ನಕಲಿ ದಾಖಲೆ ನೀಡಿ ಬೋಗಸ್ ಲೇಬರ್ ಕಾರ್ಡ್ ಪಡೆದಿರುವವರಿಗೆ ಸರ್ಕಾರದಿಂದ ಖಡಕ್ ಸೂಚನೆ!

Story Highlights

ನಿಜವಾದ ಕಾರ್ಮಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಬೋಗಸ್‌ ಕಾರ್ಡ್‌ ಪತ್ತೆ ಮಾಡುವ ನಿಟ್ಟನಲ್ಲಿ ನೋಂದಣಿ (Registration) ಹಾಗೂ ರಿನೀವಲ್‌ (Renewal) ಸಮಯದಲ್ಲಿ ಸೂಕ್ತ ವಾಗಿ ನಿಗಾ ವಹಿಸಲಾಗುತ್ತದೆ.

Labour Card : ಇಂದು ಸರಕಾರ ಬಡವರ್ಗದ ಜನತೆಗಾಗಿ ಹಲವು‌ ರೀತಿಯ ಸೌಲಭ್ಯ ಗಳನ್ನು ನೀಡುತ್ತಲೇ ಬಂದಿದೆ. ಹೌದು ರೈತರಿಗೆ, ಹಿಂದುಳಿದ ವರ್ಗದವರಿಗೆ, ನಿರುದ್ಯೋಗಿಗಳಿಗೆ ಇತ್ಯಾದಿ. ಅದರಲ್ಲಿ ಮುಖ್ಯವಾಗಿ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯು ಹಲವು ಸೌಲಭ್ಯ ಗಳನ್ನು ನೀಡ್ತಾ ಇದೆ.

ಕಾರ್ಮಿಕರು ಕೂಡ ಆರ್ಥಿಕ ವಾಗಿ ಸುಧಾರಣೆ ಯಾಗಬೇಕು, ಸರಕಾರದ ಹಲವು ಸೌಲಭ್ಯ ಗಳು ಸಿಗುವಂತೆ ಆಗಬೇಕು ಎಂದು ಕಾರ್ಮಿಕ ಕಾರ್ಡ್ ಅನ್ನು ಜಾರಿಗೆ ತಂದಿದ್ದು ಇದೀಗ ಇಂತಹ ಕಾರ್ಮಿಕ ಕಾರ್ಡ್ ಹೊಂದಿರುವ ಜನರಿಗೆ ಶಾಕಿಂಗ್ ವಿಚಾರ ವೊಂದನ್ನು ನೀಡಿದೆ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗಲೆಂದೇ ಲೇಬರ್ ಕಾರ್ಡ್ ಜಾರಿಗೆ ತಂದಿರುವಂತದ್ದು, ಆದರೆ ಇಂದು ಆರ್ಥಿಕವಾಗಿ ಸುಧಾರಿಸಿದ್ದರೂ ಕಾರ್ಮಿಕ ರಲ್ಲದವರು ಕೂಡ ಕಾರ್ಮಿಕ ಕಾರ್ಡ್ ಗಳನ್ನು ಮಾಡಿಸಿಕೊಂಡು ವಿವಿಧ ಸವಲತ್ತುಗಳನ್ನು ಪಡೆದು ಕೊಳ್ಳುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದ್ದು, ಇದರಲ್ಲಿ ಕಾರ್ಮಿಕ ಕಾರ್ಡ್ ಗಳು ಬೋಗಸ್ (Fake) ಎಂಬುದು ತಿಳಿದುಬಂದಿದೆ. ಹಾಗಾಗಿ, ಅವುಗಳನ್ನು ರದ್ದುಗೊಳಿಸುವ ತಿರ್ಮಾನ ಕೂಡ ಮಾಡಿದೆ.

ಇಂತಹ ಮಹಿಳೆಯರಿಗೆ ಇನ್ಮುಂದೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ! ಏನಿದು ಸರ್ಕಾರದ ಹೊಸ ರೂಲ್ಸ್

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲೆ ಮಾಡಿಕೊಂಡು ಕಾರ್ಮಿಕ ಕಲ್ಯಾಣ ಮಂಡಳಿ ನೀಡುವ ಗುರುತಿನ ಚೀಟಿ ಪಡೆದಿದ್ದಾರೆ. ಇದನ್ನು ಗಮನಿಸಿರುವ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹೊಸ ಅಭಿಯಾನ ಕೂಡ ಆರಂಭ ಮಾಡಿದೆ.

ಇದರಿಂದ ನಿಜವಾದ ಕಾರ್ಮಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಬೋಗಸ್‌ ಕಾರ್ಡ್‌ ಪತ್ತೆ ಮಾಡುವ ನಿಟ್ಟನಲ್ಲಿ ನೋಂದಣಿ (Registration) ಹಾಗೂ ರಿನೀವಲ್‌ (Renewal) ಸಮಯದಲ್ಲಿ ಸೂಕ್ತ ವಾಗಿ ನಿಗಾ ವಹಿಸಲಾಗುತ್ತದೆ.

ರಿನೀವಲ್‌ ವೇಳೆ ಕೂಡ ಕಾರ್ಡ್‌ದಾರರ ದಾಖಲೆ ಪರಿಶೀಲಿಸಿ (Documents) ಅದರಲ್ಲೂ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿಅಂತಹ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತದೆ.. ಒಂದು ವೇಳೆ ಇಂತಹ ಕಾರ್ಡ್ ಮಾಡಿಸಿಕೊಂಡಲ್ಲಿ ಸೂಕ್ತವಾದ ಕ್ರಮ ಕೈಗೊಳ್ಳಲಿದ್ದು ಬೋಗಸ್‌ ಕಾರ್ಡ್‌ ಮಾಡಿಸಿ ಕೊಂಡವರು ಸ್ವ ಇಚ್ಛೆಯಿಂದ ಒಪ್ಪಿದರೆ ಒಪ್ಪಿಗೆ ಪತ್ರ ಪಡೆದು ಕಾನೂನು ಕ್ರಮ ಕೈಬಿಡಲಾಗುತ್ತದೆ.

ಸೆಪ್ಟೆಂಬರ್ 30ರ ನಂತರ ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರ ಖಡಕ್ ನಿರ್ಧಾರ

Labour Cardಇವರು ಮಾತ್ರ ಅರ್ಹರು

*ಈ ಕಾರ್ಡ್ ಅನ್ನು ಕಟ್ಟಡ ಕಾರ್ಮಿಕರು ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ನೀಡಲಾಗುತ್ತದೆ

*ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕಾರ್ಡ್ ವಿತರಣೆ ಮಾಡಲಾಗುತ್ತದೆ.

*ಕನಿಷ್ಠ 90 ದಿನಗಳ ಕಾಲ ಯಾವುದೇ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಮಾತ್ರ ಈ ಕಾರ್ಡ್ ಪಡೆಯಬಹುದು

*ಇನ್ನು 18 ರಿಂದ 60 ವರ್ಷ ವಯಸ್ಸಿನ ಯಾವುದೇ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.

*ಇದಕ್ಕೆ ಬೇಕಾದ ಸೂಕ್ತವಾದ ದಾಖಲೆ ಯನ್ನು ಹೊಂದಿರಬೇಕು‌

ಇನ್ಮುಂದೆ ಅನ್ನಭಾಗ್ಯ ಯೋಜನೆಯ ಹಣ ಸಿಗೋದಿಲ್ಲ! ಧಿಡೀರ್ ರಾಜ್ಯ ಸರ್ಕಾರದಿಂದ ಹೊಸ ಸುದ್ದಿ

Notice to those who got bogus labor card by giving fake documents

Related Stories