ಫ್ರೀ ಅಂತ ಬೇಕಾಬಿಟ್ಟಿ ಕರೆಂಟ್ ಬಳಸೋಕು ಮುನ್ನ ಎಚ್ಚರ, ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್

ತಿಂಗಳಿಗೆ 200 ಯೂನಿಟ್ ವರೆಗು ಮಾತ್ರ ವಿದ್ಯುತ್ ಬಳಕೆ ಮಾಡಬಹುದು, ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅಂಥವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ

Bengaluru, Karnataka, India
Edited By: Satish Raj Goravigere

ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಹೊಸ ಸರ್ಕಾರ ಜಾರಿಗೆ ಬಂದ ನಂತರ ಕೆಲವು ಹೊಸ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆ ಯೋಜನೆಗಳ ಮೂಲಕ ಜನರಿಗೆ ಅನುಕೂಲಗಳೇ ಆಗುತ್ತಿದೆ.

ರಾಜ್ಯ ಸರ್ಕಾರವು ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಹೆಸರಿನ 5 ಯೋಜನೆಗಳನ್ನು ಲಾಂಚ್ ಮಾಡಿದ್ದು, ಎಲ್ಲಾ ವರ್ಗದ, ಎಲ್ಲಾ ವಯೋಮಾನದ ಜನರಿಗೂ ಇದು ಸಹಾಯ ಆಗುತ್ತಿದೆ.

The government has brought new rules for the beneficiaries of Gruha Jyothi Yojana

ಇವುಗಳ ಪೈಕಿ ಪ್ರತಿ ಮನೆಗೂ ಉಚಿತ ವಿದ್ಯುತ್ (Free Electricity) ನೀಡುತ್ತಿರುವ ಯೋಜನೆ ಗೃಹಜ್ಯೋತಿ ಯೋಜನೆ (Gruha Jyothi Scheme) ಆಗಿದೆ. ಈ ಒಂದು ಯೋಜನೆಯ ಮೂಲಕ ಎಲ್ಲಾ ಮನೆಗಳಿಗೂ ಪ್ರತಿ ತಿಂಗಳು 200 ಯೂನಿಟ್ ವರೆಗು ಉಚಿತ ವಿದ್ಯುತ್ ಸಿಗುತ್ತಿದೆ.

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಅಕೌಂಟ್ ಗೆ ಬಂದಿಲ್ವಾ? ಹಾಗಿದ್ದಲ್ಲಿ ಈ ಕೆಲಸ ಮಾಡಿ

ಆದರೆ ವಿದ್ಯುತ್ ಉಚಿತ (Free Electricity) ಎಂದು ಹೇಗೆಂದರೆ ಹಾಗೆ ಬಳಸುವ ಹಾಗಿಲ್ಲ ಎನ್ನುವುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದೀಗ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ನೀವು ಪಾಲಿಸಬೇಕಿದೆ.

ಒಂದು ವೇಳೆ ಸರ್ಕಾರದ ಹೊಸ ನಿಯಮಗಳನ್ನು ಪಾಲಿಸದೇ ಹೋದರೆ, ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ನೀವು ಕಳೆದುಕೊಳ್ಳಬಹುದು. ಲೋಕಸಭಾ ಎಲೆಕ್ಷನ್ ಬಳಿಕ ಗ್ಯಾರೆಂಟಿ ಯೋಜನೆಗಳು ನಿಂತು ಹೋಗುತ್ತದೆ ಎಂದೇ ಹೇಳಲಾಗುತ್ತಿತ್ತು, ಆದರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಯೋಜನೆಗಳು ರದ್ದಾಗುವುದಿಲ್ಲ ಎನ್ನುವ ಭರವಸೆಯನ್ನೇನೋ ನೀಡಿದ್ದಾರೆ, ಆದರೆ ಇದೀಗ ಗೃಹಜ್ಯೋತಿ ಯೋಜನೆಗೆ ಹೊಸದೊಂದು ನಿಯಮವನ್ನ ಸಹ ತಂದಿದ್ದಾರೆ. ಇದನ್ನು ಎಲ್ಲಾ ಜನರು ಪಾಲಿಸಬೇಕಿದೆ.

ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಹಂತ ಹಂತವಾಗಿ ಹಣ ಬಿಡುಗಡೆ

Electricity billಹೊಸ ರೂಲ್ಸ್

ಇಷ್ಟು ದಿವಸಗಳ ಕಾಲ ಗೃಹಜ್ಯೋತಿ ಬಳಕೆ ಹೇಗಿತ್ತು ಎಂದರೆ, ಪ್ರತಿ ಮನೆಗೆ ಅವರು ತಿಂಗಳಿಗೆ ಎಷ್ಟು ವಿದ್ಯುತ್ ಬಳಕೆ ಮಾಡುತ್ತಾರೆ ಎನ್ನುವುದರ ಸರಾಸರಿ ಪಡೆದು, ಅದಕ್ಕಿಂತ 10% ವಿದ್ಯುತ್ ಉಚಿತವಾಗಿ ಬಳಕೆ ಮಾಡುವ ಅವಕಾಶ ಇತ್ತು.

ಜನರು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅದಕ್ಕಾಗಿ ಅವರು ವಿದ್ಯುತ್ ಬಿಲ್ (Electricity Bill) ಪಾವತಿ ಮಾಡಬೇಕಿತ್ತು. ಆದರೆ ಈಗ ಸರ್ಕಾರವು ವಿದ್ಯುತ್ ಬಿಲ್ ಗೆ ಸಂಬಂಧಿಸಿದ ಹಾಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ.

ಕೃಷಿ ಭೂಮಿಯ ಸರ್ವೇ ನಂಬರ್ ಬಳಸಿ ಬರ ಪರಿಹಾರ ಹಣ ಎಷ್ಟು ಬಂದಿದೆ ಸ್ಟೇಟಸ್ ತಿಳಿಯಿರಿ!

ಸರ್ಕಾರವು ಗೃಹಜ್ಯೋತಿ ಯೋಜನೆಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ನುಮುಂದೆ ಉಚಿತ ವಿದ್ಯುತ್ ಬಳಕೆ ಮಾಡುತ್ತಿರುವವರು, ತಿಂಗಳಿಗೆ 200 ಯೂನಿಟ್ ವರೆಗು ಮಾತ್ರ ವಿದ್ಯುತ್ ಬಳಕೆ ಮಾಡಬಹುದು, ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅಂಥವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಅವರ ಗೃಹಜ್ಯೋತಿ ಯೋಜನೆ ಕ್ಯಾನ್ಸಲ್ ಆಗುತ್ತದೆ. ಜನರು ಈ ನಿಯಮವನ್ನು ನೆನಪಿನಲ್ಲಿ ಇಟ್ಟುಕೊಂಡು ವಿದ್ಯುತ್ ಬಳಕೆ (Save Electricity) ಮಾಡಿ.

new rules for Gruha Jyothi scheme Free Electricity Yojana