ವಾಟ್ಸಪ್ ನಲ್ಲಿ ಡಿಲೀಟ್ ಮಾಡಿರೋ ಮೆಸೇಜ್ ಓದೋಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್

Story Highlights

ಡಿಲೀಟ್ ಆಗಿರುವ ಮೆಸೇಜನ್ನು ನಾವು ವಾಟ್ಸಾಪ್ನಲ್ಲಿ (WhatsApp) ತಿಳಿದುಕೊಳ್ಳಲು ಸಾಧ್ಯವಿಲ್ಲ. ಹಾಗಂತ ಬೇಸರ ಪಟ್ಕೊಳ್ಬೇಡಿ, ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ (third party application)ಗಳು ಈ ಅಸಾಧ್ಯವನ್ನು ಕೂಡ ಸಾಧ್ಯವಾಗಿಸಿದೆ

ಮೆಟಾ ಮಾಲೀಕತ್ವದ ವಾಟ್ಸಪ್ (WhatsApp Messenger) ಇಂದು ಪ್ರತಿಯೊಬ್ಬರ ಜೀವನದಲ್ಲಿಯೂ ಹಾಸು ಹೊಕ್ಕಾಗಿದೆ ಎನ್ನಬಹುದು. ಪ್ರಪಂಚಾದ್ಯಂತ ಮಿಲಿಯನ್ಗಟ್ಟಲೆ ಜನ ವಾಟ್ಸಪ್ ಅನ್ನು ಪ್ರಮುಖ ಮೆಸೆಂಜರ್ ಆಗಿ ಬಳಸುತ್ತಾರೆ.

ಇನ್ನು ಭಾರತದಲ್ಲಿ ಅಂತೂ ಬಿಡಿ, ಸ್ಮಾರ್ಟ್ ಫೋನ್ (smartphone) ಇರುವವರ ಪ್ರತಿಯೊಬ್ಬರ ಮೊಬೈಲ್ ನಲ್ಲಿಯೂ ಕೂಡ ವಾಟ್ಸಪ್ ಎನ್ನುವ ಮೆಸೆಂಜರ್ ಅಪ್ಲಿಕೇಶನ್ ಇದ್ದೇ ಇರುತ್ತೆ.

Google Pixel ಸ್ಮಾರ್ಟ್‌ಫೋನ್ ಮೇಲೆ ಡಿ.31 ರವರೆಗೆ ₹16000 ಡೈರೆಕ್ಟ್ ಡಿಸ್ಕೌಂಟ್

ವಾಟ್ಸಪ್ ನಲ್ಲಿದೆ ಹತ್ತು ಹಲವು ಫೀಚರ್ ಗಳು! (WhatsApp has lots of features)

ಮೆಟಾ ತನ್ನ ವಾಟ್ಸಪ್ ನಲ್ಲಿ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಫೀಚರ್ ಗಳನ್ನು ಬಿಡುಗಡೆ ಮಾಡಿದೆ, ನಾವು ವಾಟ್ಸಪ್ ಅನ್ನು ಕರೆ ಮಾಡುವುದಕ್ಕೆ ಮೆಸೇಜ್ ಕಳುಹಿಸುವುದಕ್ಕೆ ಫೋಟೋ ಅಥವಾ ಇತರ ಡಾಕ್ಯುಮೆಂಟ್ಸ್ (documents) ಕಳುಹಿಸುವುದಕ್ಕೆ ಅಷ್ಟೇ ಯಾಕೆ ಇತ್ತೀಚಿನ ದಿನಗಳಲ್ಲಿ ಪೇಮೆಂಟ್ (payment) ಮಾಡುವುದಕ್ಕೂ ಕೂಡ ಬಳಸಿಕೊಳ್ಳುತ್ತಿದ್ದೇವೆ.

ಆದರೆ ವಾಟ್ಸಪ್ ನಲ್ಲಿ ಇರುವ ಫೀಚರ್ ಗಳು ಇಷ್ಟೇ ಅಲ್ಲ, ನೂರಾರು ಫೀಚರ್ ಗಳು ಇವೆ. ಆದರೆ ವಾಟ್ಸಪ್ ಬಳಸುವ ಎಲ್ಲರಿಗೂ ಇದರ ಬಗ್ಗೆ ಗೊತ್ತಿರುವುದಿಲ್ಲ. ಇಂತಹ ಒಂದು ಕುತೂಹಲಕಾರಿ ವಿಷಯವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ, ಮುಂದೆ ಓದಿ.

ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ? (How to read deleted WhatsApp messages)

ಇತ್ತೀಚೆಗೆ ವಾಟ್ಸಾಪ್ ಇದೊಂದು ಸಕ್ಕತ್ ಆಗಿರುವ ಫೀಚರ್ (new feature) ಬಿಡುಗಡೆ ಮಾಡಿದೆ, ನಾವು ಯಾವುದಾದರೂ ವಾಟ್ಸಾಪ್ ಗ್ರೂಪ್ (WhatsApp group) ನಲ್ಲಿ ಅಥವಾ ಯಾರಿಗಾದರೂ ವಯಕ್ತಿಕ ಮೆಸೇಜ್ ಅನ್ನು ತಪ್ಪಾಗಿ ಕಳುಹಿಸಿದರೆ ತಕ್ಷಣವೇ ಅದನ್ನ ಅವರಿಗೂ ಕಾಣದಂತೆ ಡಿಲೀಟ್ ಮಾಡಬಹುದು. ಆದರೆ ಹೀಗೆ ನಮ್ಮ ಸ್ನೇಹಿತರಿಂದ ಬಂದಿರುವ ಮೆಸೇಜ್ ತಕ್ಷಣಕ್ಕೆ ಡಿಲೀಟ್ ಆದರೆ ಆ ಮೆಸೇಜ್ ಏನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ.

ಹಾಗಂತ ಡಿಲೀಟ್ ಆಗಿರುವ ಮೆಸೇಜನ್ನು ನಾವು ವಾಟ್ಸಾಪ್ನಲ್ಲಿ (WhatsApp) ತಿಳಿದುಕೊಳ್ಳಲು ಸಾಧ್ಯವಿಲ್ಲ. ಹಾಗಂತ ಬೇಸರ ಪಟ್ಕೊಳ್ಬೇಡಿ, ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ (third party application)ಗಳು ಈ ಅಸಾಧ್ಯವನ್ನು ಕೂಡ ಸಾಧ್ಯವಾಗಿಸಿದೆ.

iPhone 14 ಫೋನ್ 128GB ಮಾದರಿಯಲ್ಲಿ ₹14000 ರಿಯಾಯಿತಿ! ಫ್ಲಿಪ್‌ಕಾರ್ಟ್‌ನಲ್ಲಿ ಆಫರ್

ಡಿಲೀಟ್ ಆದ ಮೆಸೇಜ್ ಓದಲು ಈ ಅಪ್ಲಿಕೇಶನ್ ಗಳನ್ನು ಬಳಸಿ!

WhatsAppನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ (Google Play Store) ವಾಟ್ಸಪ್ ನಿಂದ ಡಿಲೀಟ್ ಆದ ಮೆಸೇಜ್ ಅನ್ನು ಪುನಃ ಓದಲು ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು, ಉದಾಹರಣೆಗೆ WAMR, WhatsDeleted, Deleted Whatsappmessage ಈ ರೀತಿಯಾದಂತಹ ಕೆಲವು ಅಪ್ಲಿಕೇಶನ್ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ ಇವೆ..

ನೀವು ಇದನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವುದರ ಮೂಲಕ ಡಿಲೀಟ್ ಆಗಿರುವ ಮೆಸೇಜ್ ಅನ್ನು ಕೂಡ ಮತ್ತೆ ಪುನಃ ಓದಲು ಸಾಧ್ಯವಿದೆ.

ಈ ಅಪ್ಲಿಕೇಶನ್ ಬಳಸುವುದು ಹೇಗೆ?

ಮೊದಲು ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ Whatsappmessage ಎನ್ನುವ ಅಪ್ಲಿಕೇಶನ್ ಡೌನ್ಲೋಡ್ (Download) ಮಾಡಿಕೊಳ್ಳಿ ನಂತರ ಅದನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಲ್ಲಿ ಪರ್ಮಿಶನ್ ನೀಡಿದರೆ ಈ ಅಪ್ಲಿಕೇಶನ್ ಬಳಕೆಗೆ ಸಿದ್ಧವಾಗುತ್ತದೆ.

ನೀವು ಇದರಲ್ಲಿ ವಾಟ್ಸಪ್ ಮೆಸೆಂಜರ್ ಎನೇಬಲ್ ಮಾಡಬೇಕು. ಈ ರೀತಿ ಮಾಡಿದ್ರೆ ನಿಮ್ಮ ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ನೋಡಬಹುದು ಆದರೆ ಇದು ಕೆಲವು ಸಮಯಗಳವರೆಗೆ ಡಿಲೀಟ್ ಆಗಿರುವ ಮೆಸೇಜ್ ಮಾತ್ರ ವೀಕ್ಷಿಸಲು ಅನುಕೂಲ ಮಾಡಿಕೊಡುತ್ತದೆ.

ಬಹಳ ಹಿಂದಿನ ಮೆಸೇಜ್ ಅನ್ನು ನೀವು ನೋಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಈ ಅಪ್ಲಿಕೇಶನ್ ಗಳನ್ನು ಬಳಸುವಾಗ ನಿಮ್ಮ ಮೊಬೈಲ್ ಸ್ಟೋರೇಜ್ ಕೂಡ ಖಾಲಿ ಇರಬೇಕು ಸ್ಟೋರೇಜ್ ಫುಲ್ ಆಗಿದ್ದರೆ ಯಾವ ಡಾಕ್ಯುಮೆಂಟ್ಸ್ ಗಳನ್ನು ಪುನಃ ನೋಡಲು ಸಾಧ್ಯವಿಲ್ಲ. ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳು ಈ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಲ್ಲಿ ಸೇವ್ ಆಗುತ್ತದೆ ನೀವು ಅದನ್ನು ವೀಕ್ಷಿಸಬಹುದು.

ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸುವಾಗ ಎಚ್ಚರವಿರಲಿ!

ಈಗಂತೂ ಒಂದಲ್ಲ ಒಂದು ರೀತಿಯಲ್ಲಿ ಸ್ಕ್ಯಾಮ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ಲೋಡ್ (Download) ಮಾಡಿಕೊಳ್ಳುವುದಕ್ಕೂ ಮುನ್ನ ಆ ಅಪ್ಲಿಕೇಶನ್ ನಂಬಿಕೆಗೆ ಅರ್ಹತೆ ಎಂಬುದನ್ನ ಚೆಕ್ ಮಾಡಿಕೊಳ್ಳಿ.

ಗೂಗಲ್ ನಲ್ಲಿ ಪ್ರತಿಯೊಂದು ಅಪ್ಲಿಕೇಶನ್ (Apps) ಬಗ್ಗೆಯೂ ಕೂಡ ಮಾಹಿತಿ ಸಿಗುತ್ತದೆ ಹಾಗಾಗಿ ನಂಬಿಕಸ್ತ ಅಪ್ಲಿಕೇಶನ್ ಮಾತ್ರ ಡೌನ್ಲೋಡ್ ಮಾಡಿಕೊಂಡು ಬಳಸಿ. ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಆದ ನಂತರ ಮೊಬೈಲ್ ನಲ್ಲಿ ಇರುವ ಎಲ್ಲಾ ಡೇಟಾಗಳನ್ನು ಕೂಡ ವೀಕ್ಷಿಸಲು ಶಕ್ಯವಾಗಿರುತ್ತವೆ.

ಹಾಗಾಗಿ ನಿಮ್ಮ ಮೊಬೈಲ್ ಡಾಟಾವನ್ನು ಸುಲಭವಾಗಿ ಈ ಅಪ್ಲಿಕೇಶನ್ ನಡೆಸುವವರು ಪಡೆದುಕೊಳ್ಳಬಹುದು ಅಥವಾ ನಿಮ್ಮ ಮೊಬೈಲ್ ಹ್ಯಾಕ್ ಕೂಡ ಆಗಬಹುದು. ಹಾಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಗಮನವಹಿಸಿ ನಂತರ ನಿಮಗೆ ಡಿಲೀಟ್ ಆಗಿರುವ ಮೆಸೇಜ್ ನೋಡಲೇಬೇಕು ಎನ್ನುವ ಕುತೂಹಲ ಇದ್ರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಸಹಾಯ ಪಡೆದುಕೊಳ್ಳಬಹುದು.

Here is a simple trick to read deleted messages on WhatsApp

Related Stories