ಗೃಹಲಕ್ಷ್ಮಿ ಹಣಕ್ಕೆ ಪೋಸ್ಟ್ ಆಫೀಸ್ ಅಕೌಂಟ್ ತೆರೆಯಿರಿ! ಹಣ ಬಾರದವರಿಗೆ ಒಟ್ಟಿಗೆ ಸಿಗಲಿದೆ ₹22,000
Gruha Lakshmi Scheme : ರಾಜ್ಯ ಸರ್ಕಾರವು ಮಹಿಳೆಯರಿಗೆ ಆರ್ಥಿಕವಾಗಿ ಸೌಲಭ್ಯ ನೀಡುವ ಸಲುವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಜಾರಿಗೆ ಬಂದು, ಈಗಾಗಲೇ 10 ತಿಂಗಳು ಕಳೆದು, 10 ಕಂತುಗಳ ಹಣ ಈ ಯೋಜನೆಗೆ ಅರ್ಹತೆ ಪಡೆದಿರುವ ಎಲ್ಲಾ ಮಹಿಳೆಯರನ್ನು ತಲುಪಿದ್ದು, 11ನೇ ಕಂತಿನ ಹಣ ಶೀಘ್ರದಲ್ಲೇ ಜಮೆ ಆಗಲಿದೆ.
ಆದರೆ ಇನ್ನೂ ಕೂಡ ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ, ಅಂಥವರಿಗೆ ಈಗ ಸರ್ಕಾರ ಒಂದು ಹೊಸ ಸುದ್ದಿಯನ್ನು ನೀಡಿದೆ.
ರೇಷನ್ ಪಡೆಯೋಕೆ ಹೊಸ ರೂಲ್ಸ್, ಇನ್ಮುಂದೆ ಕಣ್ಣಿನ ಐರಿಸ್ ಸ್ಕ್ಯಾನ್ ಮಾಡಿ ನೀಡಲಾಗುತ್ತೆ ರೇಷನ್!
ರಾಜ್ಯದಲ್ಲಿ 1ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಅರ್ಹತೆ ಪಡೆದಿದ್ದಾರೆ. ಅಂಥವರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿದೆ.
ಆದರೆ ಕೆಲವು ಫಲಾನುಭವಿಗಳಿಗೆ ಹಲವು ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಲಭ್ಯವಾಗುತ್ತಿಲ್ಲ. ಅದೆಲ್ಲದಕ್ಕೂ ಪ್ರಮುಖ ಕಾರಣ ಬ್ಯಾಂಕ್ ಅಕೌಂಟ್ (Bank Account) ಸಮಸ್ಯೆ ಆಗಿರಬಹುದು ಎಂದು ಮಾಹಿತಿ ಸಿಕ್ಕಿದೆ. ಆ ಸಮಸ್ಯೆಗೆ ಸರ್ಕಾರ ಒಂದು ಪರಿಹಾರ ತಂದಿದೆ.
ಸರ್ಕಾರದಿಂದ ಹೊಸ ಅಪ್ಡೇಟ್:
1 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿ, ಅದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ ಇನ್ನೂ ಹಲವು ಮಹಿಳೆಯರು ಯೋಜನೆಗೆ ಇನ್ನು ಕೂಡ ಅಪ್ಲೈ ಮಾಡಿಲ್ಲ, ಅಂಥವರೆಲ್ಲರಿಗು ಈ ಯೋಜನೆಯ ಹಣ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಹಾಗಾಗಿ ಹೆಚ್ಚಿನ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲಿ ಎಂದು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಕೃಷಿ ನೆಲದಲ್ಲಿ ಉಚಿತ ಬೋರ್ ವೆಲ್ ಸೌಲಭ್ಯ! ರೈತರ ನೀರಿನ ಸಮಸ್ಯೆ ನೀಗಿಸಲು ಹೊಸ ಯೋಜನೆ
ಬ್ಯಾಂಕ್ ಅಕೌಂಟ್ (Bank Account) ಸಮಸ್ಯೆಯಿಂದ ಯಾರಿಗೆಲ್ಲಾ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದ ಹಣ ಪಡೆಯದೇ ಇರುವವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಹೊಸ ಅಪ್ಡೇಟ್ (New Update) ನೀಡಿದ್ದಾರೆ,
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿರುವ ಹಾಗೆ ಆ ಒಂದು ಕೆಲಸವನ್ನು ಮಾಡಿಬಿಟ್ಟರೆ ನಿಮಗೆ ಯೋಜನೆಯ 11ನೇ ಕಂತಿನ ಹಣ ಬರುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಇನ್ನು ಕೂಡ 1 ಕಂತಿನ ಹಣವು ಬಂದಿಲ್ಲ ಎಂದರೆ ಅಂಥವರಿಗೆ ಒಟ್ಟಿಗೆ 11 ಕಂತುಗಳ ಹಣ ಸಹ ಬರಲಿದೆ.
ಆಧಾರ್ ಜೊತೆಗೆ ಇನ್ನು ರೇಷನ್ ಕಾರ್ಡ್ ಲಿಂಕ್ ಮಾಡಿಲ್ವಾ? ಅದಕ್ಕೂ ಮುನ್ನ ಬಂತು ಬಿಗ್ ಅಪ್ಡೇಟ್
ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಿರಿ
ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಸಮಸ್ಯೆ ಇಂದ ಇನ್ನು ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗುತ್ತಿಲ್ಲ ಎಂದರೆ ಅಂಥ ಮಹಿಳೆಯರು ಪೋಸ್ಟ್ ಆಫೀಸ್ ನಲ್ಲಿ ಖಾತೆ (Open Post Office Account) ತೆರೆದು, ಅದನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಬಹುದು.
ಇದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ಕಂತಿನ ಹಣ ಕೂಡ ಸಿಗದೇ ಇರುವವರಿಗೆ ಒಟ್ಟಿಗೆ 11 ಕಂತುಗಳ ₹22,000 ರೂಪಾಯಿ ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಮಹಿಳೆಯರು ಈ ಒಂದು ಕೆಲಸ ಮಾಡಿ, ಯೋಜನೆಯ ಹಣ ಪಡೆಯಬಹುದು.
ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗೃಹಜ್ಯೋತಿ ಯೋಜನೆಯ ಹೊಸ ರೂಲ್ಸ್
Open Post Office Account for Gruha lakshmi Yojana Money
Our Whatsapp Channel is Live Now 👇