ಈ ಯೋಜನೆಯಲ್ಲಿ ಪ್ರತಿ ತಿಂಗಳು ₹1,200 ರೂ. ಹಣ ಜಮೆ, ಅರ್ಜಿ ಹಾಕಿದ ಎಲ್ಲರಿಗೂ ಸಿಗುತ್ತೆ ಬೆನಿಫಿಟ್

ಹಿರಿಯ ನಾಗರಿಕರ ಹಿತ ದೃಷ್ಟಿಯಿಂದ ಸರಕಾರ ಮಾಸಿಕ ಪಿಂಚಣಿ (Monthly Pension) ನೀಡಲು ಮುಂದಾಗಿದೆ. ಹಾಗಿದ್ದಲ್ಲಿ ಈ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು, ಯಾರು ಸೌಲಭ್ಯ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ

Pension Scheme : ಇಂದು ಬಡ ಮದ್ಯಮ ವರ್ಗದ ಕುಟುಂಬಕ್ಕೆ ಬದುಕು ಸಾಗಿಸಲು ಕಷ್ಟವೇ ಆಗಿದೆ. ಹೌದು ಇಂದು ಮೂಲಭೂತ ಅವಶ್ಯಕ ವಸ್ತುಗಳ ಬೆಲೆಯೂ ಏರಿಕೆ ಯಾಗಿದ್ದು ದಿನ ನಿತ್ಯ ಬಳಸುವಂತಹ ವಸ್ತುಗಳ ಬೆಲೆಯು ಏರಿಕೆಯಾಗಿದೆ.

ಇದಕ್ಕಾಗಿ ಸರಕಾರ ಬಡ ವರ್ಗದ ಜನತೆಗೆ ಹಲವು ರೀತಿಯ ಸೌಲಭ್ಯ ನೀಡುತ್ತ ಬಂದಿದೆ. ಅದರಲ್ಲೂ ಹಿರಿಯ ನಾಗರಿಕರು ಅಂತ ಬಂದಾಗ ವಯಸ್ಸು ಆಗುತ್ತ ‌ಹೋದಂತೆ ದುಡಿಯಲು ಕಷ್ಟ, ಮನೆ ಮಂದಿಗೆ ಅವಲಂಬಿತರಾಗಿರಲು ಸಾಧ್ಯ ಇರಲ್ಲ.

Get Rupees 1,200 per month in this scheme, apply to get the benefit

ಹೀಗಾಗಿ ಹಿರಿಯ ನಾಗರಿಕರ ಹಿತ ದೃಷ್ಟಿಯಿಂದ ಸರಕಾರ ಮಾಸಿಕ ಪಿಂಚಣಿ (Monthly Pension) ನೀಡಲು ಮುಂದಾಗಿದೆ. ಹಾಗಿದ್ದಲ್ಲಿ ಈ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು, ಯಾರು ಸೌಲಭ್ಯ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.

ಇಂದು ಹಿರಿಯ ವೃದ್ದರನ್ನು ಆಶ್ರಮಗಳಿಗೆ ಸೇರಿಸುವುದು, ಮನೆಯಲ್ಲಿ ಕಿರುಕುಳ ನೀಡುವುದು, ಇತ್ಯಾದಿ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಹಾಗಾಗಿ ಹಿರಿಯ ನಾಗರಿಕರ ರಕ್ಷಣೆಗಾಗಿ ಸರಕಾರ ಹಲವು ಯೋಜನೆ ರೂಪಿಸಿದ್ದು ಹೆಲ್ಪ್ ಡೆಸ್ಕ್ ಕೂಡ ತೆರೆದಿದೆ. ಇದೀಗ ಸರಕಾರದ ಈ ಯೋಜನೆ ಮೂಲಕ ಹಿರಿಯ ವೃದ್ಧ ಪುರುಷ ಮತ್ತು ಮಹಿಳೆಯರಿಗೆ ತಿಂಗಳಿಗೆ ಆರ್ಥಿಕ ನೆರವು ನೀಡುತ್ತಿದೆ.

ರೈತರೇ ನಿಮ್ಮ ಜಮೀನಿನ ಪಹಣಿ (RTC) ತಿದ್ದುಪಡಿ ಈಗ ಇನ್ನಷ್ಟು ಸುಲಭ! ಇಲ್ಲಿದೆ ಮಹತ್ವದ ಮಾಹಿತಿ

ಸಂಧ್ಯಾ ಸುರಕ್ಷಾ ಯೋಜನೆ

ಈ ಯೋಜನೆ ಸಂಧ್ಯಾ ಸುರಕ್ಷ ಆಗಿದ್ದು ಆರ್ಥಿಕ ಸಮಸ್ಯೆ ಇರುವ ಹಿರಿಯ ಜೀವಿಗಳಿಗೆ ಸಹಾಯಧನ ಒದಗಿಸುವ ಮುಖ್ಯ ಯೋಜನೆ ಯಾಗಿದೆ. 2007ರ ಸಂದರ್ಭದಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಯಿತು‌. ಹಾಗಾಗಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 1,200 ರೂಪಾಯಿ ಮಾಸಾಶನ ಸಿಗಲಿದೆ

ಈ ದಾಖಲೆ ಬೇಕು

*ಆಧಾರ್ ಕಾರ್ಡ್
*ವಯಸ್ಸಿನ ಪತ್ರ
*ವೋಟರ್ ಐಡಿ
*ರೇಷನ್ ಕಾರ್ಡ್
*ಆದಾಯ ಪ್ರಮಾಣಪತ್ರ
*ಬ್ಯಾಂಕ್ ಪಾಸ್ ಬುಕ್ ಇತ್ಯಾದಿ

ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಜನರಿಗೆ ಸಂಕಷ್ಟ! ಬಂತು ಸರಕಾರದ ಹೊಸ ನಿಯಮ

Pension Schemeಅರ್ಜಿ ಹಾಕಲು ನಿಯಮ‌ ಏನು?

*ಅರ್ಜಿದಾರನು ಕರ್ನಾಟಕದ ಖಾಯಂ ನಿವಾಸಿಯಾಗಿ ಯಾಗಿದ್ದರೆ ಅರ್ಜಿ ಹಾಕಬಹುದು

*ಇನ್ನು ಅರ್ಜಿದಾರರ ವಯಸ್ಸು 65 ವರ್ಷ ಮೇಲ್ಪಟ್ಟ ವರಾಗಿರಬೇಕು.

*ಬಡತನ ರೇಖೆಗಿಂತ ಕೆಳಗೆ ಇದ್ದರೆ ಅರ್ಜಿ ಹಾಕಬಹುದು

*ಇದಕ್ಕೆ ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು ಇತ್ಯಾದಿ ಬಡ ಕುಟುಂಬದ ವೃದ್ಧರು ಅರ್ಜಿ ಹಾಕಬಹುದು

*ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ವಿಕಲಚೇತನರ ಪಿಂಚಣಿ ಅಥವಾ ಇತರ ಪಿಂಚಣಿ ಪಡೆಯುತ್ತಿರುವ ವ್ಯಕ್ತಿಗಳು ಅರ್ಜಿ ಹಾಕುವಂತಿಲ್ಲ.

ಅರ್ಜಿ ಹಾಕಲು ಮನೆಯ ಹತ್ತಿರದ ಗ್ರಾಮ ಓನ್ ಅಥವಾ ಪಂಚಾಯಿತಿ ಕಚೇರಿಗಳಲ್ಲಿ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.

ಈ ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ! ನಿಮಗೂ ಬಂದಿದ್ಯಾ? ಚೆಕ್ ಮಾಡಿ

Get Rupees 1,200 per month in this scheme, apply to get the benefit