Jio Prepaid Plans: ಕ್ರಿಕೆಟ್ ಅಭಿಮಾನಿಗಳಿಗಾಗಿ ಜಿಯೋ ಮೂರು ಪ್ರಿಪೇಯ್ಡ್ ಯೋಜನೆಗಳು, ಸಂಪೂರ್ಣ ಮಾಹಿತಿ
Jio Prepaid Plans: ಮಾರ್ಚ್ 31 ರಿಂದ ಐಪಿಎಲ್ ಪಂದ್ಯಗಳು (IPL Match) ಪ್ರಾರಂಭವಾಗುವ ದೃಷ್ಟಿಯಿಂದ ರಿಲಯನ್ಸ್ ಜಿಯೋ ಕ್ರಿಕೆಟ್ ಅಭಿಮಾನಿಗಳಿಗೆ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
Jio Prepaid Plans: ಮಾರ್ಚ್ 31 ರಿಂದ ಐಪಿಎಲ್ ಪಂದ್ಯಗಳು (IPL Match) ಪ್ರಾರಂಭವಾಗುವ ದೃಷ್ಟಿಯಿಂದ ರಿಲಯನ್ಸ್ ಜಿಯೋ (Reliance Jio) ಕ್ರಿಕೆಟ್ ಅಭಿಮಾನಿಗಳಿಗೆ (Cricket Fans) ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು (Jio Prepaid Recharge Plans) ಪರಿಚಯಿಸಿದೆ.
ರಿಲಯನ್ಸ್ ಜಿಯೋ ಕ್ರಿಕೆಟ್ ಅಭಿಮಾನಿಗಳಿಗಾಗಿ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಪ್ರತಿದಿನ 3 ಜಿಬಿ ಮತ್ತು ಹೆಚ್ಚುವರಿ 2 ಜಿಬಿಯಿಂದ 40 ಜಿಬಿ ಡೇಟಾವನ್ನು ಉಚಿತವಾಗಿ ನೀಡಲಾಗುತ್ತದೆ. ಅವುಗಳ ಬೆಲೆ ರೂ. 999, ರೂ. 399, ರೂ. 219 ಅನ್ನು ಕಂಪನಿ ನಿರ್ಧರಿಸಿದೆ.
ಮಾರ್ಚ್ 31 ರಿಂದ ಐಪಿಎಲ್ ಪಂದ್ಯಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ ಎಂದು ಜಿಯೋ ಘೋಷಿಸಿದೆ. ಈ ರೀಚಾರ್ಜ್ ಯೋಜನೆಗಳು ಮಾರ್ಚ್ 24 ರಿಂದ ಬಳಕೆದಾರರಿಗೆ ಲಭ್ಯವಿರುತ್ತವೆ.
ಈ ಯೋಜನೆಗಳ ಸಂಪೂರ್ಣ ವಿವರಗಳು
ರೂ. 999 ರೀಚಾರ್ಜ್ ಬಳಕೆದಾರರು ದಿನಕ್ಕೆ 3GB ಡೇಟಾ, ಅನಿಯಮಿತ ಕರೆ ಸೌಲಭ್ಯ ಮತ್ತು ರೂ. 241 ಮೌಲ್ಯದ ವೊಚರ್ ನೀಡಲಾಗುತ್ತಿದೆ. ಈ ವೋಚರ್‌ನೊಂದಿಗೆ, ಬಳಕೆದಾರರು ಹೆಚ್ಚುವರಿ 40 GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆ 84 ದಿನಗಳು.
ರೂ. 399 ರೀಚಾರ್ಜ್ ಬಳಕೆದಾರರು 28 ದಿನಗಳ ಮಾನ್ಯತೆಯೊಂದಿಗೆ 3GB ದೈನಂದಿನ ಡೇಟಾವನ್ನು ಪಡೆಯುತ್ತಿರಿ, ಅನಿಯಮಿತ ಕರೆ ಮತ್ತು ರೂ. 61 ಮೌಲ್ಯದ ವೋಚರ್ ಲಭ್ಯವಿದೆ. ಇದರೊಂದಿಗೆ ಬಳಕೆದಾರರು 6GB ಡೇಟಾವನ್ನು ಪಡೆಯಬಹುದು.
ರೂ. 219 ರೀಚಾರ್ಜ್ ದಿನಕ್ಕೆ 3GB ಡೇಟಾ, ಅನಿಯಮಿತ ಕರೆ ಮತ್ತು ಹೆಚ್ಚುವರಿ 2GB ಡೇಟಾವನ್ನು ನೀಡುತ್ತದೆ. ಈ ಯೋಜನೆಯ ಮಾನ್ಯತೆ 14 ದಿನಗಳು.
ಈ ಯೋಜನೆಯೊಂದಿಗೆ ಜಿಯೋ ಕ್ರಿಕೆಟ್ ಡೇಟಾ ಆಡ್-ಆನ್ ಯೋಜನೆಗಳನ್ನು ಸಹ ಘೋಷಿಸಿದೆ. ಸಾಮಾನ್ಯ ರೀಚಾರ್ಜ್ ಜೊತೆಗೆ ರೂ. 222 ರಿಚಾರ್ಜ್ ನೊಂದಿಗೆ ನೀವು 50 GB ಡೇಟಾವನ್ನು ಪಡೆಯಬಹುದು. ಈ ಡೇಟಾವು ಸಾಮಾನ್ಯ ರೀಚಾರ್ಜ್ ಮಾನ್ಯತೆಯಷ್ಟು ದಿನಗಳವರೆಗೆ ಬಳಕೆದಾರರಿಗೆ ಲಭ್ಯವಿರುತ್ತದೆ.
ರೂ. 444 60 ದಿನಗಳ ಮಾನ್ಯತೆಯೊಂದಿಗೆ 100GB ಡೇಟಾವನ್ನು ನೀಡುತ್ತದೆ. ರೂ. 667 ರೀಚಾರ್ಜ್ 150 GB ಡೇಟಾವನ್ನು ನೀಡುತ್ತದೆ. ಇದರ ವ್ಯಾಲಿಡಿಟಿ 90 ದಿನಗಳು.
Jio has three prepaid Recharge plans for cricket fans
Follow us On
Google News |