ಈ ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ! ನಿಮಗೂ ಬಂದಿದ್ಯಾ? ಚೆಕ್ ಮಾಡಿ
Gruha Lakshmi Scheme : ರಾಜ್ಯ ಸರ್ಕಾರವು ಮಹಿಳೆಯರಿಗೆ ಸಹಾಯ ಆಗಲಿ ಎಂದು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಒಂದು ಯೋಜನೆಯನ್ನು 2023ರ ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ತರಲಾಯಿತು.
ಈವರೆಗೂ 1 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಈ ಯೋಜನೆಯ ಸೌಲಭ್ಯವನ್ನು ಪಡೆಯುತ್ತಲಿದ್ದಾರೆ. ಈವರೆಗೂ 10 ಕಂತುಗಳ ಹಣವನ್ನು ಸಹ ಪಡೆದಿದ್ದಾರೆ..
ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿ ಹಣ ಸಿಗುತ್ತಿದ್ದು, 10 ತಿಂಗಳ ಅವಧಿಗೆ ಈವರೆಗೂ ₹20,000 ಹಣವು ಅರ್ಹತೆ ಹೊಂದಿರುವ ಮಹಿಳೆಯರ ಖಾತೆಯನ್ನು (Bank Account) ತಲುಪಿದೆ.
ಅರ್ಹ ಪಡಿತರ ಚೀಟಿದಾರರ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ
ಸರ್ಕಾರದ ಈ ಯೋಜನೆ ಇಂದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗುತ್ತಿದ್ದು, ತಮ್ಮ ಖರ್ಚುಗಳನ್ನು ಪೂರೈಸಿಕೊಳ್ಳಲು ಉಪಯುಕ್ತವಾಗುತ್ತಿದೆ. ಮಹಿಳೆಯರು ಈ ಹಣವನ್ನು ಕೂಡಿಟ್ಟು ತಮಗೆ ಬೇಕಿರುವ ವಸ್ಗುಗಳನ್ನು ಖರೀದಿ ಮಾಡುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 10 ಕಂತುಗಳ ಹಣ ಸರಿಯಾದ ಸಮಯಕ್ಕೆ ಮಹಿಳೆಯರನ್ನು ತಲುಪಿದೆ. ಆದರೆ 11ನೇ ಕಂತಿನ ಹಣ ತಲುಪುವ ವೇಳೆಗೆ ಸ್ವಲ್ಪ ತಡವಾಗಿದೆ. ಅದಕ್ಕೆ ಕಾರಣ ದೇಶದಲ್ಲಿ ಲೋಕಸಭಾ ಎಲೆಕ್ಷನ್ ನಡೆದಿದ್ದಾಗಿದೆ. ಹೌದು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ದೇಶದಲ್ಲಿ ಲೋಕಸಭಾ ಎಲೆಕ್ಷನ್ ನಡೆಯಿತು, ಜೂನ್ ತಿಂಗಳ ಮೊದಲ ವಾರದಲ್ಲಿ ಎಲೆಕ್ಷನ್ ಫಲಿತಾಂಶ ಬಿಡುಗಡೆ ಆಯಿತು. ಇದರಿಂದ 11ನೇ ಕಂತಿನ ಹಣ ಮಹಿಳೆಯರನ್ನು ತಲುಪುವುದಕ್ಕೆ ತಡ ಆಗಿದೆ.
ಇದೀಗ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು 11ನೇ ಕಂತಿನ ಹಣ ಬಿಡುಗಡೆ ಆಗುವ ಬಗ್ಗೆ ಮಾಹಿತಿ ನೀಡಿದ್ದರು, ಜೂನ್ 22ರ ಒಳಗೆ 11ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದರು, ಅದೇ ರೀತಿ ಈಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ ಆಗಿದ್ದು, ಯಾವೆಲ್ಲಾ ಜಿಲ್ಲೆಗಳಲ್ಲಿ ಹಣ ಬಿಡುಗಡೆ ಆಗಿದೆ? ಅದನ್ನು ಚೆಕ್ ಮಾಡುವುದು ಹೇಗೆ? ಪೂರ್ತಿಯಾಗಿ ತಿಳಿಯೋಣ..
ಸರ್ಕಾರದಿಂದ ಶುರುವಾಯ್ತು ಕೃಷಿ ಭಾಗ್ಯ ಯೋಜನೆ! 24 ಜಿಲ್ಲೆಗಳ ಪೈಕಿ 106 ತಾಲ್ಲೂಕುಗಳಿಗೆ ಸೌಲಭ್ಯ
ಈ ಜಿಲ್ಲೆಗಳಿಗೆ 11ನೇ ಕಂತಿನ ಹಣ ಬಿಡುಗಡೆ!
ಬೆಂಗಳೂರು, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ಕೋಲಾರ , ಉಡುಪಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ರಾಯಚೂರು, ಬೀದರ್, ಕೊಪ್ಪಳ , ಹಾವೇರಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು,ಚಾಮರಾಜ ನಗರ, ಬೆಂಗಳುರು ಗ್ರಾಮಾಂತರ ಈ ಎಲ್ಲಾ ಜಿಲ್ಲೆಗಳಲ್ಲಿ ಸಹ ಗೃಹಲಕ್ಷ್ಮೀ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ ಆಗಿದೆ.
ರೇಷನ್ ಕಾರ್ಡಿನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಿಕೊಳ್ಳಲು ಅವಕಾಶ! ಆನ್‌ಲೈನ್‌ನಲ್ಲೇ ಮಾಡಿ
11ನೇ ಕಂತಿನ ಹಣದ ಸ್ಟೇಟಸ್ ಚೆಕ್ ಪ್ರಕ್ರಿಯೆ:
*ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದಿದ್ಯಾ ಎಂದು ಚೆಕ್ ಮಾಡಲು ಮೊದಲಿಗೆ Google Play Store ಇಂದ DBT Karnataka App ಇನ್ಸ್ಟಾಲ್ ಮಾಡಿ
*ನಿಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ, ಫೋನ್ ಗೆ ಓಟಿಪಿ ಪಡೆದು ಈ App ಗೆ ಲಾಗಿನ್ ಮಾಡಿ
*ಓಟಿಪಿ ಬಂದ ಮೇಲೆ 4 ಡಿಜಿಟ್ ಇರುವ ಪಾಸ್ವರ್ಡ್ ಕ್ರಿಯೆಟ್ ಮಾಡಿ
*ಬಳಿಕ ನಿಮ್ಮ ವಿವರಗಳನ್ನು ಹಾಕಿ, ನಿಮ್ಮ ಫೋನ್ ನಂಬರ್ ಹಾಕಿ Submit ಮಾಡಿ.
*ಬಳಿಕ ಈ ಡೀಟೇಲ್ಸ್ ಇಂದ ಲಾಗಿನ್ ಮಾಡಿ, ಗೃಹಲಕ್ಷ್ಮಿ Status Check ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡುವ ಮೂಲಕ ನಿಮಗೆ ಈ ತಿಂಗಳ ಕಂತಿನ ಹಣ ಬಂದಿದ್ಯಾ ಎಂದು ಚೆಕ್ ಮಾಡಬಹುದು.
Gruha Lakshmi 11th Installment money has been released to these districts