾಯಿಯ ರಿಚಾರ್ಜ್ ಪ್ಲಾನ್; ಇದರಲ್ಲಿ 2GB ಡೇಟಾವನ್ನು ಪಡೆಯಬಹುದು. ಇದರ ವ್ಯಾಲಿಡಿಟಿ ಕೂಡ 24 ಗಂಟೆಗಳು.
* 49 ರೂಪಾಯಿಗಳ ರಿಚಾರ್ಜ್ ಪ್ಲಾನ್; ಇದು ಒಂದು ದಿನದ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು 20 ಜಿಬಿ ಡಾಟಾವನ್ನು ಒಂದು ದಿನಕ್ಕೆ ಪಡೆಯಬಹುದು.
ಹೆಚ್ಚುವರಿ ಡೇಟಾ ಅಗತ್ಯ ಇರುವವರು ಈ ಮೇಲಿನ ಅತಿ ಕಡಿಮೆ ವೆಚ್ಚದ ರಿಚಾರ್ಜ್ ಪ್ಲಾನ್ ಉಪಯೋಗಿಸಿಕೊಳ್ಳಬಹುದು
Good news for Airtel users, Get 10GB data for just 11 recharge