ನಿಮ್ಮ ವಾಟ್ಸಪ್ ನಂಬರ್ ಯಾರು ಬ್ಲಾಕ್ ಮಾಡಿದ್ದಾರೆ? ತಿಳಿಯೋಕೆ ಇಲ್ಲಿದೆ ಸಿಂಪಲ್ ಮಾರ್ಗ
ಸ್ಮಾರ್ಟ್ ಫೋನ್ (smartphone) ಬಳಕೆ ಬಂದ ಮೇಲೆ ನಮ್ಮ ಅದೆಷ್ಟೋ ಕೆಲಸಗಳು ಸುಲಭವಾಗಿ ಬಿಟ್ಟಿವೆ. ಗೂಗಲ್ ನಲ್ಲಿ ಹಲವು ವಿಚಾರಗಳನ್ನು ಸರ್ಚ್ (Google search) ಮಾಡುವುದರಿಂದ ಹಿಡಿದು ಹಣಕಾಸಿನ ವ್ಯವಹಾರಗಳನ್ನು ಕೂಡ ಸ್ಮಾರ್ಟ್ ಫೋನ್ ನಲ್ಲಿ ಮಾಡಬಹುದು
ಅಷ್ಟೇ ಅಲ್ಲ ಬಹಳ ದೂರದಲ್ಲಿ ಇರುವ ವ್ಯಕ್ತಿಗಳ ಜೊತೆ ಕೂಡ ಸುಲಭವಾಗಿ ಮಾತನಾಡಬಹುದು, ಅದಕ್ಕಾಗಿ ಮುಖ್ಯವಾಗಿ ಲಭ್ಯ ಇರುವ ಫೀಚರ್ (features) ಅಂದ್ರೆ ವಾಟ್ಸಾಪ್

ಜಗತ್ತಿನಾದ್ಯಂತ ವಾಟ್ಸಾಪ್ (WhatsApp) ಬಳಸದೆ ಇರುವವರು ಯಾರು ಇಲ್ಲ, ಎನ್ನುವುದು ಮಿಲಿಯನ್ ಗಟ್ಟಲೆ ಜನ ವಾಟ್ಸಪ್ ಅಪ್ಲಿಕೇಶನ್ (WhatsApp application) ಬಳಸುವುದನ್ನು ನೋಡಿ ತಿಳಿಯಬಹುದು. ಈ ಹಿಂದೆ ವಾಟ್ಸಾಪ್ ಎನ್ನುವುದು ದೂರದ ವ್ಯಕ್ತಿಯ ಜೊತೆಗೆ ಮಾತನಾಡಲು ಅನುಕೂಲವಾಗುವಂತೆ ಆರಂಭಿಸಲಾದ ಅಪ್ಲಿಕೇಶನ್ (application) ಆಗಿತ್ತು
ಆದರೆ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಲ್ಲಿ ಸಾಕಷ್ಟು ಫೀಚರ್ ಗಳನ್ನು (features) ಅಳವಡಿಸಲಾಗಿದೆ, ಅಷ್ಟೇ ಯಾಕೆ ನೀವು ಹಣಕಾಸಿನ ವ್ಯವಹಾರವನ್ನು ಕೂಡ ವಾಟ್ಸಪ್ ಮೂಲಕವೇ ಮಾಡಬಹುದು.
ಈ ಸ್ಯಾಮ್‌ಸಂಗ್ 5G ಫೋನ್ ಏಕ್‍ದಮ್ ₹599 ರೂಪಾಯಿಗೆ ಸಿಗುತ್ತಿದೆ! ಬಾರೀ ಆಫರ್ ಅಲ್ವೇ
ಯಾರಾದರೂ ನಿಮ್ಮ ವಾಟ್ಸಾಪ್ ನಂಬರ್ ಬ್ಲಾಕ್ ಮಾಡಿದ್ದಾರಾ?
ವಾಟ್ಸಾಪ್ ಅನ್ನುವುದು ಬಹಳ ಅದ್ಭುತ ಕಲ್ಪನೆ ಎಂದು ಹೇಳಬಹುದು. ಮೆಟಾ (Meta) ತನ್ನ ಬಳಕೆದಾರರಿಗೆ ಅನುಕೂಲವಾಗುವ ಸಾಕಷ್ಟು ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಲ್ಲಿ ಸಾಕಷ್ಟು ಹೊಸ ಫೀಚರ್ ಅಳವಡಿಸಲಾಗಿದ್ದು ಇದರಿಂದ ಪ್ರಯೋಜನಗಳು ಇವೆ.
ಇನ್ನು ನಿಮ್ಮನ್ನ ಯಾರಾದ್ರೂ ವಾಟ್ಸಾಪ್ ಬ್ಲಾಕ್ ಲಿಸ್ಟ್ (WhatsApp block list) ಗೆ ಸೇರಿಸಿದ್ದಾರೆ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು, ಹೇಗೆ ಗೊತ್ತಾ?
ನೀವು ಬೇರೆಯವರ ವಾಟ್ಸಾಪ್ನಲ್ಲಿ ಬ್ಲಾಕ್ ಆಗಿದ್ದೀರಾ ಎಂಬುದನ್ನು ಹೀಗೆ ಚೆಕ್ ಮಾಡಿ!
*ಮೊದಲನೇದಾಗಿ ನೀವು ಬೇರೆಯವರ ವಾಟ್ಸಪ್ ನಲ್ಲಿ ಬ್ಲಾಕ್ (block) ಆಗಿದ್ದರೆ ಅವರ ಕೊನೆಯ ವಾಟ್ಸಪ್ ( Last seen) ಅಥವಾ ಆನ್ಲೈನ್ ಸ್ಟೇಟಸ್ (online status) ಅನ್ನು ನೀವು ನೋಡಲು ಸಾಧ್ಯವಿಲ್ಲ.
*ನಿಮ್ಮನ್ನ ಬೇರೆಯವರು ವಾಟ್ಸಾಪ್ ಬ್ಲಾಕ್ ಮಾಡಿದರೆ ಅವರ ಪ್ರೊಫೈಲ್ ಪಿಕ್ಚರ್ (profile picture) ಬದಲಾವಣೆ ನಿಮಗೆ ಕಾಣಿಸುವುದಿಲ್ಲ.
*ನೀವು ಬ್ಲಾಕ್ ಆಗಿದ್ದರೆ ಬ್ಲಾಕ್ ಮಾಡಿದವರಿಗೆ ನೀವು ಸಂದೇಶ ಕಳುಹಿಸಲು ಅಥವಾ ಕರೆ ಮಾಡಲು ಸಾಧ್ಯವಿಲ್ಲ.
*ಬ್ಲಾಕ್ ಮಾಡಿದ ನಂತರ ನೀವು ಕಳುಹಿಸಿದ ಸಂದೇಶ ಟಿಕ್ ಮಾರ್ಕ್ ನಿಮಗೆ ತಿಳಿಯುವುದಿಲ್ಲ. ಅಂದರೆ ನಿಮ್ಮ ಸಂದೇಶ ಅವರಿಗೆ ತಲುಪಿದೆಯೋ ಇಲ್ಲವೋ ಎಂಬುದನ್ನು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ.
ಈ ರೀತಿ ಬೇರೆಯವರು ನಿಮ್ಮನ್ನು ಬ್ಲಾಕ್ ಮಾಡಿದರೆ ತಕ್ಷಣವೇ ತಿಳಿದುಕೊಳ್ಳಬಹುದು, ಯಾರೂ ನಿಮ್ಮನ್ನ ಬ್ಲಾಕ್ ಮಾಡಿದ್ರೆ ತಲೆಕೆಡಿಸಿಕೊಳ್ಳಬೇಡಿ. ಅವರಿಗೆ ನಿಮ್ಮ ಅಗತ್ಯ ಇಲ್ಲ ಎಂದುಕೊಂಡು ಸುಮ್ಮನಾಗಿ!
Who Blocked Your Whatsapp Number, Here’s a simple way to know