ಉಚಿತ ಮನೆ ಭಾಗ್ಯ! ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು 6.50 ಲಕ್ಷ ಸರ್ಕಾರದ ಸಹಾಯಧನ; ಅರ್ಜಿ ಸಲ್ಲಿಸಿ

Story Highlights

ಅರ್ಹ ಅರ್ಜಿದಾರರಿಗೆ ಗ್ರಾಮೀಣ ಪ್ರದೇಶಗಳಲ್ಲಿ ರೂ 2.60 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ 3.00 ಲಕ್ಷದವರೆಗೆ ಗೃಹ ಸಾಲ (Home Loan) ಕೂಡ ಲಭ್ಯವಿದೆ.

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಅವಶ್ಯಕ ವಸ್ತುಗಳು ಮುಖ್ಯವಾಗಿಬೇಕು. ಅದರಲ್ಲಿ ಮುಖ್ಯವಾಗಿ ತಾನು ಜೀವಿಸಲು ಇರಬೇಕಾದದ್ದು ಸ್ವಂತವಾದ ಮನೆ (Own House), ಇಂದು ಎಲ್ಲ ವರ್ಗದ ಜನತೆಗೂ ಮನೆ ನಿರ್ಮಾಣ ಮಾಡುವುದು ಸುಲಭ ಅಲ್ಲ.‌

ಯಾಕೆಂದರೆ ಮನೆ ನಿರ್ಮಾಣ ಮಾಡಲು ಅಷ್ಟೇ ಖರ್ಚು ವೆಚ್ಚ ಕೂಡ ಇರಲಿದೆ.‌ ಮನೆಗೆ ಬೇಕಾದ ಸಲಕರಣೆ ಗಳನ್ನು ಪೂರೈಸಲು‌ ಲಕ್ಷಗಟ್ಟಲೆ ಹಣ ಬೇಕಾಗಿರುವ ಕಾರಣ ಮನೆ ಕಟ್ಟುವ ಕನಸಿದ್ದರೂ ಅನೇಕರು ಹಿಂದೆ ಸರಿದಿರುವುದನ್ನು ನಾವು ಕಾಣಬಹುದು.

ಆದರೆ ಇಂತಹ ಬಡವರ್ಗದ ಜನತೆಗೆ‌‌ ಮನೆ ನಿರ್ಮಾಣ ಮಾಡಲೆಂದೆ ಸರಕಾರ ಸಹಾಯ ಧನ ನೀಡಲಿದೆ.‌ ಹಾಗಿದ್ದಲ್ಲಿ ಯಾರು ಈ ಯೋಜನೆಯ ಸೌಲಭ್ಯ ಪಡೆಯಬಹುದು ಎನ್ನುವ ಮಾಹಿತಿ ಇರಲಿದ್ದು ಈ ಲೇಖನ‌ ಸಂಪೂರ್ಣವಾಗಿ ಓದಿರಿ.

ಈ ಯೋಜನೆಯಲ್ಲಿ ಪ್ರತಿ ತಿಂಗಳು ₹1,200 ರೂ. ಹಣ ಜಮೆ, ಅರ್ಜಿ ಹಾಕಿದ ಎಲ್ಲರಿಗೂ ಸಿಗುತ್ತೆ ಬೆನಿಫಿಟ್

ಹೌದು ಸರಕಾರವು ಬಡ ವರ್ಗದ ಜನತೆಯು ಮೇಲ್ದರ್ಜೆಗೆ ಬರಬೇಕು, ಅವರಿಗೂ ಸ್ವಂತ ಮನೆ (Own House) ನಿರ್ಮಾಣ ಮಾಡುವಂತೆ ಆಗಬೇಕು ಎಂದು ಎಂದು ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಜಾರಿ ಮಾಡಿದೆ.

ಬಡತನ ರೇಖೆಗಿಂತ ಕೆಳಗಿದ್ದ ಜನರು ಅಂದರೆ ಆರ್ಥಿಕವಾಗಿ ಹಿಂದುಳಿದಿದ್ದರೆ ಮನೆ ನಿರ್ಮಾಣ ಮಾಡಲು ಸರಕಾರದಿಂದ ಆರ್ಥಿಕ ನೆರವನ್ನು ಪಡೆಯಬಹುದು. ಇದರಲ್ಲಿ‌ ಸರಕಾರ ಮನೆ ಕಟ್ಟಲು ಹಂತ ಹಂತವಾಗಿ ಹಣ ಮಂಜೂರು ಮಾಡಲಿದ್ದು ಈ ಸೌಲಭ್ಯ ಬಳಸಿ ಕೊಳ್ಳ ಬಹುದು.

ಇದರಲ್ಲಿ‌ ಒಟ್ಟು 7.50 ಲಕ್ಷ ಆರ್ಥಿಕ ಸಹಾಯ ಸಿಗಲಿದ್ದು ಕೇಂದ್ರ ಸರಕಾರ 3.50 ಲಕ್ಷ ರೂಪಾಯಿ ಮತ್ತು ರಾಜ್ಯ 3 ಲಕ್ಷ ರೂಪಾಯಿ ಅನುದಾನ ಹಾಗೂ ಉಳಿದ ಒಂದು ಲಕ್ಷ ರೂಪಾಯಿ ಫಲಾನುಭವಿಗಳು ಭರಿಸಬೇಕಾಗುತ್ತದೆ. ಹಾಗಾಗಿ ಸರಕಾರ 6.50 ಲಕ್ಷ ನೀಡುತ್ತಿದ್ದು ಅರ್ಹ ಅರ್ಜಿದಾರರಿಗೆ ಗ್ರಾಮೀಣ ಪ್ರದೇಶಗಳಲ್ಲಿ ರೂ 2.60 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ 3.00 ಲಕ್ಷದವರೆಗೆ ಗೃಹ ಸಾಲ (Home Loan) ಕೂಡ ಲಭ್ಯವಿದೆ.

ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಜನರಿಗೆ ಸಂಕಷ್ಟ! ಬಂತು ಸರಕಾರದ ಹೊಸ ನಿಯಮ

Free Housing Schemeಈ ದಾಖಲೆ ಬೇಕು

ಈ ಯೋಜನೆಗೆ ಅರ್ಜಿ ಹಾಕುದಾದರೆ ಅಗತ್ಯವಾಗಿ ಈ ದಾಖಲೆಗಳು ಬೇಕು.
*ಆಧಾರ್ ಕಾರ್ಡ್
*ಜಾತಿ ಪ್ರಮಾಣ ಪತ್ರ
*ಪಡಿತರ ಕಾರ್ಡ್
*ಆದಾಯ ಪ್ರಮಾಣ ಪತ್ರ
*ವಿಳಾಸ ಪ್ರಮಾಣ ಪತ್ರ
*ಬ್ಯಾಂಕ್ ಪಾಸ್ ಬುಕ್
*ಪೋಟೋ‌

ರೈತರೇ ನಿಮ್ಮ ಜಮೀನಿನ ಪಹಣಿ (RTC) ತಿದ್ದುಪಡಿ ಈಗ ಇನ್ನಷ್ಟು ಸುಲಭ! ಇಲ್ಲಿದೆ ಮಹತ್ವದ ಮಾಹಿತಿ

ಇಲ್ಲಿ‌ ಅರ್ಜಿ ಹಾಕಿ

ಇದಕ್ಕಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಹಾಕ ಬಹುದು. ಹೌದು https://ashraya.Karnataka.gov.in/nanamane ಈ ಲಿಂಕ್ ನಲ್ಲಿ‌ ‌ನಿಮ್ಮ ತಾಲೂಕು ಹೋಬಳಿ ಗ್ರಾಮ ಆಯ್ಕೆ ಮಾಡಿ ಅರ್ಜಿ ಹಾಕಿ, ಈ ಬಗ್ಗೆ ಸಂದೇಹ ಇದ್ದಲ್ಲಿ ಹತ್ತಿರದ ಗ್ರಾಮ ಪಂಚಾಯತ್ ಕಚೇರಿಗೆ ಹೋಗಿ ಮಾಹಿತಿ ಪಡೆದುಕೊಳ್ಳಿ.

Free Housing Scheme, 6.50 lakh government subsidy for poor to build their own houses

Related Stories