Technology

ಕಡಿಮೆ ಬಜೆಟ್‌ನಲ್ಲಿ ಹೊಸ 5G ಮೊಬೈಲ್, ಸುಮ್ನೆ ಚಾನ್ಸ್ ಮಿಸ್ ಮಾಡ್ಕೋಬೇಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್06 5ಜಿ ಕಡಿಮೆ ಬಜೆಟ್‌ನಲ್ಲಿ ಬಿಡುಗಡೆ! 6.7 ಇಂಚು ಡಿಸ್ಪ್ಲೇ, 50MP ಕ್ಯಾಮೆರಾ, 5000mAh ಬ್ಯಾಟರಿ, 25W ಫಾಸ್ಟ್ ಚಾರ್ಜಿಂಗ್, ಆಕರ್ಷಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯ. ಮಾರಾಟ ಫೆಬ್ರವರಿ 20ರಿಂದ ಪ್ರಾರಂಭ!

  • ₹9,999 ಪ್ರಾರಂಭಿಕ ದರದಲ್ಲಿ ಸ್ಯಾಮ್‌ಸಂಗ್ 5ಜಿ ಸ್ಮಾರ್ಟ್‌ಫೋನ್ ಲಭ್ಯ.
  • 50MP ಕ್ಯಾಮೆರಾ, 5000mAh ಬ್ಯಾಟರಿ, 25W ಫಾಸ್ಟ್ ಚಾರ್ಜಿಂಗ್.
  • ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಫೆಬ್ರವರಿ 20ರಿಂದ ಮಾರಾಟ.

Samsung Galaxy F06 5G : ಸ್ಯಾಮ್‌ಸಂಗ್ ಕೇವಲ ₹10,000 ಒಳಗೆ 5ಜಿ ಸ್ಮಾರ್ಟ್‌ಫೋನ್ ನೀಡುವ ಮೂಲಕ ಗ್ರಾಹಕರ ಮನಸೆಳೆಯಲು ಹೊಸ ಗ್ಯಾಲಕ್ಸಿ ಎಫ್06 5ಜಿ ಮಾರುಕಟ್ಟೆಗೆ ಬಂದಿದ್ದು, ಇದು ಎಂಟ್ರಿ-ಲೆವೆಲ್ ಫೋನ್ ಹುಡುಕುವವರಿಗೆ ದೊಡ್ಡ ಆಫರ್ ಆಗಿದೆ.

ಈ ಫೋನಿನ ಹೈಲೈಟ್ ಎಂದರೆ, ಕೇವಲ ₹9,999 ಪ್ರಾರಂಭಿಕ ದರದಲ್ಲಿ ಸಿಗಲಿದೆ. 6.7 ಇಂಚುಗಳ ದೊಡ್ಡ ಡಿಸ್ಪ್ಲೇ ಮತ್ತು 90Hz ರಿಫ್ರೆಶ್ ರೇಟ್ ಹೊಂದಿರುವುದರಿಂದ ವೀಕ್ಷಣಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.

ಕಡಿಮೆ ಬಜೆಟ್‌ನಲ್ಲಿ ಹೊಸ 5G ಮೊಬೈಲ್, ಸುಮ್ನೆ ಚಾನ್ಸ್ ಮಿಸ್ ಮಾಡ್ಕೋಬೇಡಿ

ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ಲಸ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುವ ಈ ಫೋನ್, ಸ್ಯಾಮ್‌ಸಂಗ್‌ನ ಸ್ವಂತ ವನ್ ಯುಐ ಸಾಫ್ಟ್‌ವೇರ್ ಮೇಲೆ ಆಧಾರಿತವಾಗಿದೆ.

ಎರಡು ವೇರಿಯಂಟ್ಸ್, ಆಕರ್ಷಕ ಬೆಲೆ

ನಿಮ್ಮ ಬಜೆಟ್ ಮತ್ತು ಅಗತ್ಯವನ್ನು ಪರಿಗಣಿಸಿ, ಈ ಫೋನ್ ಎರಡು ವೇರಿಯಂಟ್ಸ್‌ನಲ್ಲಿ ಲಭ್ಯವಿದೆ. 4GB RAM + 128GB ಸ್ಟೋರೇಜ್ ಮಾದರಿ ₹9,999ಗೆ, 6GB RAM + 128GB ಸ್ಟೋರೇಜ್ ವೇರಿಯಂಟ್ ₹10,999ಗೆ ಮಾರ್ಕೆಟ್‌ಗೆ ಬಂದಿದೆ. ಅಲ್ಲದೇ, ₹500 ತಕ್ಷಣದ ಬ್ಯಾಂಕ್ ಕ್ಯಾಶ್‌ಬ್ಯಾಕ್ ಕೂಡ ನೀಡಲಾಗುತ್ತಿದೆ, ಇದು ಖರೀದಿಯನ್ನು ಮತ್ತಷ್ಟು ಆಕರ್ಷಕಗೊಳಿಸುತ್ತದೆ.

ಕ್ಯಾಮೆರಾ & ಬ್ಯಾಟರಿ:

ಈ ಫೋನಿನ ಫೋಟೋಗ್ರಫಿ ವಿಭಾಗದಲ್ಲೂ ಉತ್ತಮ ಫೀಚರ್‌ಗಳಿವೆ. ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 2MP ಡೆಪ್ತ್ ಸೆನ್ಸಾರ್, ಮತ್ತು ಸೆಲ್ಫಿ ಪ್ರಿಯರಿಗೆ 8MP ಮುಂಭಾಗ ಕ್ಯಾಮೆರಾ ನೀಡಲಾಗಿದೆ.

ಫೋಟೋ ಮತ್ತು ವಿಡಿಯೋ ಕ್ವಾಲಿಟಿ ಉತ್ತಮವಾಗಿರುವುದರಿಂದ ಈ ಫೋನ್ ಹೊಸ ಜನರೇಶನ್‌ಗಾಗಿ ತಯಾರಾದಂತಿದೆ. ಜೊತೆಗೆ, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 25W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿರುವುದರಿಂದ ಚಾರ್ಜಿಂಗ್ ಸಮಸ್ಯೆಯಿಲ್ಲ.

Samsung Galaxy F06 5G

ವಿಶೇಷ ಫೀಚರ್‌ಗಳು:

ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್
ಶಬ್ದ ಕಡಿಮೆ ಮಾಡುವ ‘ಸಾಮ್ಸಂಗ್ ವಾಯ್ಸ್ ಫೋಕಸ್’ ತಂತ್ರಜ್ಞಾನ
ನಾಲ್ಕು ವರ್ಷದ ಆಂಡ್ರಾಯ್ಡ್ ಅಪ್‌ಡೇಟ್ ಮತ್ತು ಭದ್ರತಾ ಪ್ಯಾಚ್‌ಗಳು

ಮಾರ್ಕೆಟ್‌ನಲ್ಲಿ ಭಾರೀ ನಿರೀಕ್ಷೆ!

ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ಅಧಿಕೃತ ವೆಬ್‌ಸೈಟ್, ಮತ್ತು ಕೆಲವೊಂದು ರಿಟೈಲ್ ಅಂಗಡಿಗಳಲ್ಲಿ ಮಾರಾಟ ಪ್ರಾರಂಭವಾಗಲಿದ್ದು, ಫೆಬ್ರವರಿ 20 ರಿಂದ ಖರೀದಿ ಮಾಡಬಹುದು. ಬಜೆಟ್ ಸೆಗ್ಮೆಂಟ್‌ನಲ್ಲಿ 5ಜಿ ಫೋನ್ ಹುಡುಕುತ್ತಿರುವವರಿಗೆ ಇದು ಭರ್ಜರಿ ಆಯ್ಕೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮ್ಸಂಗ್ ಬ್ರಾಂಡ್‌ನ ವಿಶ್ವಾಸಾರ್ಹತೆ ಹಾಗೂ ಕಡಿಮೆ ಬೆಲೆಯ ಕಾರಣಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ನಿರೀಕ್ಷೆಯಾಗಿದೆ.

Samsung Galaxy F06 5G Launched at Budget Price

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories