10, 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ ಒಮ್ಮೆಲೇ ಬಿಡುಗಡೆ ಆಗಲಿದೆ! ಇಲ್ಲಿದೆ ಬಿಗ್ ಅಪ್ಡೇಟ್
ಶೀಘ್ರದಲ್ಲೇ ಅಂದರೆ ಜುಲೈ ತಿಂಗಳ ಮೊದಲ ವಾರದ ಒಳಗೆ 3 ಕಂತುಗಳ ಹಣ ಒಟ್ಟಿಗೆ ಬಿಡುಗಡೆ ಆಗಲಿದೆ. ಹಾಗಾಗಿ ಮಹಿಳೆಯರು ನಿಶ್ಚಿಂತೆ ಇಂದ ಇರಬಹುದು.
ರಾಜ್ಯ ಸರ್ಕಾರವು ಮಹಿಳೆಯರಿಗೆ ಸಹಾಯ ಆಗಲಿ ಎಂದು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಆಗಿದೆ. ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಮನೆ ನಡೆಸಲು ಅಥವಾ ಅವರ ಖರ್ಚುಗಳಿಗೆ ಸಹಾಯ ಆಗುವ ಹಾಗೆ ಪ್ರತಿ ತಿಂಗಳು ₹2000 ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು.
ಶುರುವಾದ ಸಮಯದಿಂದ ಪ್ರತಿ ತಿಂಗಳು ಕೂಡ ಮಹಿಳೆಯರಿಗೆ ಸರಿಯಾದ ಸಮಯಕ್ಕೆ ಹಣ ವರ್ಗಾವಣೆ (Money Transfer) ಆಗಿದೆ. ಆದರೆ ಒಂದೆರಡು ತಿಂಗಳ ಹಿಂದೆ ಎಲೆಕ್ಷನ್ ಇದ್ದ ಕಾರಣ ಆ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ.
ಹೊಸ ಬಿಪಿಎಲ್ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಗುಡ್ ನ್ಯೂಸ್
ಅಂಥವರಿಗೆ ಈಗ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ 3 ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಯಾಕೆ ಬಂದಿಲ್ಲ ಎನ್ನುವುದಕ್ಕೆ ಪ್ರಮುಖ ಕಾರಣ ಇದೆ. ಅದು ಏನು ಎಂದರೆ, ಏಪ್ರಿಲ್ ತಿಂಗಳು ಮತ್ತು ಮೇ ತಿಂಗಳಿನಲ್ಲಿ ಎಲೆಕ್ಷನ್ ಇತ್ತು, ಜೂನ್ ತಿಂಗಳಿನಲ್ಲಿ ಫಲಿತಾಂಶ ಪ್ರಕಟವಾಯಿತು.
ಈ ವೇಳೆ ಸರ್ಕಾರಗಳು ಯಾವುದೇ ಗ್ಯಾರೆಂಟಿ ಯೋಜನೆಯ ಸೌಲಭ್ಯವನ್ನು ಜನರಿಗೆ ಕೊಡುವ ಹಾಗಿಲ್ಲ ಎನ್ನುವ ಒಂದು ನಿಯಮವನ್ನು ಜಾರಿಗೆ ತರಲಾಗಿತ್ತು. ಅದೇ ಕಾರಣಕ್ಕೆ 10, 11 ಮತ್ತು 12ನೇ ಕಂತಿನ ಹಣ ಬರುವುದಕ್ಕೆ ತಡವಾಗಿದೆ.
ಈ ರೂಲ್ಸ್ ಪಾಲಿಸಿದರೆ ಮಾತ್ರ ಜೂನ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಸಿಗೋದು! ಹೊಸ ಅಪ್ಡೇಟ್
ಆದರೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಡೆಯಿಂದ ಈ ಹಣ ವರ್ಗಾವಣೆ (Money Deposit) ಆಗುವ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಮಹಿಳೆಯರು ಹಣ ಬಂದಿಲ್ಲ ಎಂದು ಚಿಂತೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.
ಯಾರಿಗೆಲ್ಲಾ ಇನ್ನು ಹಣ ಬಂದಿಲ್ಲವೋ ಅವರಿಗೆಲ್ಲಾ 10, 11 ಮತ್ತು 12ನೇ ಕಂತಿನ 3 ತಿಂಗಳುಗಳ ಹಣ ಒಟ್ಟಿಗೆ ಜಮೆ ಆಗುತ್ತದೆ ಎಂದು ತಿಳಿಸಿದ್ದು, ಶೀಘ್ರದಲ್ಲೇ ಅಂದರೆ ಜುಲೈ ತಿಂಗಳ ಮೊದಲ ವಾರದ ಒಳಗೆ 3 ಕಂತುಗಳ ಹಣ ಒಟ್ಟಿಗೆ ಬಿಡುಗಡೆ ಆಗಲಿದೆ. ಹಾಗಾಗಿ ಮಹಿಳೆಯರು ನಿಶ್ಚಿಂತೆ ಇಂದ ಇರಬಹುದು.
ಫ್ರೀ ಅಂತ ಬೇಕಾಬಿಟ್ಟಿ ಕರೆಂಟ್ ಬಳಸೋಕು ಮುನ್ನ ಎಚ್ಚರ, ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್
ಹಾಗೆಯೇ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು, ರೇಷನ್ ಕಾರ್ಡ್ ಗೆ (Ration Card) ಆಧಾರ್ ಕಾರ್ಡ್ ಲಿಂಕ್ ಆಗಿದ್ಯಾ? ಆಧಾರ್ ಕಾರ್ಡ್ ಗೆ kyc ಹಾಗೂ ncpi ಮ್ಯಾಪಿಂಗ್ ಆಗಿದ್ಯಾ? ಬ್ಯಾಂಕ್ ಅಕೌಂಟ್ ಆಧಾರ್ ಮತ್ತು ರೇಷನ್ ಕಾರ್ಡ್ ಗೆ ಲಿಂಕ್ ಆಗಿದ್ಯಾ? ಬ್ಯಾಂಕ್ ಅಕೌಂಟ್ (Bank Account) ಆಕ್ಟಿವ್ ಆಗಿದ್ಯಾ ಎಂದು ಚೆಕ್ ಮಾಡಿಕೊಳ್ಳಬೇಕು. ಇದೆಲ್ಲವೂ ಸರಿ ಇದ್ದರೆ 3 ತಿಂಗಳ ಹಣ ಒಟ್ಟಿಗೆ ನಿಮಗೆ ಸಿಗಲಿದೆ.
The 10th, 11th and 12th installments of Gruha Lakshmi Money will be released at once