ಉಚಿತ ಕರೆಂಟ್ ಪಡೆಯೋಕೆ ಕೊಟ್ಟ ಆಧಾರ್ ಡೀಲಿಂಕ್ ಮಾಡೋದು ಹೇಗೆ? ಇಲ್ಲಿದೆ ಬಿಗ್ ಅಪ್ಡೇಟ್
ಗೃಹಜ್ಯೋತಿ ಯೋಜನೆಗೆ ಆಧಾರ್ ಲಿಂಕ್ ಮಾಡಿರುವುದನ್ನು ಡೀಲಿಂಕ್ ಮಾಡುವುದು ಹೇಗೆ? ಪೂರ್ತಿ ಡೀಟೇಲ್ಸ್ ಇಲ್ಲಿದೆ
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಈ 5 ಯೋಜನೆಗಳನ್ನು ಜಾರಿಗೆ ತಂದು, ಸರ್ಕಾರವು ಸಾಮಾನ್ಯ ಜನರಿಗೆ ನೆರವು ನೀಡುತ್ತಿದೆ. ಪ್ರತಿ ಯೋಜನೆ ಕೂಡ ಜನರಿಗೆ ಸಹಾಯ ಆಗುವಂಥದ್ದಾಗಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಮನೆ ನಡೆಸಿಕೊಂಡು ಹೋಗುವ ಮನೆಯ ಮುಖ್ಯಸ್ಥೆಗೆ 2000 ರೂಪಾಯಿ ಹಣ ಸಿಗುತ್ತಿದೆ. ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತಿ ತಿಂಗಳು ₹3000 ಸಿಗುತ್ತಿದೆ.
ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಅಕ್ಕಿ, ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಬದಲಾಗಿ ₹170 ರೂಪಾಯಿ ಹಣವನ್ನು ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತಿದೆ.
ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ರಾಜೀವ್ ಗಾಂಧಿ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಇನ್ನು ಗೃಹಜ್ಯೋತಿ ಯೋಜನೆಯ (Gruha Jyothi Yojana) ಮೂಲಕ ಎಲ್ಲಾ ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್ ವರೆಗು ಉಚಿತ ವಿದ್ಯುತ್ (Free Electricity) ನೀಡಲಾಗುತ್ತಿದೆ. ಮನೆಯಲ್ಲಿ 200 ಯೂನಿಟ್ ವರೆಗು ಉಚಿತ ವಿದ್ಯುತ್ ಬಳಕೆ ಮಾಡಬಹುದು, 200 ಯೂನಿಟ್ ಮೀರಿದರೆ, ಆಗ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡಬೇಕಾಗುತ್ತದೆ.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ಮತ್ತೊಂದು ಪ್ರಮುಖ ವಿಚಾರ ಏನು ಎಂದರೆ, ಗೃಹಜ್ಯೋತಿ ಸೌಲಭ್ಯ ಪಡೆಯಲು ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ (Aadhaar Card Link) ಮಾಡಬೇಕಾಗುತ್ತದೆ. ಇದು ಸರ್ಕಾರದ ಕಡ್ಡಾಯವಾದ ನಿಯಮ ಆಗಿದೆ.
ಆದರೆ ಕೆಲವು ಸಮಯದಲ್ಲಿ ಆಧಾರ್ ಕಾರ್ಡ್ ಅನ್ನು ಡೀಲಿಂಕ್ (Delink) ಮಾಡಬೇಕಾಗುತ್ತದೆ. ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುವವರು ಮನೆ ಬದಲಾಯಿಸುವ ಪರಿಸ್ಥಿತಿ ಬಂದಾಗ ಅಥವಾ ಇನ್ನು ಬೇರೆ ಎಮರ್ಜೆನ್ಸಿ ಸಮಯದಲ್ಲಿ ಆಧಾರ್ ಕಾರ್ಡ್ ಅನ್ನು ಡೀಲಿಂಕ್ ಮಾಡಬೇಕಾಗಿ ಬರಬಹುದು.
ಆ ರೀತಿ ಪರಿಸ್ಥಿತಿ ಬಂದಾಗ, ಹೇಗೆ ಡೀಲಿಂಕ್ ಮಾಡಬೇಕು ಎನ್ನುವುದು ಹಲವರಿಗೆ ಗೊತ್ತಿಲ್ಲ. ಇದರ ಬಗ್ಗೆ ಇಂದು ಮಾಹಿತಿ ತಿಳಿದುಕೊಳ್ಳೋಣ. ಹಾಗಿದ್ದಲ್ಲಿ ಡೀಲಿಂಕ್ ಮಾಡುವ ಪ್ರಕ್ರಿಯೆ ಹೇಗೆ ಎಂದು ತಿಳಿಯೋಣ…
ಈ ಕಾರ್ಡ್ ಇರುವ ಪೋಷಕರ ಮಕ್ಕಳಿಗೆ ಸಿಗಲಿದೆ ₹11,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ
ಆಧಾರ್ ಡೀಲಿಂಕ್ ಮಾಡುವ ಪ್ರಕ್ರಿಯೆ:
ಮೊದಲಿಗೆ ನಿಮ್ಮ ವಿದ್ಯುತ್ ಬಿಲ್ ಇಂದ ಆಧಾರ್ ಅನ್ನು ಡೀಲಿಂಕ್ ಮಾಡುವ ಆಯ್ಕೆಯನ್ನು ಸರ್ಕಾರ ನೀಡಿರಲಿಲ್ಲ. ಆದರೆ ಈಗ ಜನರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಮನೆ ಬದಲಾಯಿಸುವವರು ತಮ್ಮ ವಿದ್ಯುತ್ ಬಿಲ್ ಇಂದ ಆಧಾರ್ ಅನ್ನು ಡೀಲಿಂಕ್ ಮಾಡಬಹುದು..
ಜುಲೈ 1ರಿಂದ ಗ್ರಾಮ ಪಂಚಾಯತ್ ನಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣಪತ್ರಗಳು! ಇಲ್ಲಿದೆ ಮಾಹಿತಿ
ಇದಕ್ಕಾಗಿ ಆಧಾರ್ ಕಾರ್ಡ್ ಕಾಪಿ, ವಿದ್ಯುತ್ ಬಿಲ್, ಬಾಡಿಗೆ ಮನೆ ಡಾಕ್ಯುಮೆಂಟ್, ಇದೆಲ್ಲದರ ಜೊತೆಗೆ ನಿಮ್ಮ ಹತ್ತಿರದ ಎಸ್ಕಾಮ್ ಕಚೇರಿಗೆ ಭೇಟಿ ನೀಡಬಹುದು.. ಅಥವಾ ಸೇವಾಸಿಂಧು ಪೋರ್ಟಲ್ ಗೆ ಭೇಟಿ ನೀಡುವ ಮೂಲಕ sevasindhugs1.karnataka.gov.in/gruhajyothi ಡೀಲಿಂಕ್ ಮಾಡಬಹುದು.
How to delink given Aadhaar to get free electricity from Gruha Jyothi Yojana