ಸಿಹಿಸುದ್ದಿ! ಜಿಯೋ ಗ್ರಾಹಕರಿಗೆ ಕಮ್ಮಿ ಬೆಲೆಯ ಡೇಟಾ ಪ್ಯಾಕ್‌ಗಳ ಪಟ್ಟಿ ಬಿಡುಗಡೆ

ರಿಲಯನ್ಸ್ ಜಿಯೋ ಕೇವಲ ₹70 ರೂ. ಒಳಗಿನ ಅಗ್ಗದ ಡೇಟಾ ಪ್ಯಾಕ್‌ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕಡಿಮೆ ಬಜೆಟ್‌ ಡೇಟಾ ಹುಡುಕುತ್ತಿರುವ ಗ್ರಾಹಕರಿಗೆ ಇದು ಸಿಹಿ ಸುದ್ದಿ ಎನಿಸಲಿದೆ.

  • ₹19 ರಿಂದ ₹69ವರೆಗಿನ ಅಗ್ಗದ ಡೇಟಾ ಪ್ಯಾಕ್‌ಗಳು ಲಭ್ಯ
  • 1GB ರಿಂದ 6GBವರೆಗೆ ಡೇಟಾ ಲಭ್ಯತೆ
  • 1 ದಿನದಿಂದ 28 ದಿನಗಳವರೆಗಿನ validity option

ಡೇಟಾ ಬೇಡಿಕೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಅಗ್ಗದ ಡೇಟಾ ಪ್ಯಾಕ್‌ಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಅಂತಹದ್ದರಲ್ಲಿ ರಿಲಯನ್ಸ್ ಜಿಯೋ (Reliance Jio) ಗ್ರಾಹಕರಿಗೆ ₹70 ರೂಪಾಯಿ ಒಳಗಿನ ಹೊಸ ಹಾಗೂ existed data add-on plans ನೀಡಿದೆ.

ಈ ಪ್ಯಾಕ್‌ಗಳು ದಿನದ ಬಳಕೆಗೆ ಬಳಸುವವರಿಗೆ ಹಾಗೂ ಅತಿ ಕಡಿಮೆ ಡೇಟಾ ಬಳಕೆದಾರರಿಗೆ ಬಹುಪಯೋಗಿಯಾಗಬಹುದು.

ಇದನ್ನೂ ಓದಿ: ನಿಮ್ಮ WhatsApp ಅಕೌಂಟ್ ಹ್ಯಾಕ್ ಆಗೋ ಮುಂಚೆ ಈ Setting ಆನ್ ಮಾಡಿ

₹69 ಡೇಟಾ ಪ್ಯಾಕ್: 7 ದಿನಗಳ ಮಾನ್ಯತೆಯ ಈ ಪ್ಯಾಕ್‌ನಲ್ಲಿ ಗ್ರಾಹಕರು ಒಟ್ಟು 6GB ಡೇಟಾ ಪಡೆಯಬಹುದು. ಸಾಮಾನ್ಯ ಉಪಯೋಗಕ್ಕೆ ಸೂಕ್ತವಾದ ಈ ಪ್ಯಾಕ್ ಉತ್ತಮ ಆಯ್ಕೆ.

₹62 ಪ್ಯಾಕ್: ಇದು Jio Phone (ಜಿಯೋ ಫೋನ್) ಬಳಕೆದಾರರಿಗೆ ವಿಶೇಷವಾಗಿ ರೂಪುಗೊಳಿಸಲಾಗಿದ್ದು, 28 ದಿನಗಳ ಮಾನ್ಯತೆಯೊಂದಿಗೆ 6GB ಡೇಟಾ ಒದಗಿಸುತ್ತದೆ.

₹49 ಪ್ಯಾಕ್: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ದಿನದ validity ಜೊತೆಗೆ unlimited data ಲಭ್ಯವಿದೆ. (Fair Usage Policy ಅನ್ವಯಿಸುತ್ತದೆ).

ಇದನ್ನೂ ಓದಿ: ಥೇಟ್ ಐಫೋನ್ ತರ ಕಾಣೋ ಫೋನ್! ಆದ್ರೆ ಬೆಲೆ ₹7 ಸಾವಿರಕ್ಕೂ ಕಡಿಮೆ

Jio Recharge Plans

₹29 ಪ್ಯಾಕ್: 2 ದಿನಗಳ ವ್ಯಾಲಿಡಿಟಿ ಜೊತೆಗೆ 2GB ಡೇಟಾ ಪಡೆಯುವ ಈ ಪ್ಯಾಕ್ ಸಣ್ಣ ಅವಧಿಯ ಬಳಕೆದಾರರಿಗೆ ಸೂಕ್ತ.

₹26 ಪ್ಯಾಕ್: ಜಿಯೋ ಫೋನ್ ಬಳಕೆದಾರರಿಗಾಗಿ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 2GB ಡೇಟಾ ಲಭ್ಯ.

ಇದನ್ನೂ ಓದಿ: ₹16,000 ಕ್ಕಿಂತ ಕಮ್ಮಿ ಬೆಲೆಗೆ ಸ್ಮಾರ್ಟ್ ಟಿವಿ! ಈ ಬಿಗ್ ಆಫರ್ ಮಿಸ್ ಮಾಡ್ಬೇಡಿ

₹19 ಪ್ಯಾಕ್: ಒಂದು ದಿನಕ್ಕೆ 1GB ಡೇಟಾ ನೀಡುವ ಈ ಪ್ಯಾಕ್ ಹೆಚ್ಚು ಕಡಿಮೆ ಬಳಸುವ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಕಿವಿಮಾತು.

ಇವುಗಳನ್ನು recharge ಮಾಡಲು ನೀವು MyJio app ಅಥವಾ Jio ವೆಬ್‌ಸೈಟ್‌ನಿಂದ (Jio official site)‌ ನಿಮ್ಮ Jio number ಮೂಲಕ recharge ಮಾಡಬಹುದು. ಹೆಚ್ಚಿನ ಡೇಟಾ ಪ್ಯಾಕ್‌ಗಳನ್ನು ಪಡೆಯುವುದು ಈಗ ಕೈಗೆಟಕುವ ದರದಲ್ಲಿದೆ.

Jio offers data packs under 70, Full list of add-on plans

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories