ನಮ್ಮ ರಾಜ್ಯದಲ್ಲಿ ಕಳೆದ ವರ್ಷದಿಂದಲು ಕೂಡ ಮಳೆ ಬೆಳೆ ಎರಡು ಕೂಡ ಸರಿಯಾಗಿ ಆಗಿಲ್ಲ. ರೈತರು ಬೆಳೆ ನಷ್ಟ ಅನುಭವಿಸಿ, ಸಂಕಷ್ಟದಲ್ಲಿದ್ದಾರೆ. ಅಂಥ ರೈತರಿಗೆ ಈಗ ಸರ್ಕಾರ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು, ಬೆಳೆ ಪರಿಹಾರ ನಿಧಿಯ ಮೊದಲ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದ್ದು, ಇದೀಗ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ..

ಕೃಷಿ ಸಚಿವರಾದ ಕೃಷ್ಣ ಭೈರೇಗೌಡ ಅವರು ಈ ಬಗ್ಗೆ ಖುದ್ದಾಗಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುತ್ತಿರುವ ಸರ್ಕಾರವು ಬರ ಪರಿಹಾರ ನಿಧಿಯ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಹೌದು, ಮೊದಲ ಕಂತಿನ ಹಣ ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಆಗಿದ್ದು, ಇದೀಗ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ. ಎರಡನೇ ಕಂತಿನ ಮೊತ್ತ ₹3000 ರೂಪಾಯಿ ಆಗಿದೆ. ಈ ಹಣ ನಿಮ್ಮ ಅಕೌಂಟ್ ಗೆ (Bank Account) ಬಂದಿದ್ಯಾ ಎಂದು ತಿಳಿಯೋದು ಹೇಗೆ?

Check drought relief money Status using the agricultural land survey number

ರೇಷನ್ ಕಾರ್ಡ್ ಇದ್ದವರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್

ಮೊದಲ ಕಂತಿನ ಬೆಳೆ ಪರಿಹಾರ ಹಣ

ಮೇ ತಿಂಗಳಿನಲ್ಲೇ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ. ಸುಮಾರು 27.5 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರ ನಿಧಿಯ ಹಣ ತಲುಪಿದೆ. ಪ್ರತಿಯೊಬ್ಬ ರೈತನಿಗೂ ಕೂಡ ₹3000 ರೂಪಾಯಿ ಮೊದಲ ಕಂತಿನ ಹಣ ಅವರ ಬ್ಯಾಂಕ್ ಅಕೌಂಟ್ (Bank Account) ತಲುಪಿದೆ.

ಇದೀಗ ಎರಡನೇ ಕಂತಿನ ಹಣವನ್ನು ಕೂಡ ರೈತರ ಮೇಲಿನ ಕಾಳಜಿ ಇಂದ ಸರ್ಕಾರ ಬಿಡುಗಡೆ ಮಾಡಿದ್ದು, ಇದರ ಉಪಯೋಗವನ್ನು ಎಲ್ಲಾ ರೈತರು ಕೂಡ ಪಡೆದುಕೊಳ್ಳಬೇಕು ಎಂದು ತಿಳಿಸಿದೆ.

ಸ್ವಂತ ಕೃಷಿ ಭೂಮಿ ಇರೋರಿಗೆ ಉಚಿತ ಬೋರ್ ವೆಲ್! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ

Farmerಎರಡನೇ ಕಂತಿನ ಬೆಳೆ ಪರಿಹಾರ ಹಣ

ಇದೀಗ ಬರ ಪರಿಹಾರ ನಿಧಿಯ ಎರಡನೇ ಕಂತಿನ ಹಣ ಬಿಡುಗಡೆ ಆಗಿದ್ದು, ಅದರಲ್ಲಿ ಸುಮಾರು 7 ಲಕ್ಷಕ್ಕಿಂತ ಹೆಚ್ಚು ರೈತರಿಗೆ ತಲುಪಲಿದೆ. ಪ್ರತಿಯೊಬ್ಬ ರೈತರಿಗೂ ₹2800 ರೂಪಾಯಿ ಇಂದ ₹3000 ರೂಪಾಯಿ ಬರ ಪರಿಹಾರ ಹಣ ಜಮೆ ಆಗಲಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದ್ದಾರೆ.

ಇದರಿಂದ ರೈತರಿಗೆ ಹಣಕಾಸಿನ ವಿಚಾರದಲ್ಲಿ ಸಹಾಯ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶ ಎಂದು ರಾಜ್ಯ ಕೃಷಿ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ..

ಮನೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಇದ್ರೂ ರೇಷನ್ ಕಾರ್ಡ್ ಬಂದ್ ಆಗುತ್ತಾ? ಸರ್ಕಾರದ ಹೊಸ ರೂಲ್ಸ್

ಕೆಂದ್ರದಿಂದ ರಾಜ್ಯದ ರೈತರಿಗೆ ಸಹಾಯ

ಕೇಂದ್ರ ಸರ್ಕಾರವು ನಮ್ಮ ರಾಜ್ಯದ ರೈತರಿಗೆ ಸಹಾಯ ಮಾಡುತ್ತಿದ್ದು, ₹3454 ಕೋಟಿ ರೂಪಾಯಿಗಳನ್ನು ಬರ ಪರಿಹಾರ ನಿಧಿಯಾಗಿ ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ ಮೊದಲ ಕಂತಿನ ಹಣವನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿ, ಸುಮಾರು 27 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಮೊದಲ ಕಂತಿನ ಹಣ ತಲುಪಿದೆ. ಮೊದಲ ಕಂತಿನ ಹಣ ವಿತರಣೆಗೆ ₹2451 ಕೋಟಿ ರೂಪಾಯಿ ಬಳಕೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ.

3000 rupees deposit to the bank account of farmers of the state