Bangalore NewsKarnataka News

ಸೆಪ್ಟೆಂಬರ್ 30ರ ನಂತರ ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರ ಖಡಕ್ ನಿರ್ಧಾರ

Ration Card : ಸಧ್ಯದ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಬಳಿ ರೇಷನ್ ಕಾರ್ಡ್ ಇರುವುದು ಅಗತ್ಯ. ಸರ್ಕಾರದಿಂದ ಸಿಗುವ ಯಾವುದೇ ಪ್ರಯೋಜನ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು ಎಂದು ತಿಳಿಸಲಾಗಿದೆ.

ಹಾಗಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಬಹುತೇಕ ಜನರು ಸರ್ಕಾರದಿಂದ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆದರೆ ಸೆಪ್ಟೆಂಬರ್ 30ರ ಒಳಗೆ ಈ ಒಂದು ಕೆಲಸ ಮಾಡಿಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ (Ration Card Cancellation).

After September 30, the ration card of such people will be cancelled

ಹೌದು, ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಬಡವರಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ವಿಷಯಕ್ಕಾಗಲಿ, ಪ್ರತಿ ತಿಂಗಳು ರೇಷನ್ ಪಡೆಯುವ ವಿಚಾರಕ್ಕೆ ಆಗಲಿ, ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳೇ ಆಗಲಿ ಇದೆಲ್ಲದಕ್ಕೂ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು. ಆದರೆ ಬಿಪಿಎಲ್ ಕಾರ್ಡ್ ಹೊಂದಿರುವ ಹಲವು ಜನರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಹೌದು, ಒಂದೇ ಮನೆಯಲ್ಲಿ ವಾಸ ಮಾಡುತ್ತಾ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.

ಇನ್ಮುಂದೆ ಅನ್ನಭಾಗ್ಯ ಯೋಜನೆಯ ಹಣ ಸಿಗೋದಿಲ್ಲ! ಧಿಡೀರ್ ರಾಜ್ಯ ಸರ್ಕಾರದಿಂದ ಹೊಸ ಸುದ್ದಿ

ಒಂದೇ ಕುಟುಂಬದವರು, ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವವರು ತಮ್ಮ ಕುಟುಂಬಗಳು ಬೇರೆ ಬೇರೆ ರೀತಿ ಎನ್ನುವ ಹಾಗೆ ಹೆಚ್ಚು ಬಿಪಿಎಲ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ.

ಇಂಥ ಪ್ರಕರಣಗಳನ್ನು ತಡೆ ಹಿಡಿಯುವುದಕ್ಕೆ ಸರ್ಕಾರ ಸಹ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರೂ ಕೂಡ ಈ ಒಂದು ಪ್ರಮುಖ ಕೆಲಸ ಮಾಡಿಸಲೇಬೇಕು ಎಂದು ತಿಳಿಸಿದೆ. ಹೌದು, ನಿಮ್ಮ ಬಳಿ ಬಿಪಿಎಲ್ ರೇಶನ್ ಕಾರ್ಡ್ ಇದ್ದರೆ, ನೀವು ಅದನ್ನು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಬೇಕು.

ರೇಶನ್ ಕಾರ್ಡ್ ವಿಚಾರದಲ್ಲಿ ಆಗುತ್ತಿರುವ ಸ್ಕ್ಯಾಮ್ ಗಳನ್ನು ತಡೆಯಲು ಸರ್ಕಾರ ಈ ಒಂದು ನಿಯಮವನ್ನು ಜಾರಿಗೆ ತಂದಿತು. 2017ರಲ್ಲಿ ಪಿಡಿಎಸ್ ನ ಮುಖಾಂತರ ಈ ನಿಯಮ ತರಲಾಗಿದ್ದು, ಈಗಾಗಲೇ ಹಲವು ಸಾರಿ ತಿಳಿಸಿದ್ದರು ಸಹ ಬಹಳಷ್ಟು ಜನರು ಇನ್ನು ಕೂಡ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ.

ಈ ಪ್ರಕ್ರಿಯೆಗೆ ಈಗ ಕೊನೆಯ ದಿನಾಂಕ ನಿಗದಿ ಮಾಡಲಾಗಿದ್ದು, 2024ರ ಸೆಪ್ಟೆಂಬರ್ 30ರ ಒಳಗೆ ನಿಮ್ಮ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಎಂದರೆ ನಿಮ್ನ ರೇಷನ್ ಕಾರ್ಡ್ ರದ್ದಾಗಲಿದೆ. ಹಾಗಿದ್ದಲ್ಲಿ ಈ ಕೆಲಸ ಮಾಡುವುದು ಹೇಗೆ ಎಂದು ತಿಳಿಯೋಣ..

ಇನ್ಮೇಲೆ ಪ್ರತಿ ತಿಂಗಳು ಈ ತಾರೀಕಿಗೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆ ತಲುಪಲಿದೆ! ಸರ್ಕಾರದ ಹೊಸ ನಿರ್ಧಾರ

Ration Cardಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ:

*ಮೊದಲು ನಿಮ್ಮ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

*ವೆಬ್ಸೈಟ್ ಗೆ ಲಾಗಿನ್ ಮಾಡಿ, kyc ಪ್ರಕ್ರಿಯೆ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ

*ಇಲ್ಲಿ ನಿಮ್ಮ ಹೆಸರು ಅಡ್ರೆಸ್, ಡೇಟ್ ಆಫ್ ಬರ್ತ್ ಅಂಥ ಪರ್ಸನಲ್ ಡೀಟೇಲ್ಸ್ ಕೇಳಲಾಗುತ್ತದೆ, ಅವೆಲ್ಲವನ್ನೂ ಭರ್ತಿ ಮಾಡಿ.

*ಬಳಿಕ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಇನ್ನಿತರ ಮಾಹಿತಿಗಳನ್ನು ಅಪ್ಲೋಡ್ ಮಾಡಿ

*ಇದಿಷ್ಟು ಕೆಲಸ ಆದ ನಂತರ Submit ಮಾಡಿ.

*ಈ ಕೆಲಸ ಪೂರ್ತಿ ಮುಗಿದ ನಂತರ ನಿಮ್ಮ ಫೋನ್ ನಂಬರ್ ಅಥವಾ ಇಮೇಲ್ ಐಡಿಗೆ ಸಂದೇಶ ಬರುತ್ತದೆ.

ಶಕ್ತಿ ಯೋಜನೆಗೆ ಹೊಸ ರೂಲ್ಸ್ ಜಾರಿ! ಫ್ರೀ ಬಸ್ ಹತ್ತುವ ಮಹಿಳೆಯರು ನಿಯಮ ಪಾಲಿಸಲೇಬೇಕು

After September 30, the ration card of such people will be cancelled

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories