Weekly HoroscopeDaily HoroscopeTomorrow Horoscope

ವಾರ ಭವಿಷ್ಯ: ಪರಿಸ್ಥಿತಿ ಈ 6 ರಾಶಿಗಳ ಪರವಾಗಿದೆ, ಆದಾಯದಲ್ಲಿ ದ್ವಿಗುಣ

Weekly Horoscope : ಈ ವಾರ ಭವಿಷ್ಯ (Vara Bhavishya) ಈ ರಾಶಿಗಳ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವು ನಿಮ್ಮ ಪ್ರಗತಿಗೆ ಸಹಾಯ ಮಾಡುತ್ತದೆ.

ವಾರ ಭವಿಷ್ಯ (ಮಾರ್ಚ್ 16 ರಿಂದ 22 ಮಾರ್ಚ್ 2025)

ಮೇಷ ರಾಶಿ (Aries) : ಈ ವಾರ ನಿಮ್ಮ ತಾಳ್ಮೆ ಮತ್ತು ಸಹನೆ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತವೆ. ಶತ್ರುಗಳ ಪ್ರಭಾವ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಒಗ್ಗಟ್ಟಿನ ವಾತಾವರಣ ನಿರ್ಮಾಣವಾಗಲಿದೆ. ನಿರೀಕ್ಷಿತ ಸಮಾಚಾರ ದೊರೆಯಲಿದೆ. ಹೊಸ ಉತ್ಸಾಹದಿಂದ ಕಾರ್ಯಗಳಿಗೆ ಕೈಹಾಕುವಿರಿ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ವಾರದ ಕೊನೆ ಲಾಭದಾಯಕ.

ವೃಷಭ ರಾಶಿ (Taurus) : ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಹೊಸ ಯೋಜನೆಗಳಿಗೆ ಮೊದಲಿನಿಂದಲೇ ಜಾಗ್ರತೆಯಿಂದ ಇರಬೇಕು. ಪ್ರಯಾಣಗಳಲ್ಲಿ ಎಚ್ಚರಿಕೆ ಅಗತ್ಯ. ಬಂಡವಾಳ ಹೂಡಿಕೆ ಬಗ್ಗೆ ಸೂಕ್ತವಾದ ಯೋಜನೆ ಅಗತ್ಯ. ನಿಕಟ ಬಂಧುಗಳ ಸಹಕಾರಕ್ಕೆ ಕಾಯಬೇಕಾಗಬಹುದು. ದೇವಾಲಯ ಭೇಟಿ ನಿಮ್ಮ ಮನಸ್ಸಿಗೆ ಶಾಂತಿ ತರುವ ಸಾಧ್ಯತೆ.

ವಾರ ಭವಿಷ್ಯ

ಮಿಥುನ ರಾಶಿ (Gemini) : ಯೋಜಿಸಿದ ಕೆಲಸಗಳು ನಿರೀಕ್ಷಿತ ಸಮಯಕ್ಕಿಂತ ತಡವಾಗಿ ನಡೆಯಬಹುದು. ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಿರ್ಧಿಷ್ಟ ಕಾರಣವಿಲ್ಲದೆ ಉದ್ವಿಗ್ನತೆ ಎದುರಾಗಬಹುದು. ನಿಮ್ಮ ಮಾತು ಮತ್ತು ಹಾವಭಾವಗಳಲ್ಲಿ ಸಂಯಮವಿರಲಿ. ಭ್ರಮೆ ಅಥವಾ ಗೊಂದಲಗಳಿಂದ ದೂರವಿರುವುದು ಒಳಿತು. ಹೊಸ ಸಂಪರ್ಕಗಳು ಲಾಭದಾಯಕವಾಗಬಹುದು.

ಕಟಕ ರಾಶಿ (Cancer) : ನಿಮ್ಮ ಶ್ರಮ ಫಲ ನೀಡುವ ಸಮಯ. ಆರ್ಥಿಕವಾಗಿ ಲಾಭದಾಯಕವಾದ ದಿನವಾಗಿರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸುದ್ದಿಯ ನಿರೀಕ್ಷೆಯಲ್ಲಿ ಇರುತ್ತೀರಿ. ಸ್ತ್ರೀಯರಿಂದ ಹೆಚ್ಚಿನ ಸಹಕಾರ ದೊರೆಯುವ ಸಾಧ್ಯತೆ. ಗೃಹೋಪಯೋಗಿ ವಸ್ತು ಖರೀದಿ ಸಾಧ್ಯ. ವ್ಯಪಾರ ನಿಮಿತ್ತ ದೂರದ ಪ್ರಯಾಣ ಮಾಡಬೇಕಾಗಬಹುದು.

ಸಿಂಹ ರಾಶಿ (Leo) : ಈ ವಾರ ಹಠಾತ್ತನೆ ಹಣದ ಒಳಹರಿವು ಕಂಡುಬರುವ ಸಾಧ್ಯತೆ. ಗೌರವ, ಪ್ರಭಾವ ಹೆಚ್ಚಾಗುವ ಸಮಯ. ಮನೆಯವರ ಜತೆ ಹೆಚ್ಚು ಕಾಲಕಳೆಯುವಿರಿ. ಪರೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ. ಬಾಕಿ ಪಾವತಿಯಲ್ಲಿ ಸೌಕರ್ಯ ದೊರೆಯಬಹುದು. ವ್ಯಪಾರದಲ್ಲಿ ಲಾಭದ ನಿರೀಕ್ಷೆ ಇದೆ. ಹೊಸ ಅವಕಾಶಗಳು ಲಭಿಸಬಹುದು. ಒಟ್ಟಾರೆ ಲಾಭದ ವಾರ.

ಕನ್ಯಾ ರಾಶಿ (Virgo) : ನೀವು ಯೋಚಿಸಿದ ಯೋಜನೆಗಳೆಲ್ಲಾ ವಿಳಂಬವಾಗಬಹುದು. ಸಮಾಧಾನದ ಅಭಾವ ಎದುರಾಗಬಹುದು. ಆದರೆ ತಾಳ್ಮೆಯಿಂದ ಕಾಯಿರಿ, ವಾರದ ಕೊನೆ ದಿನಗಳಲ್ಲಿ ಎಲ್ಲವೂ ಸರಿಹೊಂದುತ್ತದೆ. ಅಪ್ರಿಯ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ಮನಸ್ಥಿತಿಯಲ್ಲಿ ಏರುಪೇರು ಸಾಧ್ಯ. ಅತಿಯಾದ ಆತ್ಮವಿಶ್ವಾಸವನ್ನು ತೊರೆದು ಯೋಗ್ಯ ವಿಚಾರಣೆಯಿಂದ ಮುಂದುವರೆಯುವುದು ಉತ್ತಮ.horoscope

ತುಲಾ ರಾಶಿ (Libra) : ಈ ವಾರ ನಿಮ್ಮ ನಿರ್ಧಾರಗಳು ಪರಿಣಾಮಕಾರಿಯಾಗಲಿವೆ. ಕುಟುಂಬದ ಪ್ರೀತಿ, ಬೆಂಬಲ ದೊರೆಯುವುದು. ಶುಭ ಕಾರ್ಯಗಳಿಗೆ ಚಾಲನೆ ನೀಡುವ ಸಾಧ್ಯತೆ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಹೊಸ ಸ್ನೇಹಿತರ ಪರಿಚಯದಿಂದ ನಿಮ್ಮ ಜೀವನದಲ್ಲಿ ಹೊಸ ವಾತಾವರಣ ಮೂಡಬಹುದು. ನಿರೀಕ್ಷಿತ ಫಲಿತಾಂಶಗಳ ನಿರೀಕ್ಷೆ ಸಾರ್ಥಕವಾಗಬಹುದು.

ವೃಶ್ಚಿಕ ರಾಶಿ (Scorpio) : ಆರ್ಥಿಕ ವ್ಯವಹಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಗೊಂದಲದ ಪರಿಸ್ಥಿತಿಗಳು ಉದ್ಭವಿಸಬಹುದು. ಹಳೆಯ ತೊಂದರೆಗಳನ್ನು ಪರಿಹರಿಸಿಕೊಳ್ಳುವ ಅವಕಾಶ. ಪ್ರೀತಿ ಮತ್ತು ಸಂಬಂಧಗಳಲ್ಲಿ ಸ್ವಲ್ಪ ಮಟ್ಟಿನ ನಿಗ್ರಹ ಇರಲಿ. ಯೋಚಿಸದೆ ಮಾತನಾಡಬೇಡಿ, ಇದರಿಂದ ವಾದಗಳು ಸಹ ಉದ್ಭವಿಸಬಹುದು. ತಾಳ್ಮೆ ವಹಿಸಿ ಕಾರ್ಯ ನಿರ್ವಹಿಸಿ. ವಾರದ ಮದ್ಯದಲ್ಲಿ ಅನಾರೋಗ್ಯ ಸೂಚನೆ.

ಧನು ರಾಶಿ (Sagittarius) : ನೀವು ನಿರೀಕ್ಷಿಸಿದ ಸುದ್ದಿ ಕೇಳಬಹುದು. ಆರ್ಥಿಕವಾಗಿ ಲಾಭದಾಯಕ ದಿನ. ಸಮಾಜದಲ್ಲಿ ನಿಮ್ಮ ಹೆಸರು, ಗೌರವ ಹೆಚ್ಚಾಗಬಹುದು. ಪವಿತ್ರ ಸ್ಥಳಕ್ಕೆ ಭೇಟಿ ಕೊಡುವ ಅವಕಾಶ. ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯುವಿರಿ. ವ್ಯಾಪಾರದಲ್ಲಿ ನಿಧಾನಗತಿ, ಆದರೆ ತೊಂದರೆ ಪಡಬೇಡಿ, ಕ್ರಮೇಣ ಎಲ್ಲವೂ ಸರಿಹೊಂದುತ್ತದೆ.

ಮಕರ ರಾಶಿ (Capricorn) : ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡಬಹುದು. ಹೊಸ ಕಾರ್ಯಗಳಿಗೆ ಚಾಲನೆ ನೀಡುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಸಾಮಾಜಿಕವಾಗಿ ಗುರುತಿಸಲ್ಪಡುವಿರಿ. ನೀವು ನಿರೀಕ್ಷಿಸಿದ ಹಣಕಾಸಿನ ಲಾಭ ಸಿಗುವ ಸಾಧ್ಯತೆ. ಹೊಸ ಅವಕಾಶಗಳು ಮೂಡಬಹುದು. ವ್ಯಾಪಾರ ವಿಸ್ತರಣೆ ಸಾಧ್ಯ, ಆದರೆ ಅಪರಿಚಿತರನ್ನು ನಂಬಬೇಡಿ.

ಕುಂಭ ರಾಶಿ (Aquarius) : ಈ ವಾರ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಒಲಿಯಬಹುದು. ನೆಚ್ಚಿದ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಬಂಧುಗಳೊಂದಿಗೆ ಸಂತೋಷದ ಕ್ಷಣಗಳನ್ನು ಕಳೆದೀತು. ನಿರ್ದಿಷ್ಟ ಉದ್ದೇಶ ಸಾಧಿಸಲು ಸೂಕ್ತ ಸಮಯ. ದೂರದ ಸಂಬಂಧಿಗಳಿಂದ ಹೊಸ ಪ್ರಸ್ತಾಪಗಳು ಬರಬಹುದು. ಹೆಂಡತಿ ಅಥವಾ ಸಂಗಾತಿ ನಡುವೆ ಜಗಳ ಅಥವಾ ವಾದದ ಸಾಧ್ಯತೆ ಇದೆ, ತಾಳ್ಮೆ ಇರಲಿ.

ಮೀನ ರಾಶಿ (Pisces) : ಈ ವಾರ ಹಣಕಾಸಿನ ಲಾಭದ ಸಂಭವ. ಕುಟುಂಬದಲ್ಲಿ ಸುಖ-ಶಾಂತಿ ಹೆಚ್ಚಾಗಲಿದೆ. ಬೇರೆಯವರಿಗಿಂತ ನೀವು ಹೆಚ್ಚು ಉತ್ಸಾಹದಿಂದ ಇರುವಿರಿ. ನಾವೀನ್ಯತೆಯಿಂದ ಭರವಸೆಯ ಹೊಸ ಬಾಗಿಲು ತೆರೆಯಬಹುದು. ಬದಲಾವಣೆಗಳು ಹೊಸ ಚೇತನ ತರುತ್ತವೆ. ಶುಭಕಾರ್ಯಗಳಲ್ಲಿ ಭಾಗವಹಿಸಲು ಅವಕಾಶ ಲಭಿಸಬಹುದು.

  • ನಿಮ್ಮ ಸಮಸ್ಯೆ ಏನೇ ಆಗಿರಲಿ, ಎಷ್ಟೇ ಗಂಭೀರದ್ದಾಗಿರಲಿ, ಕೇವಲ ಎರಡು ದಿನಗಳಲ್ಲಿ ಶಾಶ್ವತ ಪರಿಹಾರ.
  • ಅನೇಕರ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಕಾಣದಿದ್ದರೆ, ಇಲ್ಲಿ ನಿಮಗೆ ಖಚಿತ ಪರಿಹಾರ.

ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ.
ದೂರವಾಣಿ : 9535156490

Weekly Horoscope For 16 March To 22 March 2025

Our Whatsapp Channel is Live Now 👇

Whatsapp Channel

Related Stories