ಸರ್ಕಾರದಿಂದ ಶುರುವಾಯ್ತು ಕೃಷಿ ಭಾಗ್ಯ ಯೋಜನೆ! 24 ಜಿಲ್ಲೆಗಳ ಪೈಕಿ 106 ತಾಲ್ಲೂಕುಗಳಿಗೆ ಸೌಲಭ್ಯ

Story Highlights

ಇದೀಗ ಸರ್ಕಾರವು ರೈತರಿಗಾಗಿ ಕೃಷಿ ಭಾಗ್ಯ ಯೋಜನೆಯನ್ನು (Krushi Bhagya Yojana) ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ರೈತರಿಗೆ ಆರ್ಥಿಕ ಸಹಾಯ ಸಿಗಲಿದೆ.

ರಾಜ್ಯ ಸರ್ಕಾರವು ನಮ್ಮ ರಾಜ್ಯದಲ್ಲಿ ಕಷ್ಟಪಟ್ಟು ಕೃಷಿ ಕೆಲಸಗಳನ್ನು (Agriculture Activities) ಮಾಡುತ್ತಿರುವ ಎಲ್ಲಾ ರೈತರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಮೂಲಕ ಎಲ್ಲಾ ರೈತರು ಕೂಡ ಸರ್ಕಾರದ ಸಹಾಯ ಪಡೆದು ತಮ್ಮ ಕೃಷಿ ಕೆಲಸಗಳನ್ನು ಸುಲಭಗೊಳಿಸಿಕೊಳ್ಳಬಹುದು.

ಇದೀಗ ಸರ್ಕಾರವು ರೈತರಿಗಾಗಿ ಕೃಷಿ ಭಾಗ್ಯ ಯೋಜನೆಯನ್ನು (Krushi Bhagya Yojana) ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ರೈತರಿಗೆ ಆರ್ಥಿಕ ಸಹಾಯ ಸಿಗಲಿದೆ. ಹಾಗಿದ್ದಲ್ಲಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ..

ಈ ವರ್ಷ ರೈತರಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರವು 2023-24ನೇ ವರ್ಷದಲ್ಲಿ, ನಮ್ಮ ರಾಜ್ಯದ ಒಟ್ಟು 24 ಜಿಲ್ಲೆಗಳ ಪೈಕಿ 106 ತಾಲ್ಲೂಕುಗಳಲ್ಲಿ ನೆಲೆಸಿರುವ ರೈತರಿಗೆ ಕೃಷಿ ಭಾಗ್ಯ ಯೋಜನೆಯ ಮೂಲಕ ಸರ್ಕಾರವು ನೆರವು ನೀಡಲು ನಿರ್ಧಾರ ಮಾಡಿದೆ.

ಸರ್ಕಾರದ ಈ ಒಂದು ಸಹಾಯದಿಂದ ಬೇಸಿಗೆ ಸಮಯದಲ್ಲಿ ಕೂಡ ನಿಮ್ಮ ಕೃಷಿ ನೆಲದಲ್ಲಿ (Agriculture Land) ವ್ಯವಸಾಯ ಮಾಡುವುದಕ್ಕೆ ಸಹಾಯ ಆಗುತ್ತದೆ. ಈ ಯೋಜನೆಯ ಲಾಭಗಳೇನು?

ರೇಷನ್ ಕಾರ್ಡಿನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಿಕೊಳ್ಳಲು ಅವಕಾಶ! ಆನ್‌ಲೈನ್‌ನಲ್ಲೇ ಮಾಡಿ

ಕೃಷಿಯ ಭಾಗ್ಯ ಯೋಜನೆ:

ಈ ಒಂದು ಯೋಜನೆಯ ಮೂಲಕ ವಿವಿಧ ಕಾರ್ಯಗಳಿಗಾಗಿ ಸರ್ಕಾರದ ವತಿಯಿಂದ ರೈತರಿಗೆ ಆರ್ಥಿಕವಾಗಿ ಸಹಾಯ ಸಿಗಲಿದೆ. ಕೃಷಿ ಭೂಮಿಯಲ್ಲಿ ಹೊಂಡಗಳಿಂದ ನೀರು ತೆರೆಯಲು ಪಂಪ್ ಸೆಟ್, ನೀರಿನ ಹೊಂಡದ ಸುತ್ತ ತಂತಿ ಬೇಲಿಗಳ ನಿರ್ಮಿಸುವುದು, ನೀರು ಹಾಯಿಸುವುದಕ್ಕೆ ತುಂತುರು ಹನಿ ನೀರಾವರಿ ಘಟಕ ಇದೆಲ್ಲದಕ್ಕೂ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಕೆಲವು ಘಟಕಗಳಿದ್ದು, ಅವುಗಳ ಬಗ್ಗೆ ತಿಳಿಯೋಣ..

*ಕ್ಷೇತ್ರ ಬದು ನಿರ್ಮಾಣ
*ಕೃಷಿ ಹೊಂಡ ನಿರ್ಮಾಣ
*ಹೊಂಡಕ್ಕೆ ತಂತಿ ಬೇಲಿ
*ಹೊಂಡದಿಂದ ನೀರನ್ನು ತೆಗೆಯಲು ಪಂಪ್ ಸೆಟ್
*ತುಂತುರು ನೀರಾವರಿ

ಪಶುಪಾಲನಾ ಯೋಜನೆ! ಮನೆಯಲ್ಲಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ

Farmerಅಗತ್ಯವಿರುವ ದಾಖಲೆಗಳು:

ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು ಎಂದು ತಿಳಿಸುವುದಾದರೆ..

*ಭರ್ತಿ ಮಾಡಿರುವ ಅರ್ಜಿ ನಮೂನೆ
*ರೈತರ ಪಾಸ್ ಪೋರ್ಟ್ ಸೈಜ್ ಫೋಟೋ
*ಆಧಾರ್ ಕಾರ್ಡ್
*FID ನಂಬರ್
*ಪಹಣಿ ಪತ್ರ
*ಕ್ಯಾಸ್ಟ್ ಸರ್ಟಿಫಿಕೇಟ್
*ಬ್ಯಾಂಕ್ ಪಾಸ್ ಬುಕ್

ಗೃಹಲಕ್ಷ್ಮಿ ಹಣಕ್ಕೆ ಪೋಸ್ಟ್ ಆಫೀಸ್ ಅಕೌಂಟ್ ತೆರೆಯಿರಿ! ಹಣ ಬಾರದವರಿಗೆ ಒಟ್ಟಿಗೆ ಸಿಗಲಿದೆ ₹22,000

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಕೃಷಿ ಭಾಗ್ಯ ಯೋಜನೆಗೆ ಆಫ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಕೃಷಿ ಭಾಗ್ಯ ಯೋಜನೆಯ ಸೌಲಭ್ಯ ಪಡೆಯಲು ಬಯಸುವ ರೈತರು ನಿಮ್ಮ ಹತ್ತಿರ ರೈತ ಕೇಂದ್ರಕ್ಕೆ ಭೇಟಿ ನೀಡಿ, ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅಪ್ಲಿಕೇಶನ್ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ, ರೈತರಿಗೆ ಸಹಾಯ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

Facility for 106 taluks out of 24 districts through Krishi Bhagya Yojana

Related Stories