7ನೇ ತರಗತಿ ಪಾಸ್ ಆಗಿದ್ರೂ ಸಾಕು, ನಿಮಗೆ ಸಿಗಲಿದೆ KSRTC ಯಲ್ಲಿ ಕೆಲಸ, ಇಂದೇ ಅರ್ಜಿ ಸಲ್ಲಿಸಿ!
ಪ್ರಸ್ತುತ ಒಟ್ಟು 13,000 ಚಾಲಕ ಹುದ್ದೆಗಳು ಖಾಲಿ ಇದ್ದು, ತುಂಬಾ ಅಗತ್ಯವಿರುವ ಜಿಲ್ಲೆಗಳಲ್ಲಿ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಒಟ್ಟು 13,000 ಚಾಲಕ ಹುದ್ದೆಗಳು ಖಾಲಿ ಇದ್ದು, ತುಂಬಾ ಅಗತ್ಯವಿರುವ ಜಿಲ್ಲೆಗಳಲ್ಲಿ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಹೊರಗುತ್ತಿದೆ ಆಧಾರದ ಮೇಲೆ ಚಾಲಕರನ್ನು ನೇಮಕ ಮಾಡಿಕೊಳ್ಳಲಿದ್ದು, ಅರ್ಜಿ ಸಲ್ಲಿಸುವವರಿಗೆ ಇರಬೇಕಾದ ಅರ್ಹತೆಗಳು ಏನೇನು ಎಂದು ತಿಳಿಯೋಣ…
ಬಾಡಿಗೆ ಕಟ್ಟುವವರಿಗೆ ಸಿಹಿ ಸುದ್ದಿ, ಬೆಂಗಳೂರಿನ ಈ ಏರಿಯಾಗಳಲ್ಲಿ ಕಡಿಮೆಯಾಗಿದೆ ಬಾಡಿಗೆ ದರ!
ಹುದ್ದೆಯ ಮಾಹಿತಿ:
ಖಾಲಿ ಇರುವ ಹುದ್ದೆ: ಹೊರಗುತ್ತಿಗೆ ಆಧಾರದ ಚಾಲಕ ಹುದ್ದೆಗಳು
ಕೆಲಸದ ಸ್ಥಳ: ಪ್ರಸ್ತುತ ಬೆಂಗಳೂರು, ಆನೇಕಲ್ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹೆಚ್ಚು ಡ್ರೈವರ್ ಗಳ ಅವಶ್ಯಕತೆ ಇದೆ.
ಸಂಬಳ: ಆಯ್ಕೆಯಾಗುವ ಚಾಲಕರಿಗೆ ತಿಂಗಳಿಗೆ ₹23,700 ರೂಪಾಯಿ ಸಂಬಳ ಸಿಗಲಿದ್ದು, ಇದರ ಜೊತೆಗೆ PF/ESI ಸೌಲಭ್ಯ ಸಿಗುತ್ತದೆ.
ಅರ್ಹತೆಗಳು:
*ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವವರು 7ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
*ಅಭ್ಯರ್ಥಿಯ ಬಳಿ ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು.
*ಮೋಟಾರ್ ವಾಹನ ಚಾಲಕರಾಗಿ 2 ವರ್ಷಗಳ ಕಾಲ ಅನುಭವ ಇರಬೇಕು.
*ಇದು ಗುತ್ತಿಗೆಯ ಆಧಾರದ ಮೇಲೆ ನಡೆಯುವ ನೇಮಕಾತಿ ಆಗಿರುವುದರಿಂದ, ಕೆಲಸಕ್ಕೆ ಗ್ಯಾರೆಂಟಿ ಇರುವುದಿಲ್ಲ. ಖಾಯಂ ನೇಮಕಾತಿ ವೇಳೆ ಕೆಲಸದಿಂದ ತೆಗೆದು ಹಾಕಿದರು ಸಹ ಒಪ್ಪಿಕೊಳ್ಳಬೇಕಾಗುತ್ತದೆ. ಈ ಅಗ್ರಿಮೆಂಟ್ ಗೆ ಸೈನ್ ಮಾಡಿರಬೇಕು.
ಅರ್ಜಿ ಸಲ್ಲಿಕೆ: ಈ ಎಲ್ಲಾ ಅರ್ಹತೆಗಳು ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಇದಕ್ಕೆ ಬೇಕಿರುವ ದಾಖಲೆಗಳು ಕೂಡ ಅಭ್ಯರ್ಥಿಯ ಬಳಿ ಇರಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಅರ್ಜಿ ಪರಿಶೀಲಿಸಿ, ಡ್ರೈವಿಂಗ್ ತರಬೇತಿ ನೀಡಿ, ಇಂಟರ್ವ್ಯೂ ತೆಗೆದುಕೊಂಡು, ಡಾಕ್ಯುಮೆಂಟ್ ವೆರಿಫೈ ಮಾಡಿ, ಆಯ್ಕೆ ಮಾಡಿಕೊಳ್ಳಲಾಗುತ್ತದೆ.
10, 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ ಒಮ್ಮೆಲೇ ಬಿಡುಗಡೆ ಆಗಲಿದೆ! ಇಲ್ಲಿದೆ ಬಿಗ್ ಅಪ್ಡೇಟ್
ಈ ಹುದ್ದೆಯ ಬಗ್ಗೆ ಮತ್ತು ಅರ್ಜಿ ಸಲ್ಲಿಕೆ ಬಗ್ಗೆ ಪೂರ್ತಿ ಮಾಹಿತಿ ತಿಳಿಯಲು ಈ ಫೋನ್ ನಂಬರ್ ಗಳಿಗೆ ಅರ್ಜಿ ಸಲ್ಲಿಸಬಹುದು. ಚಾಮರಾಜನಗರ ಕೆ.ಎಸ್.ಆರ್.ಟಿ.ಸಿ ನಂಬರ್ 8050980889, 8618876846 ಈ ನಂಬರ್ ಗೆ ಕರೆ ಮಾಡಬಹುದು. ರಾಮನಗರ ಮತ್ತು ಆನೇಕಲ್ ಕೆ.ಎಸ್.ಆರ್.ಟಿ. ಸಿ ನಂಬರ್ 8090980889, 8618876846 ನಂಬರ್ ಗೆ ಕರೆಮಾಡಿ. ಈ ನಂಬರ್ ಗಳಿಗೆ ಕಾಲ್ ಮಾಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.
ಹೊಸ ಬಿಪಿಎಲ್ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಗುಡ್ ನ್ಯೂಸ್
ಹಳ್ಳಿಗಳಲ್ಲಿ ವಾಸ ಮಾಡುವ ಕುಟುಂಬಗಳಿಗೆ ಇದು ಒಂದು ಉತ್ತಮವಾದ ಉದ್ಯೋಗ ಅವಕಾಶ ಆಗಿದ್ದು, ಓದಿಲ್ಲದೇ ಇದ್ದು ಒಳ್ಳೆಯ ಕೆಲಸ ಸಿಗುವುದಿಲ್ಲ ಎಂದು ಬೇಸರದಲ್ಲಿ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ. ಹಾಗಾಗಿ ಅರ್ಹತೆ ಇರುವ ಎಲ್ಲರೂ ಸಹ ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕು.
7th standard pass is enough, you will get job in KSRTC