Jio Recharge Plan: ಜಿಯೋ ವಾರ್ಷಿಕ ಪ್ಲಾನ್ಗಳು! ಒಂದಕ್ಕಿಂತ ಒಂದು ಸೂಪರ್, ವರ್ಷಪೂರ್ತಿ ಟೆನ್ಷನ್ ಫ್ರೀ
Jio Recharge Plan: ಒಂದೇ ಬಾರಿ ರೀಚಾರ್ಜ್ ಮಾಡಿ ವರ್ಷಪೂರ್ತಿ ಟೆನ್ಷನ್ ಫ್ರೀ ಆಗಬೇಕು ಎಂದರೆ ಜಿಯೋದ ಎರಡು ವಾರ್ಷಿಕ ಪ್ಲಾನ್ಗಳು ಉತ್ತಮ ಆಯ್ಕೆ. ಡೇಟಾ, OTT, 5G ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ.
Jio Recharge Plan: 2025 ಅಂತ್ಯಕ್ಕೆ ಬಂದಂತೆ ಹಲವಾರು ಜಿಯೋ ಬಳಕೆದಾರರು ಮುಂದಿನ ವರ್ಷ ಯಾವ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಇದ್ದಾರೆ.
ತಿಂಗಳಿಗೆ ಒಂದು ಬಾರಿ ರೀಚಾರ್ಜ್ ಮಾಡಬೇಕಾಗಿಲ್ಲದೆ, ಜಿಯೋ ಎರಡು ವಾರ್ಷಿಕ ಪ್ಲಾನ್ಗಳನ್ನು ಬಿಡುಗಡೆ ಮಾಡಿದ್ದು ಡೇಟಾ ಹೆಚ್ಚಾಗಿ ಬಳಕೆ ಮಾಡುವವರಿಗೆ ಇವು ಸೂಕ್ತವಾಗಿವೆ. ಇದರಲ್ಲೂ OTT, ಪ್ರೀಮಿಯಂ ಆಪ್ಸ್ ಮತ್ತು 5G ವೇಗಕ್ಕೆ ವಿಶೇಷ ಮಹತ್ವ ನೀಡಲಾಗಿದೆ.
₹3,999 ಜಿಯೋ ವಾರ್ಷಿಕ ಪ್ಲಾನ್ – ಡೇಟಾ ಮತ್ತು FanCode ಪ್ರಿಯರಿಗೆ
ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2.5GB ಡೇಟಾ ಸಿಗುತ್ತದೆ.
ಮುಖ್ಯ ವೈಶಿಷ್ಟ್ಯಗಳು:
- FanCode ಸಬ್ಸ್ಕ್ರಿಪ್ಶನ್
- ಎರಡು OTT ಆಪ್ಗಳ ಪ್ರವೇಶ
- ಅನ್ಲಿಮಿಟೆಡ್ 5G ಸೇವೆ
ಲೈವ್ ಕ್ರಿಕೆಟ್, ಕ್ರೀಡೆ ಮತ್ತು ಸ್ಟ್ರೀಮಿಂಗ್ಗಳನ್ನು ಹೆಚ್ಚಾಗಿ ನೋಡುವವರಿಗೆ ಇದು ಹೆಚ್ಚು ಸೂಕ್ತ. ಸಪೋರ್ಟ್ ಇರುವ ಪ್ರದೇಶದಲ್ಲಿ 5G ವೇಗ ವರ್ಷಪೂರ್ತಿ ನಿರಂತರವಾಗಿ ಸಿಗುತ್ತದೆ.
₹3,599 ಜಿಯೋ ವಾರ್ಷಿಕ ಪ್ಲಾನ್, AI ಬಳಕೆದಾರರಿಗೆ ಸೂಕ್ತ ಆಯ್ಕೆ
ಈ ಪ್ಯಾಕ್ ಕೂಡ 365 ದಿನಗಳ ವಾಲಿಡಿಟಿಯಲ್ಲೇ ಬರುತ್ತದೆ ಮತ್ತು ದಿನಕ್ಕೆ 2.5GB ಡೇಟಾ ಒದಗಿಸುತ್ತದೆ. ಪ್ರಮುಖ ವ್ಯತ್ಯಾಸ ಅಂದರೆ ಡಿಜಿಟಲ್ ಪ್ರಯೋಜನಗಳಲ್ಲಿ:
- FanCode ಬದಲಾಗಿ Google Gemini Pro (ಸುಮಾರು ₹3,500 ಮೌಲ್ಯ)
- ಎರಡು OTT ಆಪ್ಸ್
- ಅನ್ಲಿಮಿಟೆಡ್ 5G ಸೇವೆಗಳು
AI ಉಪಕರಣಗಳಿಂದ ಕೆಲಸ, ಓದು ಅಥವಾ ಹೊಸ ಪ್ರಯೋಗಗಳನ್ನು ಮಾಡುವವರಿಗೆ ಈ ಪ್ಲಾನ್ ಹೆಚ್ಚು ಲಾಭದಾಯಕ.
ಈ ಪ್ಲಾನ್ಗಳನ್ನು ಯಾವಾಗ ರೀಚಾರ್ಜ್ ಮಾಡಬೇಕು?
ನಿಮ್ಮ ಹೊಸ ಪ್ಲಾನ್ 2026ರ ಮೊದಲ ದಿನದಿಂದಲೇ ಯಾವುದೇ ವ್ಯತ್ಯಾಸವಿಲ್ಲದೆ ಕಾರ್ಯನಿರ್ವಹಿಸಬೇಕೆಂದರೆ ಡಿಸೆಂಬರ್ 31, 2025 ರಂದು ರೀಚಾರ್ಜ್ ಮಾಡುವುದು ಉತ್ತಮ.
ಒಂದಷ್ಟು ಸಮಯ ಬಿಟ್ಟು ರಿಚಾರ್ಜ್ ಮಾಡುವವರಾದರೆ, 2025 ನಂತರ ಯಾವ ದಿನವಾದರೂ ರೀಚಾರ್ಜ್ ಮಾಡಬಹುದು. ಈ ರೀತಿ ನಿಮ್ಮ ವಾರ್ಷಿಕ ಪ್ಲಾನ್ 2026ರ ಅಂತ್ಯದವರೆಗೂ ಸುಗಮವಾಗಿ ಮುಂದುವರಿಯುತ್ತದೆ.
ತಿಂಗಳಿಗೊಂದು ರೀಚಾರ್ಜ್ ಮಾಡುವ ತಲೆನೋವು ತಪ್ಪಿಸಿಕೊಳ್ಳಲು ಈ ಎರಡು ಜಿಯೋ ವಾರ್ಷಿಕ ಪ್ಲಾನ್ಗಳು ಬಳಕೆದಾರಿಗೆ ಉತ್ತಮ ಪರಿಹಾರವಾಗಬಹುದು.



