Bangalore NewsKarnataka News

ಕೃಷಿ ಭೂಮಿಯ ಸರ್ವೇ ನಂಬರ್ ಬಳಸಿ ಬರ ಪರಿಹಾರ ಹಣ ಎಷ್ಟು ಬಂದಿದೆ ಸ್ಟೇಟಸ್ ತಿಳಿಯಿರಿ!

ರಾಜ್ಯ ಸರ್ಕಾರವು ರೈತರಿಗೆ ಅನುಕೂಲ ಆಗುವ ಹಾಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು (Farmers) ವ್ಯವಸಾಯದ ಸಮಯದಲ್ಲಿ ಬಹಳಷ್ಟು ಕಷ್ಟಪಡುತ್ತಾರೆ. ಆದರೆ ಹಲವು ಬಾರಿ ಅವರ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ.

ಸರಿಯಾದ ಸಮಯಕ್ಕೆ ಮಳೆ ಬರದೇ ಅಥವಾ ಅತಿಯಾದ ಮಳೆ ಬಂದು ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಹಾನಿ ಉಂಟಾಗಿಬಿಡುತ್ತದೆ. ಈ ರೀತಿ ಆದಾಗ ರೈತರಲ್ಲಿ ಆರ್ಥಿಕವಾಗಿ ಯಾವುದೇ ಚೈತನ್ಯ ಉಳಿದಿರುವುದಿಲ್ಲ.

Check drought relief money Status using the agricultural land survey number

ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಇದೇ ಪರಿಸ್ಥಿತಿ ಎದುರಾಗಿತ್ತು, ಉತ್ತಮವಾದ ಮಳೆ ಇಲ್ಲದೇ, ರೈತರಿಗೆ ಬೆಳೆ ನಷ್ಟ ಉಂಟಾಗಿ, ಕಷ್ಟದಲ್ಲಿದ್ದರು. ರೈತರ ಕಷ್ಟವನ್ನರಿತ ಸರ್ಕಾರ, ಅವರಿಗಾಗಿ ಬರ ಪರಿಹಾರ ನಿಧಿಯನ್ನು ಜಾರಿಗೆ ತಂದಿತು, ಇದಕ್ಕಾಗಿ ರೈತರಿಗೆ ಹಣವನ್ನು ಸಹ ಬಿಡುಗಡೆ ಮಾಡಿತು.

ಗೃಹಲಕ್ಷ್ಮಿ ಹಣ ಕಳೆದ ತಿಂಗಳು ಯಾರಿಗೆ ಬಂದಿಲ್ವೋ ಅವರಿಗೆ ಪೆಂಡಿಂಗ್ ಹಣ ಸೇರಿ ಒಟ್ಟಿಗೆ ₹4000 ಜಮೆ!

ಇದೀಗ ಬರ ಪರಿಹಾರ ನಿಧಿಯ ಹಣ ಬಿಡುಗಡೆ ಆಗಿದ್ದು, ಆ ಹಣ ತಮ್ಮ ಖಾತೆಗೆ (Bank Account) ಬಂದಿದೆಯಾ ಎಂದು ರೈತರು ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ತಿಳಿಯೋಣ..

ರೈತರಿಗೆ ಆರ್ಥಿಕವಾಗಿ ಸಹಾಯ ಆಗಲಿ, ಈ ವರ್ಷ ಸರಿಯಾಗಿ ಮಳೆ ಬಂದು, ಕೃಷಿಗೆ (Agriculture) ಅನುಕೂಲ ಆಗಲಿ ಎಂದು ಸರ್ಕಾರವು ರೈತರಿಗಾಗಿ ಬೆಳೆ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಕೃಷಿ ಸಚಿವರೇ ಮಾಹಿತಿ ನೀಡಿದ್ದು, ಕೇವಲ ಸರ್ವೇ ನಂಬರ್ ಇದ್ದರೆ ಸಾಕು, ರೈತರು ತಮ್ಮ ಖಾತೆಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳೋಣ…

ನಕಲಿ ರೇಷನ್ ಕಾರ್ಡ್‌ ರದ್ದು, ಅರ್ಹ ಪಡಿತರ ಚೀಟಿದಾರರಿಗೆ ಶೀಘ್ರದಲ್ಲೇ ಕಾರ್ಡ್ ವಿತರಣೆ! ಇಲ್ಲಿದೆ ಮಾಹಿತಿ

Farmerಬರ ಪರಿಹಾರ ಹಣ ಚೆಕ್ ಮಾಡುವ ಪ್ರಕ್ರಿಯೆ:

* https://parihara.karnataka.gov.in/Pariharahome/ ಇದು ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದ್ದು, ಈ ವೆಬ್ಸೈಟ್ ಗೆ ಭೇಟಿ ನೀಡಿ

*ಇಲ್ಲಿ ನೀವು Parihara Payment Report ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ

*ನಂತರ ನೀವು ಬರ ಆಗಿರುವ ವರ್ಷ/Year, ಋತು/Season, ವಿಪತ್ತಿನ ರೀತಿ/CLamity Type, ಬರ/Drought ಇದಿಷ್ಟನ್ನು ಸೆಲೆಕ್ಟ್ ಮಾಡಿ, Search/ಹುಡುಕು ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ.

*Search ಆಪ್ಶನ್ ನಲ್ಲಿ ಸರ್ವೇ ನಂಬರ್ ಎಂದು ಇರುತ್ತದೆ. ಆ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ

ಉಚಿತ ಕರೆಂಟ್ ಪಡೆಯೋಕೆ ಕೊಟ್ಟ ಆಧಾರ್ ಡೀಲಿಂಕ್ ಮಾಡೋದು ಹೇಗೆ? ಇಲ್ಲಿದೆ ಬಿಗ್ ಅಪ್ಡೇಟ್

*ಇಲ್ಲಿ ನೀವು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಯ ಸರ್ವೇ ನಂಬರ್, ಹಿಸ್ಸಾ ನಂಬರ್ ಇದೆಲ್ಲವನ್ನು ಹಾಕಿ Fetch ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ

*ಈಗ ನಿಮ್ಮ ಆಧಾರ್ ಕಾರ್ಡ್ ನ ಕೊನೆಯ 4 ನಂಬರ್ ಬರುತ್ತದೆ. ಅದನ್ನು ಸೆಲೆಕ್ಟ್ ಮಾಡಿ.

*ಈಗ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಜೊತೆಗೆ ಯಾವ ದಿನ ಎಷ್ಟು ಹಣ ಜಮೆ ಆಗಿದೆ ಎನ್ನುವುದನ್ನು ತೋರಿಸುತ್ತದೆ.

Check drought relief money Status using the agricultural land survey number

Our Whatsapp Channel is Live Now 👇

Whatsapp Channel

Related Stories