Bangalore NewsKarnataka News

ರೇಷನ್ ಪಡೆಯೋಕೆ ಹೊಸ ರೂಲ್ಸ್, ಇನ್ಮುಂದೆ ಕಣ್ಣಿನ ಐರಿಸ್ ಸ್ಕ್ಯಾನ್ ಮಾಡಿ ನೀಡಲಾಗುತ್ತೆ ರೇಷನ್!

ನಮಗೆಲ್ಲ ಗೊತ್ತಿರುವ ಹಾಗೆ ಸರ್ಕಾರವು ಬಿಪಿಎಲ್ ಕಾರ್ಡ್ (BPL Card) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು ಉಚಿತವಾಗಿ ರೇಷನ್ ಕೊಡುತ್ತಿದೆ. ಜನರು ಪ್ರತಿ ತಿಂಗಳು ಪಡಿತರ ವಿತರಣೆ ಮಾಡುವ ಕೇಂದ್ರಗಳಿಗೆ ಹೋಗಿ ಉಚಿತ ಅಕ್ಕಿ, ಗೋಧಿ ಹಾಗೂ ಸರ್ಕಾರದಿಂದ ಸಿಗುವ ಇನ್ನಿತರ ವಸ್ತುಗಳನ್ನು ಪಡೆದುಕೊಳ್ಳುತ್ತಾರೆ.

ಆದರೆ ಇದೀಗ ಉಚಿತ ರೇಷನ್ ಪಡೆಯಲು ಸರ್ಕಾರದಿಂದ ಹೊಸದೊಂದು ನಿಯಮವನ್ನು (New Rules) ಜಾರಿಗೆ ತರಲಾಗಿದೆ. ಆ ನಿಯಮಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

New rules for getting ration every month, iris scan in Mandatory

ಕೃಷಿ ನೆಲದಲ್ಲಿ ಉಚಿತ ಬೋರ್ ವೆಲ್ ಸೌಲಭ್ಯ! ರೈತರ ನೀರಿನ ಸಮಸ್ಯೆ ನೀಗಿಸಲು ಹೊಸ ಯೋಜನೆ

ನಮ್ಮ ದೇಶದ ಜನರು ಮತ್ತು ರಾಜ್ಯದ ಜನರು ಕಷ್ಟದಲ್ಲಿ ಇರಬಾರದು ಎಂದು ಪಡಿತರ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಈ ಒಂದು ಸೌಲಭ್ಯದ ಮೂಲಕ ಪ್ರತಿ ತಿಂಗಳು ಬಡತನದಲ್ಲಿದ್ದು ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಉಚಿತ ಅಕ್ಕಿ, ಗೋಧಿ ಹಾಗೂ ಇನ್ನಿತರ ಸವಲತ್ತುಗಳು ಸಿಗುತ್ತಿದೆ. ಆದರೆ ಇದೀಗ ಸರ್ಕಾರವು ಜನರಿಗೆ ಪ್ರತಿ ತಿಂಗಳು ರೇಷನ್ ವಿತರಣೆ ಮಾಡುವುದಕ್ಕೆ ಹೊಸದೊಂದು ರೂಲ್ಸ್ ಜಾರಿಗೆ ತಂದಿದೆ. ಇದರಿಂದ ಜನರು ಇನ್ನಷ್ಟು ಹುಷಾರಾಗಿರಬೇಕು.

ಸರ್ಕಾರದಿಂದ ಹೊಸ ರೂಲ್ಸ್:

ಪ್ರತಿ ತಿಂಗಳು ಜನರಿಗೆ ಪಡಿತರ ವಿತರಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮೋಸ ಕೂಡ ನಡೆಯುತ್ತಿದೆ. ಹೌದು, ಪಡಿತರ ವಿತರಣೆ ಮಾಡುವ ಕೇಂದ್ರದಲ್ಲಿ ಕೆಲಸ ಮಾಡುವವರು ಎಲ್ಲ ನಿಯಮದ ಅನುಸಾರ ಬೆರಳಚ್ಚಿನ ಮೂಲಕ ಬಯೋಮೆಟ್ರಿಕ್ ಪೂರ್ಣಗೊಳಿಸಿ, ಜನರಿಗೆ ರೇಷನ್ ಕೊಟ್ಟು ಬಳಿಕ ಮತ್ತೆ ಅವರೇ ಜನರಿಂದ ರೇಷನ್ ಅನ್ನು ವಾಪಸ್ ಪಡೆದು, ತಾವೇ ಬೇರೆ ಕಡೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ಕಾರಕ್ಕೆ ಕಾಡುತ್ತಿರುವ ಮುಖ್ಯವಾದ ಸಮಸ್ಯೆ.

ಆಧಾರ್ ಜೊತೆಗೆ ಇನ್ನು ರೇಷನ್ ಕಾರ್ಡ್ ಲಿಂಕ್ ಮಾಡಿಲ್ವಾ? ಅದಕ್ಕೂ ಮುನ್ನ ಬಂತು ಬಿಗ್ ಅಪ್ಡೇಟ್

Ration Cardಈ ಸಮಸ್ಯೆಯ ಜೊತೆಗೆ ಮತ್ತೊಂದು ಸಮಸ್ಯೆ ಕೂಡ ಸರ್ಕಾರಕ್ಕೆ ಶುರುವಾಗಿದೆ, ಅದೇನು ಎಂದರೆ ಪ್ರತಿ ತಿಂಗಳು ಪಡಿತರ ಕೊಡುವಾಗ ಜನರ ಬೆರಳಚ್ಚನ್ನು ಪಡೆದು, ಅದರ ಮೂಲಕ ಫೋನ್ ನಂಬರ್ ಗೆ ಓಟಿಪಿ ಕಳುಹಿಸಿ, ಆ ಮೂಲಕ ರೇಶನ್ ನೀಡಲಾಗುತ್ತದೆ.

ಆದರೆ ಕೆಲವೊಮ್ಮೆ ಜನರಿಗೆ ವಯಸ್ಸಾಗಿ ಕೈಯಲ್ಲಿರುವ ರೇಖೆಗಳು ಸವೆದು ಹೋದಾಗ ಬಯೋಮೆಟ್ರಿಕ್ ಚೆಕ್ ಮಾಡುವ ಮಶಿನ್ ಗಳು ರೇಖೆಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ, ಇನ್ನು ಕೆಲವು ಪಿಒಎಸ್ ಮಷಿನ್ ಗಳು ಕೈರೇಖೆಗಳನ್ನು ಗುರುತಿಸುವುದಕ್ಕೆ ಕಷ್ಟಪಡುತ್ತಿದೆ. ಇದು ಕೂಡ ಸರ್ಕಾರಕ್ಕೆ ಪ್ರಸ್ತುತ ಕಾಡುತ್ತಿರುವ ಮುಖ್ಯವಾದ ಸಮಸ್ಯೆ ಆಗಿದೆ.

ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗೃಹಜ್ಯೋತಿ ಯೋಜನೆಯ ಹೊಸ ರೂಲ್ಸ್

ಇನ್ಮುಂದೆ ಈ ಕೆಲಸ ಕಡ್ಡಾಯ:

ಈ ಕಾರಣಗಳಿಗೆ ಸರ್ಕಾರ ಇದೀಗ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ಇನ್ಮುಂದೆ ಬಯೋಮೆಟ್ರಿಕ್ ಮಷಿನ್ ನ ಮೂಲಕ ಪಡಿತರ ಪಡೆಯುವ ವ್ಯಕ್ತಿಯ ಕಣ್ಣಿನ ಐರಿಸ್ ಸ್ಕ್ಯಾನ್ (iris Scan) ಮಾಡಿ, ಅದರಿಂದ ಓಟಿಪಿ ಪಡೆದು, ಪಡಿತರ ವಿತರಣೆ ಮಾಡುವ ಹೊಸ ರೂಲ್ಸ್ ಅನ್ನು ಸರ್ಕಾರ ಜಾರಿಗೆ ತಂದಿದ್ದು, ಈ ಒಂದು ನಿರ್ಧಾರದಿಂದ ಜನರಿಗೆ ಮತ್ತು ಸರ್ಕಾರಕ್ಕೆ ಮೋಸ ಆಗುವುದು ತಪ್ಪುತ್ತದೆ. ಜೊತೆಗೆ ಐರಿಸ್ ಸ್ಕ್ಯಾನ್ ಮೂಲಕ ನೀವು ನಿಮ್ಮ ಎಲ್ಲಾ ಮಾಹಿತಿಗಳನ್ನು ದೃಢೀಕರಿಸಿಕೊಳ್ಳಬಹುದು.

New rules for getting ration every month, iris scan in Mandatory

Our Whatsapp Channel is Live Now 👇

Whatsapp Channel

Related Stories