ರೈತರೇ ನಿಮ್ಮ ಜಮೀನಿನ ಪಹಣಿ (RTC) ತಿದ್ದುಪಡಿ ಈಗ ಇನ್ನಷ್ಟು ಸುಲಭ! ಇಲ್ಲಿದೆ ಮಹತ್ವದ ಮಾಹಿತಿ
ರೈತರ ಮುಖ್ಯ ದಾಖಲೆ ಪಹಣಿ ಪತ್ರ (Land RTC) ಆಗಿದ್ದು ಇದನ್ನು ತಿದ್ದುಪಡಿ ಮಾಡುವುದು ಸಹ ಬಹಳ ಮುಖ್ಯವಾಗಲಿದೆ. ಹಾಗಿದ್ದಲ್ಲಿ ರೈತರ ಪಹಣಿ ಪತ್ರ ತಿದ್ದುಪಡಿ ಸುಲಭವಾಗಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಇಂದು ಜಗತ್ತಿನಲ್ಲಿ ಜನರು ಎಷ್ಟೇ ಶಿಕ್ಷಣವಂತರಾಗಿದ್ದರೂ ಬಹಳಷ್ಟು ಶ್ರಮ ಪಟ್ಟು ಮಾಡುವ ಕೆಲಸ ಕೃಷಿ (Agriculture) ಕಾರ್ಯವೇ ಆಗಿದೆ. ಇಂದು ನಗರ ಪ್ರದೇಶ ಎಷ್ಟೇ ಅಭಿವೃದ್ದಿಯಾದರೂ ಹಳ್ಳಿ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆ ಮಾಡುವುದನ್ನು ಬಿಟ್ಟಿಲ್ಲ.
ಸರಕಾರ ಕೂಡ ರೈತರ ಅಗತ್ಯತೆ ಪೂರೈಸಲು ಹಲವು ಯೋಜನೆ ರೂಪಿಸುತ್ತಾ ಬಂದಿದೆ. ಆದರೆ ಸರಕಾರದ ಯಾವುದೇ ಸೌಲಭ್ಯ ಪಡೆದು ಕೊಳ್ಳಬೇಕಾದರೂ ಸರಕಾರ ನಿಗದಿ ಪಡಿಸಿದ ದಾಖಲೆ ಇರಬೇಕು.
ರೈತರ ಮುಖ್ಯ ದಾಖಲೆ ಪಹಣಿ ಪತ್ರ (Land RTC) ಆಗಿದ್ದು ಇದನ್ನು ತಿದ್ದುಪಡಿ ಮಾಡುವುದು ಸಹ ಬಹಳ ಮುಖ್ಯವಾಗಲಿದೆ. ಹಾಗಿದ್ದಲ್ಲಿ ರೈತರ ಪಹಣಿ ಪತ್ರ ತಿದ್ದುಪಡಿ ಸುಲಭವಾಗಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಜನರಿಗೆ ಸಂಕಷ್ಟ! ಬಂತು ಸರಕಾರದ ಹೊಸ ನಿಯಮ
ನಮ್ಮ ಆಸ್ತಿ ಪತ್ರ ಅಥವಾ ಜಮೀನಿನ ದಾಖಲೆ ಸರಿ ಇದ್ದರೆ ಮಾತ್ರ ಕೃಷಿಗೆ ಬೇಕಾದ ಸೌಲಭ್ಯಗಳು ಸಿಗಲಿದೆ. ಕೆಲವೊಮ್ಮೆ ಈ ದಾಖಲೆ ಯಲ್ಲಿ ತಪ್ಪು ಮಾಹಿತಿ ಇರಲಿದ್ದು ತಿದ್ದುಪಡಿ ಮಾಡಬೇಕಾಗುತ್ತದೆ. ಇಂದು ನಿಮ್ಮ ಅಧಾರ್ ಗೆ ಪಹಣಿ ಪತ್ರ ಲಿಂಕ್ ಮಾಡಿಸುವುದು ಸಹ ಕಡ್ಡಾಯ ವಾಗಿದೆ.
ಈಗಾಗಲೇ ಕಿಸಾನ್ ಹಣ ಬಿಡುಗಡೆಯಾಗಬೇಕಾದರೆ ರೈತರು ಈ ಕೆಲಸ ಮಾಡಲೇಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ. ಹಾಗಾಗಿ ಪಹಣಿಯ ದಾಖಲೆಯಲ್ಲಿಯು ಹೆಸರು, ವಿಳಾಸ, ಇತ್ಯಾದಿ ಒಂದೇ ತರನಾಗಿ ಇರಬೇಕಿದ್ದು ಸುಲಭವಾಗಿ ತಿದ್ದುಪಡಿ ಮಾಡಬಹುದು.
ಈ ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ! ನಿಮಗೂ ಬಂದಿದ್ಯಾ? ಚೆಕ್ ಮಾಡಿ
ಹೀಗೆ ಮಾಡಿ
ರೈತರು ತಾಲೂಕು ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿ ಇ ಸ್ಟ್ಯಾಂಪ್ ಪೇಪರ್ ಖರೀದಿಸಿ, 20 ರೂಪಾಯಿಗೆ ಇ-ಸ್ಟಾಂಪ್ ಪೇಪರ್ ಸಿಗಲಿದ್ದು ಅದರ ಮೇಲೆ ವಕೀಲರಿಂದ ನೋಟರಿ ಮಾಡಿಸಬೇಕಾಗುತ್ತದೆ.
ಅದರಲ್ಲಿ ಯಾವ ಮಾಹಿತಿ ತಿದ್ದುಪಡಿ ಆಗಬೇಕು ಎಂದು ಬರೆಯಿರಿ. ಬಳಿಕ ಅರ್ಜಿಯಲ್ಲಿ ಸರಿಯಾದ ತಿದ್ದುಪಡಿ ಏನು ಮಾಡಬೇಕು ಎನ್ನುವುದನ್ನು ಸರಿಯಾಗಿ ನಮೂದಿಸಬೇಕು. ಬಳಿಕ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ತಾಲೂಕಿನಲ್ಲಿರುವ ಭೂಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ.
ನಂತರ ಭೂಮಿ ಕೇಂದ್ರದವರು ಗ್ರಾಮಲೆಕ್ಕಿಗರ ಬಳಿ ನೀವು ಸಲ್ಲಿಸಿದ ಅರ್ಜಿ ಕಳಿಸುತ್ತಾರೆ. ಗ್ರಾಮ ಲೆಕ್ಕಿಗರು ತಮಗೆ ಬಂದಿರುವ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ, ದಾಖಲೆಗಳು ಸರಿಯಾಗಿದ್ದರೆ ಪಹಣಿ ತಿದ್ದುಪಡಿ ಮಾಡಲು ಮುಂದಾಗುತ್ತಾರೆ.
ಅರ್ಹ ಪಡಿತರ ಚೀಟಿದಾರರ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ
ಹೀಗೆ ಸಹ ಮಾಡಬಹುದು
ನಿಮ್ಮ ಜಮೀನಿನ ಪಹಣಿ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭ ವಾಗಿ ಮಾಡಬಹುದು. https://landrecords.karnataka.gov.in ಇಲ್ಲಿ ನಿಮ್ಮ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ, ಸರ್ವೆನಂಬರ್, ಹಿಸ್ಸಾ ನಂಬರ್, ಇತ್ಯಾದಿ ಮಾಹಿತಿ ಹಾಕಿ, ತಿದ್ದುಪಡಿ ಪಡಿ ಆಯ್ಕೆಯೂ ಇದರಲ್ಲಿ ಇದ್ದು ಪಹಣಿಯ ಮಾಹಿತಿ ತಪ್ಪಿದ್ದರೆ ತಿದ್ದುಪಡಿ ಗಾಗಿ ಅರ್ಜಿ ಸಲ್ಲಿಸಬಹುದು
RTC correction of your land is now even easier, Here is important information