ಸಾಮಾನ್ಯ ಬೈಕ್ ಗಳನ್ನು ಬಳಸುತ್ತಿರುವವರಿಗೆ ಒಂದು ಗುಡ್ ನ್ಯೂಸ್ ಇದೆ, ನೀವು ಇನ್ನು ಮುಂದೆ ಪೆಟ್ರೋಲ್ ಹಾಗೂ ಡೀಸೆಲ್ ಖರ್ಚಿಗಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಇದೊಂದು ಎಲೆಕ್ಟ್ರಿಕ್ ಬೈಕ್ (Electric Bike) ನಿಮ್ಮ ಬಳಿ ಇದ್ದರೆ ಕೇವಲ 23 ಪೈಸೆಗಳಲ್ಲಿ ಒಂದು ಕಿಲೋಮೀಟರ್ ದೂರ ಕ್ರಮಿಸಬಹುದು. ಹೀಗೆ ಅತಿ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಲು ಬಯಸಿದರೆ ಜಾಯ್ ಇ-ಬೈಕ್ ಮಾನ್‌ಸ್ಟರ್ ಉತ್ತಮ ಆಯ್ಕೆ ಎನ್ನಬಹುದು.
ಜಾಯ್ ಇ-ಬೈಕ್ ಮಾನ್‌ಸ್ಟರ್ ವೈಶಿಷ್ಟ್ಯಗಳು!
ಸದ್ಯ ಮಾರುಕಟ್ಟೆಯಲ್ಲಿ Revolt RV 400 ಮತ್ತು Odyssey Evoque ನೊಂದಿಗೆ ನೇರವಾಗಿ ಸ್ಪರ್ಧಿಸಲಿದೆ ಜಾಯ್ ಇ-ಬೈಕ್ ಮಾನ್‌ಸ್ಟರ್. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬೈಕ್ ಖರೀದಿ ಮಾಡುವುದು ದುಬಾರಿಯಾಗಿದೆ ಯಾಕೆಂದರೆ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ.
ಈ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಬಗ್ಗೆ ಜನರಲ್ಲಿ ಒಲವು ಮೂಡಿದೆ. ಎಲೆಕ್ಟ್ರಿಕ್ ವಾಹನಗಳನ್ನು ಒಮ್ಮೆ ಖರೀದಿ ಮಾಡುವಾಗ ದುಬಾರಿ ಎನಿಸಿದರು ಒಟ್ಟಾರೆಯಾಗಿ ಇದರ ವೆಚ್ಚ ಬಹಳ ಕಡಿಮೆ. ನೀವು ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಬಳಸಲು ಆರಂಭಿಸಿದರೆ ಸಾಕಷ್ಟು ದೊಡ್ಡ ಮೊತ್ತದ ಹಣವನ್ನು ಉಳಿಸಬಹುದು.
ಕೈಗೆಟುಕುವ ಬೆಲೆಯಲ್ಲಿ ಜಾಯ್ ಇ-ಬೈಕ್ ಮಾನ್‌ಸ್ಟರ್!
ನೀವು ಎಲೆಕ್ಟ್ರಿಕ್ ವಾಹನ ಖರೀದಿ(EVs) ಮಾಡಲು ಬಯಸಿದ್ದರೆ ಅದರಲ್ಲೂ ಅತ್ಯುತ್ತಮವಾಗಿರುವ ಬೈಕ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಜಾಯ್ ಇ-ಬೈಕ್ ಮಾನ್‌ಸ್ಟರ್ ಹೆಚ್ಚು ಸೂಕ್ತವಾದ ಆಯ್ಕೆಯಾಗಿದೆ ಯಾಕಂದ್ರೆ ಇದಕ್ಕೆ ತಗುಲುವ ವೆಚ್ಚ ಬಹಳ ಕಡಿಮೆ ಪ್ರತಿ ತಿಂಗಳು ಪೆಟ್ರೋಲ್ ವಾಹನಕ್ಕಿಂತ ಎಲೆಕ್ಟ್ರಿಕ್ ಬೈಕ್ ನಿಂದ ನೀವು ಅತಿ ಹೆಚ್ಚು ಉಳಿತಾಯ ಮಾಡಬಹುದು.
ಉದಾಹರಣೆಗೆ ಸಾಮಾನ್ಯ ಬೈಕ್ 64 ರೂಪಾಯಿಗಳಿಗೆ 280 ಕಿಲೋಮೀಟರ್ ಚಲಿಸಿದರೆ, ಎಲೆಕ್ಟ್ರಿಕ್ ಬೈಕ್ ಕೇವಲ 23 ಪೈಸೆಗೆ ಒಂದು ಕಿಲೋಮೀಟರ್ ಚಲಿಸಬಹುದು! ಹೌದು ನಿಮಗೆ ಆಶ್ಚರ್ಯ ಆಗಬಹುದು ಆದರೂ ಇದು ಸತ್ಯ ಪ್ರತಿ ತಿಂಗಳು ಇಷ್ಟು ಹಣ ಉಳಿತಾಯ ಮಾಡಬಹುದು ಎಂದಾಗಿದ್ದರೆ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡುವುದು ಉತ್ತಮ ಅಲ್ಲವೇ!.
ಜಾಯ್ ಇ-ಬೈಕ್ ಮಾನ್‌ಸ್ಟರ್ ಬೆಲೆ
ಕಂಪನಿ ಹೇಳಿಕೊಂಡಿರುವ ಪ್ರಕಾರ ಒಂದು ಕಿಲೋಮೀಟರ್ ಕ್ರಮಿಸಲು ಕೇವಲ 23 ಪೈಸಾ ವೆಚ್ಚ ತಗಲುತ್ತದೆ. ಒಮ್ಮೆ ಚಾರ್ಜ್ ಮಾಡಿದ್ರೆ 95 ಕಿಲೋ ಮೀಟರ್ ರೇಂಜ್ ನೀಡಬಲ್ಲದು. ಜಾಯ್ ಇ-ಬೈಕ್ ಮಾನ್‌ಸ್ಟರ್ ಬೈಕ್ ಇನ್ನಷ್ಟು ವಿಶೇಷತೆಗಳ ಬಗ್ಗೆ ಹೇಳುವುದಾದರೆ, 72 V, 39AH ಲೀಥಿಯಂ ಐಯಾನ್ ಬ್ಯಾಟರಿ ಯನ್ನು ಬಳಸಲಾಗಿದೆ.
1500 w DC ಬ್ರೇಶ್ ಲೆಸ್ ಹಬ್ಬ ಮೋಟಾರ್ ಅನ್ನು ಈ ಬೈಕ್ ನಲ್ಲಿ ಅಳವಡಿಸಲಾಗಿದೆ. ಈ ಬೈಕ್ ನ ಬ್ಯಾಟರಿ ಚಾರ್ಜ್ ಆಗಲು 5ರಿಂದ 5.5 ಗಂಟೆಗಳು ಬೇಕು. ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಲು 3.3 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಗರಿಷ್ಠ ವೇಗ 70 ಕಿಲೋ ಮೀಟರ್ ಆಗಿದೆ. ಇನ್ನು ಜಾಯ್ ಇ-ಬೈಕ್ ಮಾನ್‌ಸ್ಟರ್ ಬೆಲೆ ನೋಡುವುದಾದರೆ, ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ 98,666 ರೂ. ಹೆಚ್ಚಿನ ಮಾಹಿತಿಗಾಗಿ ಜಾಯ್ ಇ-ಬೈಕ್ ಮಾನ್‌ಸ್ಟರ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.