ಜೂನ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದ್ದು, ನಿಮಗೂ ಬಂದಿದ್ಯಾ ಈ ರೀತಿ ಚೆಕ್ ಮಾಡಿ

Story Highlights

ಜೂನ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗುವುದಕ್ಕೆ ತಡ ಆಗಿತ್ತು, ಇದೀಗ ಸಿಕ್ಕಿರುವ ಮಾಹಿತಿಯ ಅನುಸಾರ ಅನ್ನಭಾಗ್ಯ ಯೋಜನೆಯ ಹಣವನ್ನು ಸರ್ಕಾರ ಈಗ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಯಾರು ಕೂಡ ಹಸಿವಿನಿಂದ ಸಮಸ್ಯೆ ಎದುರಿಸಬಾರದು ಎಂದು ಜಾರಿಗೆ ತಂದ ಯೋಜನೆ ಅನ್ನಭಾಗ್ಯ ಯೋಜನೆ (Annabhagya Scheme) ಆಗಿದೆ. ಈ ಒಂದು ಯೋಜನೆಯ ಮೂಲಕ ರಾಜ್ಯ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ, ಆ ಕಾರ್ಡ್ ನಲ್ಲಿರುವ ಅಷ್ಟು ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಭರವಸೆ ಕೊಟ್ಟಿತ್ತು.

ಆದರೆ ಅಷ್ಟು ಅಕ್ಕಿ ಹೊಂದಿಸಲು ಸಾಧ್ಯ ಆಗದ ಕಾರಣ ಒಬ್ಬರಿಗೆ 5 ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿಯ ಅಕ್ಕಿ ಹಣವನ್ನು ಒಂದು ಕೆಜಿಗೆ 35 ರೂಪಾಯಿಯ ಹಾಗೆ 5 ಕೆಜಿಗೆ 170 ರೂಪಾಯಿಗಳನ್ನು ಜನರ ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಮಾಡುವುದಾಗಿ ತಿಳಿಸಿ, ಹಲವು ತಿಂಗಳುಗಳಿಂದ ಈ ಹಣವನ್ನು ರೇಷನ್ ಕಾರ್ಡ್ ನಲ್ಲಿ ಸೂಚಿಸಿರುವ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಾ ಬರಲಾಗುತ್ತಿದೆ. ಜನರು ಸಹ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದರಿಂದ ಅವರಿಗೆ ಸಹಾಯ ಕೂಡ ಆಗುತ್ತಿದೆ.

ಉಚಿತ ಮನೆ ಭಾಗ್ಯ! ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು 6.50 ಲಕ್ಷ ಸರ್ಕಾರದ ಸಹಾಯಧನ; ಅರ್ಜಿ ಸಲ್ಲಿಸಿ

ಈ ತಿಂಗಳು ಮಾತ್ರ ಅನ್ನಭಾಗ್ಯ ಯೋಜನೆಯ ಹಣ ಬರುವುದಕ್ಕೆ ಸ್ವಲ್ಪ ತಡವಾಗಿದೆ, ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಚುನಾವಣೆ ಮತ್ತು ಅದರ ಫಲಿತಾಂಶ ಆಗಿದೆ. ಈ ಕಾರಣಕ್ಕೆ ಜೂನ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗುವುದಕ್ಕೆ ತಡ ಆಗಿತ್ತು, ಇದೀಗ ಸಿಕ್ಕಿರುವ ಮಾಹಿತಿಯ ಅನುಸಾರ ಅನ್ನಭಾಗ್ಯ ಯೋಜನೆಯ ಹಣವನ್ನು ಸರ್ಕಾರ ಈಗ ಬಿಡುಗಡೆ ಮಾಡಿದ್ದು, ನಿಮ್ಮ ಖಾತೆಗೆ ಬಂದಿದ್ಯಾ ಎಂದು ಈ ರೀತಿ ಚೆಕ್ ಮಾಡಿ..

ಅನ್ನಭಾಗ್ಯ ಹಣದ DBT Status ಚೆಕ್ ಮಾಡುವ ವಿಧಾನ:

*ಮೊದಲಿಗೆ ನೀವು ಸರ್ಕಾರದ ಈ ವೆಬ್ಸೈಟ್ ಗೆ ಭೇಟಿ ನೀಡಿ https://www.karnataka.gov.in/

*ಇಲ್ಲಿ E Services ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅದರಲ್ಲಿ DBT ಸ್ಟೇಟಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ

*ಇಲ್ಲಿ ರೇಷನ್ ಕಾರ್ಡ್ ಮೂಲಕ ಸ್ಟೇಟಸ್ ತಿಳಿಯಬೇಕು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಈಗ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ, Continue ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ

*ಈಗ ನಿಮ್ಮ ಸ್ಕ್ರೀನ್ ಮೇಲೆ ಅನ್ನಭಾಗ್ಯ ಯೋಜನೆಯ ಎಷ್ಟು ಕಂತುಗಳ ಹಣ ಯಾವಾಗ ಬಂದಿದೆ ಎನ್ನುವುದನ್ನು ತೋರಿಸಲಾಗುತ್ತದೆ.

ರೈತರೇ ನಿಮ್ಮ ಜಮೀನಿನ ಪಹಣಿ (RTC) ತಿದ್ದುಪಡಿ ಈಗ ಇನ್ನಷ್ಟು ಸುಲಭ! ಇಲ್ಲಿದೆ ಮಹತ್ವದ ಮಾಹಿತಿ

Annabhagya Schemeಅನ್ನಭಾಗ್ಯ ಯೋಜನೆಯ ಹಣ ತಕ್ಷಣ ಬರಬೇಕು ಎಂದರೆ ಈ ರೀತಿ ಮಾಡಿ:

ಒಂದು ವೇಳೆ ನಿಮಗೆ ಇನ್ನು ಕೂಡ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ನೀವು ನೀಡಿರುವ ಯಾವುದಾದರೂ ದಾಖಲೆಯಲ್ಲಿ ಸಮಸ್ಯೆ ಇರಬಹುದು. ಹಾಗೇನಾದರೂ ಆಗಿದ್ದರೆ ಈ ರೀತಿ ಮಾಡಿ..

*ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ

*ರೇಷನ್ ಕಾರ್ಡ್ ನ Kyc ಅಪ್ಡೇಟ್ ಆಗಿದ್ಯಾ ಎಂದು ಚೆಕ್ ಮಾಡಿ

*ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಗೆ ಕೂಡ kyc ಮಾಡಿಸಿ

*ರೇಷನ್ ಕಾರ್ಡ್ ಅನ್ನು ಕೂಡ ಅಪ್ಡೇಟ್ ಮಾಡಿಸಿ.

ಈ ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ! ನಿಮಗೂ ಬಂದಿದ್ಯಾ? ಚೆಕ್ ಮಾಡಿ

Annabhagya Yojana Money for the month of June has been deposited

Related Stories