Bangalore News

ಬೆಂಗಳೂರು: 10 ತಿಂಗಳಲ್ಲಿ 118 ಶಾಲಾ ವಾಹನ ಚಾಲಕರು ಡ್ರಂಕ್ ಅಂಡ್ ಡ್ರೈವ್

ಬೆಂಗಳೂರು (Bengaluru): ಈ ವರ್ಷದ ಜನವರಿ 1 ರಿಂದ ಅಕ್ಟೋಬರ್ 21 ರ ನಡುವೆ ಸುಮಾರು 118 ಶಾಲಾ ಬಸ್ ಚಾಲಕರು ಕುಡಿದು ವಾಹನ ಚಲಾಯಿಸಿರುವುದು ಪತ್ತೆಯಾಗಿದೆ ಎಂದು ನಗರ ಸಂಚಾರ ಪೊಲೀಸರ ಅಂಕಿ ಅಂಶಗಳು ತಿಳಿಸಿವೆ.

ಸುಮಾರು 20,255 ಚಾಲಕರಲ್ಲಿ ಆಲ್ಕೋಹಾಲ್ ಪರೀಕ್ಷೆಯನ್ನು ತೆಗೆದುಕೊಂಡಾಗ ಏಳು ವಿಶೇಷ ಡ್ರೈವ್‌ಗಳಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸಿರುವುದು ಪತ್ತೆಯಾಗಿದೆ.

ಬೆಂಗಳೂರು: 10 ತಿಂಗಳಲ್ಲಿ 118 ಶಾಲಾ ವಾಹನ ಚಾಲಕರು ಡ್ರಿಂಕ್ ಅಂಡ್ ಡ್ರೈವ್

ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಪರಿಹಾರಕ್ಕೆ ಚರ್ಚೆ

ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂಎನ್ ಅನುಚೇತ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ, ಅವರೆಲ್ಲ ಪಾನಮತ್ತ ಚಾಲಕರು ಶಾಲಾ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನಗಳನ್ನು ಚಲಾಯಿಸುತ್ತಿದ್ದರು. ಈ ಚಾಲಕರು ಹೊರಗುತ್ತಿಗೆ ವಾಹನಗಳನ್ನು ಶಾಲೆಗೆ ನಡೆಸುತ್ತಿದ್ದರು ಎನ್ನಲಾಗಿದೆ, ಕೆಲ ಪ್ರಕರಣಗಳಲ್ಲಿ ಮಾತ್ರ ಮದ್ಯದ ಅಮಲಿನಲ್ಲಿ ಶಾಲಾ ವಾಹನ ಚಾಲಕರನ್ನು ಹಿಡಿದಿದ್ದೇವೆ ಎಂದು ತಿಳಿಸಿದರು.

118 school vehicle drivers caught drunk and drive in 10 monthsಅನುಚೇತ್ ಅವರ ಪ್ರಕಾರ, ಪೊಲೀಸರು 118 ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವಂತೆ ಮತ್ತು ಅವರ ವಾಹನಗಳ ಪರವಾನಗಿಯನ್ನು ರದ್ದುಗೊಳಿಸುವಂತೆ ಕೋರಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಗೆ ಪತ್ರ ಬರೆದಿದ್ದಾರೆ.

ಆದಾಗ್ಯೂ, ಇದುವರೆಗೆ ಯಾವುದೇ ಪರವಾನಗಿಗಳ ರದ್ದತಿ ಅಥವಾ ಪರವಾನಗಿಯನ್ನು ಅಮಾನತುಗೊಳಿಸಲಾಗಿಲ್ಲ ಎಂದು ಇನ್ನೊಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

118 school vehicle drivers caught drunk and drive in 10 months

Our Whatsapp Channel is Live Now 👇

Whatsapp Channel

Related Stories