ಜುಲೈ 1ರಿಂದ ಗ್ರಾಮ ಪಂಚಾಯತ್ ನಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣಪತ್ರಗಳು! ಇಲ್ಲಿದೆ ಮಾಹಿತಿ
ಇನ್ನು ಮುಂದೆ ಗ್ರಾಮ ಪಂಚಾಯತ್ ನಲ್ಲೆ ನೀವು ಜನನ ಹಾಗೂ ಮರಣ ಪ್ರಮಾಣಪತ್ರ ಪಡೆಯಬಹುದಾಗಿದೆ. ಹಾಗಾಗಿ ಸಮಯ ಹಾಗೂ ಹಣ ಎರಡು ಕೂಡ ಉಳಿತಾಯ ಆಗುವ ಜೊತೆಗೆ ಗ್ರಾಮಸ್ಥರಿಗೆ ಕಚೇರಿ ಅಲೆಯುವ ಅಗತ್ಯ ಕಂಡು ಬರಲಾರದು.
ಮನುಷ್ಯ ಹುಟ್ಟಿದ ಕೂಡಲೇ ಜನನ ಪ್ರಮಾಣಪತ್ರ (Birth Certificate) ಹಾಗೂ ಮರಣ ಹೊಂದಿದರು ಮರಣ ಪ್ರಮಾಣಪತ್ರ (Death Certificate) ನೀಡುವುದು ಇಂದು ಕಡ್ಡಾಯ ಎಂದು ಹೇಳಬಹುದು. ಈ ಜನನ ಮತ್ತು ಮರಣ ಸರ್ಟಿಫಿಕೇಟ್ ಅನ್ನು ಪಡೆಯಲು ಹಿಂದೆಲ್ಲ ಸಾಕಷ್ಟು ಕಷ್ಟ ಪಡಬೇಕಿತ್ತು ಆದರೆ ಈಗ ಆ ಕಾಲ ಬದಲಾಗಿದೆ.
ಇನ್ನು ಮುಂದೆ ಗ್ರಾಮ ಪಂಚಾಯತ್ ನಲ್ಲೆ (Gram Panchayat) ನೀವು ಜನನ ಹಾಗೂ ಮರಣ ಪ್ರಮಾಣಪತ್ರ ಪಡೆಯಬಹುದಾಗಿದೆ. ಹಾಗಾಗಿ ಸಮಯ ಹಾಗೂ ಹಣ ಎರಡು ಕೂಡ ಉಳಿತಾಯ ಆಗುವ ಜೊತೆಗೆ ಗ್ರಾಮಸ್ಥರಿಗೆ ಕಚೇರಿ ಅಲೆಯುವ ಅಗತ್ಯ ಕಂಡು ಬರಲಾರದು.
ಜನನ ಮತ್ತು ಮರಣ ಸರ್ಟಿಫಿಕೇಟ್ ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು ಸಾಕಷ್ಟು ಜನರಿಗೆ ಇದರಿಂದ ಸಮಸ್ಯೆಗಳಾಗಿವೆ. ಅದರಲ್ಲೂ ಹುಟ್ಟಿದ ಮಗುವಿಗೆ ಸರಕಾರಿ ಸೌಲಭ್ಯ ಇತರ ಕೆಲಸಕ್ಕೆ ಶೈಕ್ಷಣಿಕ ಉದ್ದೇಶಕ್ಕೆ ಜನನ ಸರ್ಟಿಫಿಕೇಟ್ ಅಗತ್ಯವೆಂದು ಇದ್ದರೆ, ಮರಣ ಹೊಂದಿದ್ದ ವ್ಯಕ್ತಿಯ ಆಸ್ತಿ (Property) ಪಾಲು ಸಾಲ ಮರುಪಾವತಿ (Loan Re Payment) ಇತ್ಯಾದಿಗಳಿಗೆ ಮರಣ ಹೊಂದಿದ್ದಕ್ಕೆ ಪುರಾವೆ ನೀಡುವುದು ಕೂಡ ಬಹಳ ಮುಖ್ಯ. ಹೀಗಾಗಿ ಇಂತಹ ವಿಚಾರದಲ್ಲಿ ಇನ್ನು ಮುಂದೆ ವಿಳಂಬ ಕ್ರಮ ಇರಲಾರದು ಎಂದು ಹೇಳಬಹುದು.
ಸರ್ಕಾರಿ ಶಾಲೆ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಮತ್ತೊಂದು ಸಿಹಿಸುದ್ದಿ! ಪ್ರತಿ ಶನಿವಾರ ಇದೆ ಸರ್ಪ್ರೈಸ್
ಕರ್ತವ್ಯ ಹಂಚಿಕೆ
ರಾಜ್ಯದಲ್ಲಿ ಜನನ ಸರ್ಟಿಫಿಕೇಟ್ ಪಡೆಯಲು ಈ ಹಿಂದೆಯೇ 6000 ಕ್ಕೂ ಅಧಿಕ ಅರ್ಜಿ ಬಂದಿದೆ. ಅದರ ವಿಲೆವಾರಿ ಬಾಕಿ ಇದೆ ಅದರ ನಡುವೆ ಹೊಸದಾಗಿ 59 ಸಾವಿರಕ್ಕೂ ಅಧಿಕ ಅರ್ಜಿ ಬಂದಿದೆ. ಮರಣ ಸರ್ಟಿಫಿಕೇಟ್ ಗಾಗಿ 2,470 ಹಳೆ ಅರ್ಜಿ ಹಾಗೂ 31 ಸಾವಿರ ಹೊಸ ಅರ್ಜಿ ಬಂದಿದೆ.
ಆದರೆ ಅರ್ಜಿ ವಿಲೇವಾರಿ ಇನ್ನು ಬಾಕಿ ಇದೆ, ಹಾಗಾಗಿ ಅಗತ್ಯಕ್ಕೆ ತಕ್ಕಷ್ಟು VA ಮತ್ತು ಕಂದಾಯ ನಿರೀಕ್ಷಕರು ಇಲ್ಲದ ಕಾರಣ ಅರ್ಜಿ ವಿಲೇವಾರಿ ಮಾಡುವುದು ಸರಕಾರದ ಕರ್ತವ್ಯ ವಾಗಿದ್ದು ಶೀಘ್ರ ಜನನ ಮತ್ತು ಮರಣ ಸರ್ಟಿಫಿಕೇಟ್ ನೀಡಲು ಕರ್ತವ್ಯವನ್ನು ಹಂಚಿಕೆ ಮಾಡಲಾಗಿದೆ ಎಂದು ಜನನ ಮರಣಗಳ ಮುಖ್ಯ ನೋಂದಣಾಧಿಕಾರಿ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.
ನಕಲಿ ದಾಖಲೆ ನೀಡಿ ಬೋಗಸ್ ಲೇಬರ್ ಕಾರ್ಡ್ ಪಡೆದಿರುವವರಿಗೆ ಸರ್ಕಾರದಿಂದ ಖಡಕ್ ಸೂಚನೆ!
ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ನೀಡಲು ಇಷ್ಟು ದಿನಗಳ ಕಾಲ ಗ್ರಾಮ ಲೆಕ್ಕಿಗರು (VA), ಕಂದಾಯ ನಿರೀಕ್ಷಕರು ಮತ್ತು ಆರೋಗ್ಯ ಅಧಿಕಾರಿಗಳಿಗೆ ಈ ಒಂದು ವಿಶೇಷ ಅಧಿಕಾರ ಇತ್ತು. ಆದರೆ ಇನ್ನು ಮುಂದೆ ಜುಲೈ 1 ರಿಂದ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಈ ಒಂದು ಸೇವೆ ವಿಸ್ತರಿಸಲಾಗಿದ್ದನ್ನು ನಾವು ಕಾಣಬಹುದು.
ಜನನ ಅಥವಾ ಮರಣ ಆದಂತಹ 30 ದಿನಗಳ ಒಳಗಾಗಿ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವ ಅಧಿಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ. ಈ ಬಗ್ಗೆ ಸ್ವತಃ ಜನನ, ಮರಣ ನೋಂದಣಿಗಳ ಮುಖ್ಯ ನೋಂದಣಾಧಿಕಾರಿ ಅವರು ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇಂತಹ ಮಹಿಳೆಯರಿಗೆ ಇನ್ಮುಂದೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ! ಏನಿದು ಸರ್ಕಾರದ ಹೊಸ ರೂಲ್ಸ್
ದಂಡ ವಿಧಿಸಲಾಗುವುದು
ಜನನ ಅಥವಾ ಮರಣವಾಗಿ 21 ದಿನಗಳ ಒಳಗೆ ನೋಂದಣಿ ಮಾಡಿದರೆ ಉಚಿತವಾಗಿ ಸರ್ಟಿಫಿಕೇಟ್ ಸಿಗಲಿದೆ. ಅದೇ ರೀತಿ 30 ದಿನಗಳ ಒಳಗೆ ನೋಂದಾಯಿಸಿದರೆ 2 ರೂಪಾಯಿ ವಿಳಂಬ ಶುಲ್ಕ ಹಾಗೂ 30 ರಿಂದ 1 ವರ್ಷದ ಒಳಗೆ ನೋಂದಣಿ ಮಾಡಿದರೆ 5 ರೂಪಾಯಿ ಶುಲ್ಕ ವಿಧಿಸಲಾಗುವುದು. ಒಂದು ವರ್ಷದ ಬಳಿಕ ನೋಂದಣಿ ಮಾಡಿದರೆ ಕರ್ನಾಟಕ ಜನನ ಮರಣ ನೋಂದಣಿ ನಿಯಮದ ಪ್ರಕಾರ 10 ರೂಪಾಯಿ ತನಕ ವಿಳಂಬ ಶುಲ್ಕ ಪಾವತಿ ಮಾಡಬೇಕು.
Birth and death certificates will be available in Gram Panchayats from July 1