Bengaluru NewsKarnataka News

ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ? ಹಾಗಾದ್ರೆ ಈ ದಾಖಲೆ ಕೊಟ್ಟು ಹಣ ಪಡೆಯಿರಿ

ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣದ ಉದ್ದೇಶ ಇಟ್ಟುಕೊಂಡು ಜಾರಿಗೆ ತಂದ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಯೋಜನೆಯ ಅಡಿಯಲ್ಲಿ ಮನೆಯ ಮುಖ್ಯಸ್ಥೆ ಆಗಿರುವ ಮಹಿಳೆಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ₹2000 ರೂಪಾಯಿ ಹಣ ಜಮೆ ಆಗುತ್ತಿದೆ. ಈ ಹಣವನ್ನು ಮಹಿಳೆಯರು ಅವರ ಖರ್ಚಿಗೆ ಬಳಸಿಕೊಳ್ಳಬಹುದು. ಇದರಿಂದ ಮಹಿಳೆಯರಿಗೆ ಬಹಳ ಸಹಾಯ ಆಗಿದೆ.

ಹೌದು, ನಮ್ಮ ರಾಜ್ಯದಲ್ಲಿ 1ಕೋಟಿಗಿಂತ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿ, ಪ್ರತಿ ತಿಂಗಳು ಹಣ ಪಡೆಯುತ್ತಿದ್ದಾರೆ. ಹಲವು ಮಹಿಳೆಯರು ಹಣವನ್ನು ಕೂಡಿಟ್ಟು, ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

Gruha Lakshmi Yojana funds have been released, Check the women of this district

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್! ಇಲ್ಲಿದೆ ಡೀಟೇಲ್ಸ್

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 10 ತಿಂಗಳ ಕಂತುಗಳ ಹಣ ಮಹಿಳೆಯರ ಬ್ಯಾಂಕ್ ಅಕೌಂಟ್ ತಲುಪಿದ್ದು, 11ನೇ ಕಂತಿನ ಹಣ ಈ ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ತಲುಪಬೇಕಿದೆ.

ಆದರೆ ಕೆಲವು ಮಹಿಳೆಯರಿಗೆ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಅವರ ಬ್ಯಾಂಕ್ ಖಾತೆಗೆ ಬರುತ್ತಿಲ್ಲ. ಅದಕ್ಕೆ ಕಾರಣ ಅವರು ಕೆಲವು ದಾಖಲೆಗಳನ್ನು ಸರಿಯಾಗಿ ನೀಡಿಲ್ಲದೇ ಇರುವುದು ಆಗಿರಬಹುದು.

ಹಾಗಾಗಿ ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬರುತ್ತಿಲ್ಲ ಎಂದರೆ, ಈ ದಾಖಲೆಯನ್ನು ನೀಡಿ, ನಿಮ್ಮ ಖಾತೆಗೆ 11ನೇ ಕಂತಿನ ಹಣ ಬರೋದು ಗ್ಯಾರೆಂಟಿ..

ಉಚಿತ ಕರೆಂಟ್ ಇದ್ದು ಬಾಡಿಗೆ ಮನೆ ಬದಲಿಸಿದರೆ ಇನ್ಮುಂದೆ ಹೊಸ ರೂಲ್ಸ್! ಯೋಜನೆಯಲ್ಲಿ ಬದಲಾವಣೆ

Gruha Lakshmi Yojanaನೀಡಬೇಕಾದ ದಾಖಲೆ:

*ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ (Active Bank Account) ಆಗಿದ್ದು, ಅದಕ್ಕೆ ಆಧಾರ್ ಸೀಡಿಂಗ್ ಮಾಡಿಲ್ಲ ಎಂದರೆ ಹಣ ಬರುವುದಿಲ್ಲ. ಇದನ್ನು ಸರಿಪಡಿಸಿಕೊಳ್ಳಿ.

*ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರುವುದಕ್ಕೆ ಮತ್ತೊಂದು ಕಾರಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ekyc ಮಾಡಿಸಿಲ್ಲದೇ ಇರುವುದಾಗಿರುತ್ತದೆ. ಹಾಗಾಗಿ ekyc ಆಗಿದೆಯೋ ಇಲ್ಲವೋ ಎನ್ನುವುದನ್ನು ಸಹ ಚೆಕ್ ಮಾಡಿ.

ಜೂನ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದ್ದು, ನಿಮಗೂ ಬಂದಿದ್ಯಾ ಈ ರೀತಿ ಚೆಕ್ ಮಾಡಿ

*ನೀವು ಅಪ್ಲೈ ಮಾಡುವಾಗ ನೀಡಿರುವ ಯಾವುದಾದರೂ ದಾಖಲೆಗಳಲ್ಲಿ ಸಮಸ್ಯೆ ಇದ್ದರೆ ಆಗಲು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ, ಹಾಗಾಗಿ ನೀವು ಕೊಟ್ಟಿರುವ ಡಾಕ್ಯುಮೆಂಟ್ ಗಳನ್ನು ಒಮ್ಮೆ ಚೆಕ್ ಮಾಡಿ.

*ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ? ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ (Aadhaar Ration Card Link) ಲಿಂಕ್ ಆಗಿದ್ಯಾ? ಬ್ಯಾಂಕ್ ಅಕೌಂಟ್ ಗೆ ಆಧಾರ್ ಸೀಡಿಂಗ್ ಆಗಿದ್ಯಾ? ಇದನ್ನು ಚೆಕ್ ಮಾಡಿ.

*ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ, ತಕ್ಷಣವೇ ಬೇರೆ ಬ್ಯಾಂಕ್ ನಲ್ಲಿ ಹೊಸ ಅಕೌಂಟ್ ಓಪನ್ ಮಾಡಿ, ಅದನ್ನು ಗೃಹಲಕ್ಷ್ಮಿ ಯೋಜನೆಯ ಜೊತೆಗೆ ಲಿಂಕ್ ಮಾಡಿ. ಆಗ ಸಮಸ್ಯೆ ಸರಿ ಹೋಗುತ್ತದೆ.

ರೈತರೇ ನಿಮ್ಮ ಜಮೀನಿನ ಪಹಣಿ (RTC) ತಿದ್ದುಪಡಿ ಈಗ ಇನ್ನಷ್ಟು ಸುಲಭ! ಇಲ್ಲಿದೆ ಮಹತ್ವದ ಮಾಹಿತಿ

*ಬ್ಯಾಂಕ್ ಅಕೌಂಟ್ ನಲ್ಲಿ ಸಮಸ್ಯೆ ಇದ್ದರೆ, ಪೋಸ್ಟ್ ಆಫೀಸ್ ನಲ್ಲಿ ಅಕೌಂಟ್ (Post office Account) ಓಪನ್ ಮಾಡಿ, ಅದನ್ನು ಗೃಹಲಕ್ಷ್ಮಿ ಯೋಜನೆಯ ಜೊತೆಗೆ ಲಿಂಕ್ ಮಾಡಿ. ಇದರಿಂದ ನಿಮ್ಮ ಸಮಸ್ಯೆ ಸರಿ ಹೋಗುತ್ತದೆ..

Give this document and get Gruha Lakshmi Scheme money

Our Whatsapp Channel is Live Now 👇

Whatsapp Channel

Related Stories