ಇನ್ಮೇಲೆ ಪ್ರತಿ ತಿಂಗಳು ಈ ತಾರೀಕಿಗೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆ ತಲುಪಲಿದೆ! ಸರ್ಕಾರದ ಹೊಸ ನಿರ್ಧಾರ

ರಾಜ್ಯದ ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಆಗಿದೆ. ಈ ಯೋಜನೆಯ ಮೂಲಕ ಮನೆಯನ್ನು ನಡೆಸಿಕೊಂಡು ಹೋಗುತ್ತಿರುವ ಮಹಿಳೆಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ₹2000 ರೂಪಾಯಿಗಳನ್ನು ಸರ್ಕಾರದ ಕಡೆಯಿಂದ ಜಮೆ ಮಾಡಲಾಗುತ್ತಿದೆ. ಇದರಿಂದ ಮಹಿಳೆಯರ ಆರ್ಥಿಕ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಆದರೂ ಕಡಿಮೆ ಮಾಡುವ ಉದ್ದೇಶ ಸರ್ಕಾರದ್ದು.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನ ಜಾರಿಗೆ ತರಲಾಯಿತು. ನಮ್ಮ ರಾಜ್ಯದ ಸುಮಾರು 1 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿ, ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.
ಶಕ್ತಿ ಯೋಜನೆಗೆ ಹೊಸ ರೂಲ್ಸ್ ಜಾರಿ! ಫ್ರೀ ಬಸ್ ಹತ್ತುವ ಮಹಿಳೆಯರು ನಿಯಮ ಪಾಲಿಸಲೇಬೇಕು
ಇನ್ನು ಕೂಡ ಯಾರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿಲ್ಲವೋ ಅವರು ಈಗಲೂ ಅಪ್ಲೈ ಮಾಡಿ, ಸರ್ಕಾರದ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದು ಮಹಿಳೆಯರಿಗೆ ಸಹಾಯ ಮಾಡುತ್ತಿರುವ ಯೋಜನೆ ಆಗಿದೆ.
ಪ್ರತಿ ತಿಂಗಳು ಬರುತ್ತಿರುವ ಈ ಹಣದಲ್ಲಿ ಮಹಿಳೆಯರು ತಮ್ಮ ದೈನಂದಿನ ಖರ್ಚುಗಳನ್ನು ನೋಡಿಕೊಳ್ಳುವುದಕ್ಕೆ ಬಳಸುತ್ತಿದ್ದಾರೆ, ಅಥವಾ ಈ ಹಣವನ್ನು ಉಳಿಸಿ ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.
ಇದುವರೆಗೂ ಗೃಹಲಕ್ಷ್ಮಿ ಯೋಜನೆಯ 10 ತಿಂಗಳ ಹಣ ಮಹಿಳೆಯರ ಖಾತೆಗೆ ಬಂದು ತಲುಪಿದೆ. ಈ ತಿಂಗಳು 11ನೇ ಕಂತಿನ ಹಣ ಬಿಡುಗಡೆ ಆಗಬೇಕಿದ್ದು, ಯಾವಾಗ ಬರಲಿದೆ ಎಂದು ಮಹಿಳೆಯರು ಕಾಯುತ್ತಿದ್ದಾರೆ. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ.
ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ? ಹಾಗಾದ್ರೆ ಈ ದಾಖಲೆ ಕೊಟ್ಟು ಹಣ ಪಡೆಯಿರಿ

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್! ಇಲ್ಲಿದೆ ಡೀಟೇಲ್ಸ್
ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬರಬೇಕು ಎಂದರೆ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಮತ್ತು ಆಧಾರ್ ಕಾರ್ಡ್ (Aadhaar Card) ಈ ಎರಡರ ಈಕೆವೈಸಿ ಮಾಡಿಸುವುದು ಕಡ್ಡಾಯ ಆಗಿದ್ದು, ಈ ಕೆಲಸ ಆಗಿದ್ಯಾ ಎಂದು ಚೆಕ್ ಮಾಡಿ.
ಜೊತೆಗೆ ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸುವುದು ಕೂಡ ಕಡ್ಡಾಯ ಆಗಿದೆ. ಹಾಗೆಯೇ ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿರುವುದು ಕೂಡ ಮುಖ್ಯವಾಗಿದ್ದು, ಇದೆಲ್ಲವೂ ಸರಿ ಇದೆಯಾ ಎಂದು ಚೆಕ್ ಮಾಡಿ.
Gruha Lakshmi money will reach your account on this date every month



