ಭಾರತೀಯರು ಹೆಚ್ಚಾಗಿ ಮೊಬೈಲ್ ನಲ್ಲಿ ಏನ್ ನೋಡ್ತಾರೆ ಗೊತ್ತಾ? ಅಧ್ಯಯನದಲ್ಲಿ ಹೊರಬಿತ್ತು ಬೆಚ್ಚಿಬೀಳುವ ಸತ್ಯ
ಇತ್ತೀಚೆಗೆ ವಿವೋ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ, ಭಾರತೀಯರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬಳಸುವುದನ್ನು ತಿಳಿಸಿದೆ. ಅದರ ಬಗ್ಗೆ ಇಂದು ತಿಳಿದುಕೊಳ್ಳೋಣ.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ (Smartphone) ಇರುತ್ತದೆ. ಫೋನ್ ಎನ್ನುವುದು ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಜೇಬಿನಲ್ಲಿ ಫೋನ್ ಇರಲೇಬೇಕು. ಬೆಳಿಗ್ಗೆ ಎದ್ದು ದೇವರ ಫೋಟೋ ನೋಡುವುದಕ್ಕೂ ಮುನ್ನವೇ ಮೊಬೈಲ್ ಫೋನ್ (Mobile Phone) ನೋಡುವುದು ನಮ್ಮೆಲ್ಲರ ದಿನನಿತ್ಯದ ಕೆಲಸ.
ಅಲ್ಲದೆ, ಮೊಬೈಲ್ ಮೂಲಕ ಇಂಟರ್ನೆಟ್ (Internet) ಸಹಾಯದಿಂದ, ಪ್ರಪಂಚದ ಯಾವುದೇ ಮೂಲೆಯ ಯಾವುದೇ ವಿಚಾರ ತಿಳಿದುಬಿಡುತ್ತದೆ, ಅಲ್ಲದೆ ಹಲವಾರು ಕೆಲಸಗಳು ಕೂಡ ಈ ಮೊಬೈಲ್ ಸುಲಭಗೊಳಿಸುತ್ತದೆ.
ಸಾಮಾಜಿಕ ಮಾಧ್ಯಮಕ್ಕೆ (Social Media) ಭೇಟಿ ನೀಡುವುದು, ಆಟಗಳನ್ನು ಆಡುವುದು (Games), ವೀಡಿಯೊಗಳನ್ನು ನೋಡುವುದು (Watching Videos) ಮುಂತಾದ ಅನೇಕ ಕೆಲಸಗಳನ್ನು ಮಾಡುತ್ತೇವೆ. ಆದರೆ ಇತ್ತೀಚೆಗೆ ವಿವೋ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ, ಭಾರತೀಯರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬಳಸುವುದನ್ನು ತಿಳಿಸಿದೆ. ಅದರ ಬಗ್ಗೆ ಇಂದು ತಿಳಿದುಕೊಳ್ಳೋಣ.
ರಿಲಯನ್ಸ್ ಜಿಯೋ ಇಂಡಿಪೆಂಡೆನ್ಸ್ ಡೇ ಆಫರ್! ವರ್ಷ ಪೂರ್ತಿ ಬಳಸಿ ಫ್ರೀ ಇಂಟರ್ನೆಟ್, ಇಲ್ಲಿದೆ ಹೊಸ ರಿಚಾರ್ಜ್ ಪ್ಲಾನ್
ಸ್ಮಾರ್ಟ್ ಫೋನ್ ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ. ವರದಿಯ ಪ್ರಕಾರ 86% ಜನರು ತಮ್ಮ ಯುಟಿಲಿಟಿ ಬಿಲ್‌ಗಳನ್ನು (Paying Utility Bills) ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಪಾವತಿಸುತ್ತಾರೆ. ಇದು ಸಮಯವನ್ನು ಉಳಿಸುವ ಉತ್ತಮ ವಿಧಾನವಾಗಿದೆ.
ಸುಮಾರು 66.2% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಆನ್‌ಲೈನ್ ಸೇವೆಗಳನ್ನು ಬುಕ್ ಮಾಡುತ್ತಿದ್ದಾರೆ. ಸುಮಾರು 73.2% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ದಿನಸಿಗಳನ್ನು ಆರ್ಡರ್ ಮಾಡುತ್ತಾರೆ. 58.3% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಡಿಜಿಟಲ್ ನಗದು ಪಾವತಿಗಳನ್ನು ಮಾಡುತ್ತಾರೆ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಬೇಗ ಖಾಲಿ ಆಗ್ತಾಯಿದಿಯಾ? ಹಾಗಾದ್ರೆ ಈ ಡೇಟಾ ಸೆಟ್ಟಿಂಗ್ ಮಾಡಿಕೊಳ್ಳಿ
ಸ್ಮಾರ್ಟ್ ಫೋನ್ ಬಳಸುವ ಪುರುಷರ ಸಂಖ್ಯೆ ಮಹಿಳೆಯರಿಗಿಂತ ಹೆಚ್ಚು. ಸುಮಾರು 62% ಪುರುಷರು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ ಮತ್ತು 38% ಮಹಿಳೆಯರು ಮಾತ್ರ ಸ್ಮಾರ್ಟ್‌ಫೋನ್ ಹೊಂದಿದ್ದಾರೆ.
ನಗರ ಮತ್ತು ಗ್ರಾಮೀಣ ಜನರ ನಡುವೆಯೂ ವ್ಯತ್ಯಾಸವಿದೆ. 58% ನಗರ ಜನರು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ ಮತ್ತು 41% ಗ್ರಾಮೀಣ ಜನರು ಮಾತ್ರ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ. ಸ್ಮಾರ್ಟ್‌ಫೋನ್ ಕ್ರಾಂತಿಯು ಎಷ್ಟು ಪ್ರಗತಿ ಸಾಧಿಸಿದೆ ಎಂಬುದನ್ನು ಇದು ತೋರಿಸುತ್ತದೆ.
Vivo released a research report That Revels What Purpose Indians use their smartphone
Follow us On
Google News |