ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ರಾಜೀವ್ ಗಾಂಧಿ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಇದೀಗ ಬಡತನದಲ್ಲಿ ಇರುವವರಿಗೆ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಜಾರಿಗೆ ತಂದಿದೆ.

Bengaluru, Karnataka, India
Edited By: Satish Raj Goravigere

ಕಷ್ಟದಲ್ಲಿರುವವರಿಗೆ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಕನಸು ಇರುತ್ತದೆ. ಆದರೆ ಅವರು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಬ್ಯಾಂಕ್ ಇಂದ ಲೋನ್ (Bank Loan) ಪಡೆದು, ಬಡ್ಡಿ ಕಟ್ಟುವಷ್ಟು ಸೌಕರ್ಯ ಕೂಡ ಇರುವುದಿಲ್ಲ.

ಅಂಥವರಿಗೆ ಸ್ವಂತ ಮನೆ (Own House) ಮಾಡಿಕೊಳ್ಳುವುದಕ್ಕೆ ಸರ್ಕಾರವೇ ಸಹಾಯ ಮಾಡುತ್ತದೆ. ಇದೀಗ ರಾಜ್ಯ ಸರ್ಕಾರವು ಜನರಿಗೆ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆಯ ಬಗ್ಗೆ ಇಂದು ತಿಳಿಯೋಣ.

Application Invitation for Free Housing Scheme, Apply for Rajiv Gandhi Housing Scheme today

ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಬಡತನದಲ್ಲಿ ಇರುವವರಿಗೆ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಮೂಲಕ ಜನರಿಗೆ ಉಚಿತವಾಗಿ ಮನೆ ಮಾಡಿಕೊಳ್ಳಲು ಸಹಾಯ ಮಾಡಲಾಗುತ್ತದೆ. ಈ ಯೋಜನೆಯ ಸೌಲಭ್ಯವನ್ನು ರಾಜ್ಯದಲ್ಲಿ ಬಹಳಷ್ಟು ಜನರು ಪಡೆದುಕೊಳ್ಳಬಹುದು. ಹಾಗಿದ್ದಲ್ಲಿ ಈ ಯೋಜನೆಗೆ ಅಪ್ಲೈ ಮಾಡುವ ಬಗ್ಗೆ ಪೂರ್ತಿ ಡೀಟೇಲ್ಸ್ ತಿಳಿಯೋಣ ಬನ್ನಿ…

ಕಬಾಬ್ ಮಾರಾಟ ಬ್ಯಾನ್‌! ಕೃತಕ ಬಣ್ಣ ಅಥವಾ ಕಲರ್ ಬಳಸಿದ್ರೆ 7 ವರ್ಷ ಜೈಲು; ಆರೋಗ್ಯ ಇಲಾಖೆ

ರಾಜೀವ್ ಗಾಂಧಿ ವಸತಿ ಯೋಜನೆ:

*ಈ ಯೋಜನೆಯ ಮೂಲಕ 7.5 ಲಕ್ಷ ರೂಪಾಯಿಗಳು ಮನೆ ಕಟ್ಟುವುದಕ್ಕೆ ಬೇಕಾಗುವ ಮೊತ್ತ ಆಗಿದೆ.

*ಇದರ ಪೈಕಿ 3.5 ಲಕ್ಷ ರೂಪಾಯಿಗಳನ್ನು ಮನೆಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ನೀಡುತ್ತದೆ.

*ಇನ್ನು 3 ಲಕ್ಷ ರೂಪಾಯಿಗಳನ್ನು ಮನೆಯ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ನೀಡಲಿದೆ.

*ಇನ್ನು 1 ಲಕ್ಷ ರೂಪಾಯಿ ರೂಪಾಯಿಗಳನ್ನು ಫಲಾನುಭವಿಗಳು ಖರ್ಚು ಮಾಡಬೇಕಾಗುತ್ತದೆ..

ಈ ಯೋಜನೆಯ ಅಡಿಯಲ್ಲಿ 52,189 ಮನೆಗಳ ನಿರ್ಮಾಣ ಆಗಲಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಮತ್ತೊಂದು ಸಿಹಿಸುದ್ದಿ! ಪ್ರತಿ ಶನಿವಾರ ಇದೆ ಸರ್ಪ್ರೈಸ್

Free Housing Schemeಅರ್ಜಿ ಸಲ್ಲಿಕೆಗೆ ಬೇಕಿರುವ ದಾಖಲೆಗಳು:

ರಾಜೀವ್ ಗಾಂಧಿ ಯೋಜನೆಗೆ ಅರ್ಜಿ ಸಲ್ಲಿಸುವವರ ಬಳಿ ಈ ಎಲ್ಲಾ ದಾಖಲೆಗಳು ಇರಬೇಕು:

*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಬರ್ತ್ ಸರ್ಟಿಫಿಕೇಟ್
*ಬ್ಯಾಂಕ್ ಪಾಸ್ ಬುಕ್
*ಮೃತರಾಗಿರುವವರ ಡೆತ್ ಸರ್ಟಿಫಿಕೇಟ್
ಇನ್ನಿತರ ದಾಖಲೆಗಳು

ಜುಲೈ 1ರಿಂದ ಗ್ರಾಮ ಪಂಚಾಯತ್ ನಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣಪತ್ರಗಳು! ಇಲ್ಲಿದೆ ಮಾಹಿತಿ

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಮನೆ ಪಡೆಯಲು ಅರ್ಜಿ ಸಲ್ಲಿಸುವವರು ಮೊದಲಿಗೆ https://ashraya.karnataka.gov.in/nannamane/index.aspx ಈ ಲಿಂಕ್ ಗೆ ಭೇಟಿ ನೀಡಬೇಕು.

ಇಲ್ಲಿ ನಿಮ್ಮ ಹೋಬಳಿ, ತಾಲ್ಲೂಕು ಈ ಎಲ್ಲಾ ಮಾಹಿತಿಗಳು, RD ನಂಬರ್ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಿ, ಸರಿಯಾಗಿ ಎಲ್ಲವನ್ನು ಫಿಲ್ ಮಾಡಿ ಅಪ್ಲೈ ಮಾಡಿ.

Application Invitation for Free Housing Scheme, Apply for Rajiv Gandhi Housing Scheme today