ಆಧಾರ್ ಜೊತೆಗೆ ಇನ್ನು ರೇಷನ್ ಕಾರ್ಡ್ ಲಿಂಕ್ ಮಾಡಿಲ್ವಾ? ಅದಕ್ಕೂ ಮುನ್ನ ಬಂತು ಬಿಗ್ ಅಪ್ಡೇಟ್

Story Highlights

Ration Card Link with Aadhaar : ಸರ್ಕಾರವು ಆಧಾರ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಲು ಒಂದು ಡೆಡ್ ಲೈನ್ ಕೊಟ್ಟಿತ್ತು, ಅದು ಈ ವರ್ಷ ಜೂನ್ 30ರ ವರೆಗು ಆಗಿತ್ತು

Ration Card Link with Aadhaar : ಸರ್ಕಾರಕ್ಕೆ ಪಡಿತರ ಚೀಟಿ ವಿಚಾರದಲ್ಲಿ ಬಹಳಷ್ಟು ಜನರಿಂದ ಮೋಸ ಆಗುತ್ತಿದೆ. ಹಲವು ಜನರು ಒಂದೇ ಮನೆಯಲ್ಲಿದ್ದು ಫೇಕ್ ಮಾಹಿತಿಗಳನ್ನು, ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ಮೋಸ ಮಾಡಿ ರೇಷನ್ ಕಾರ್ಡ್ ಮಾಡಿಸಿಕೊಂಡು ಉಚಿತ ಸವಲತ್ತುಗಳನ್ನು ಪಡೆಯುತ್ತಿದ್ದಾರೆ.

ಇದೆಲ್ಲವೂ ಸರ್ಕಾರಕ್ಕೆ ಹೊರೆಯಾಗಿದ್ದು, ಇಂಥ ಸಮಸ್ಯೆಗಳು ಆಗಬಾರದು ಎಂದು ಸರ್ಕಾರ ಒಂದು ತೀರ್ಮಾನ ಕೈಗೊಂಡು, ಎಲ್ಲರೂ ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿತ್ತು..

ಪಿಡಿಎಸ್ ಕಾನೂನಿನ ಅಡಿಯಲ್ಲಿ 2017ರಲ್ಲೇ ಈ ಒಂದು ನಿಯಮವನ್ನು ಜಾರಿಗೆ ತರಲಾಯಿತು. ಬಿಪಿಎಲ್ ರೇಷನ್ ಕಾರ್ಡ್ (BPL Ration Card), ಎಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರೂ ಸಹ ಈ ತಮ್ಮ ರೇಷನ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬೇಕು ಎಂದು ತಿಳಿಸಲಾಗಿತ್ತು. ಸರ್ಕಾರ ಕೊಟ್ಟಿರುವ ಅವಧಿಯ ಒಳಗೆ ಈ ಒಂದು ಕೆಲಸಗಳನ್ನು ಮಾಡಿಕೊಂಡರೆ, ಅದು ಉಚಿತವಾಗಿ ಮಾಡಿಕೊಳ್ಳಬಹುದು.

ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗೃಹಜ್ಯೋತಿ ಯೋಜನೆಯ ಹೊಸ ರೂಲ್ಸ್

ಸರ್ಕಾರದಿಂದ ಬಂದಿರುವ ಡೆಡ್ ಲೈನ್

ಸರ್ಕಾರವು ಆಧಾರ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಲು ಒಂದು ಡೆಡ್ ಲೈನ್ ಕೊಟ್ಟಿತ್ತು, ಅದು ಈ ವರ್ಷ ಜೂನ್ 30ರ ವರೆಗು ಆಗಿತ್ತು, ಆ ದಿನಾಂಕದವರೆಗೆ ಯಾರೆಲ್ಲಾ ಆಧಾರ್ ಅನ್ನು ರೇಷನ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಲ್ಲವೋ ಅಂಥವರಿಗೆ ಜುಲೈ ತಿಂಗಳಿನಿಂದ ರೇಷನ್ ಸಿಗುವುದಿಲ್ಲ ಎಂದು ಕೂಡ ಸರ್ಕಾರ ಮಾಹಿತಿ ನೀಡಿತ್ತು. ಆದರೆ ಇದೀಗ ಸರ್ಕಾರವು ಆ ದಿನಾಂಕವನ್ನು ವಿಸ್ತರಿಸಿದೆ.

ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಹೊಂದಿರುವ ಎಲ್ಲರೂ ಕೂಡ ಇನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಲ್ಲದ ಕಾರಣ ಇದೀಗ ಸರ್ಕಾರವು ಮತ್ತೊಮ್ಮೆ ಅವಧಿಯನ್ನು ವಿಸ್ತರಿಸಿ, ಮೂರು ತಿಂಗಳ ಅವಧಿ ವಿಸ್ತರಣೆ ಮಾಡಿದೆ.

ನಿಮ್ಮ ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಸೆಪ್ಟೆಂಬರ್ 30ರ ವರೆಗೂ ಸಮಯ ಇದ್ದು, ಈ ದಿನಾಂಕದ ಒಳಗೆ ನೀವು ಉಚಿತವಾಗಿ ಲಿಂಕ್ ಮಾಡಬಹುದು. ಹಾಗಿದ್ದಲ್ಲಿ, ಈ ಪ್ರಕ್ರಿಯೆಯನ್ನು ಸುಲಭವಾಗಿ ನೋಡಿಕೊಳ್ಳುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಯುವನಿಧಿ ಯೋಜನೆಯ ₹3000 ಹಣ ಪಡೆಯೋಕೆ ಬಂತು ಹೊಸ ಅಪ್ಡೇಟ್! ಈ ಸಲಹೆ ತಪ್ಪದೆ ಪಾಲಿಸಿ

Aadhaar Cardರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

*ಮೊದಲಿಗೆ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಇರುವ ಬ್ಯಾಂಕ್ ನ ವೆಬ್ಸೈಟ್ ಓಪನ್ ಮಾಡಿ

*ಆ ವೆಬ್ಸೈಟ್ ಗೆ ಲಾಗಿನ್ ಮಾಡಿ, ನಂತರ kyc ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ

*ಇಲ್ಲಿ ನಿಮ್ಮ ಪರ್ಸನಲ್ ಮಾಹಿತಿ ಕೇಳಲಾಗುತ್ತದೆ, ಹೆಸರು, ಡೇಟ್ ಆಫ್ ಬರ್ತ್, ಅಡ್ರೆಸ್ ಇದೆಲ್ಲವನ್ನು ಕೇಳಲಾಗುತ್ತದೆ. ಅದೆಲ್ಲದಕ್ಕೂ ಉತ್ತರಿಸಿ.

*ಇದಾದ ನಂತರ ಮುಖ್ಯವಾದ ಮಾಹಿತಿಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ (Pan Card) ಇದೆಲ್ಲವನ್ನು ಅಪ್ಲೋಡ್ ಮಾಡಬೇಕು.

*ಇದಿಷ್ಟು ಮುಗಿದ ನಂತರ ಪ್ರಕ್ರಿಯೆ ಪೂರ್ತಿಯಾಗಿ ನಡೆದಿದೆ ಎಂದು ಅರ್ಥ. ನಿಮ್ಮ ಫೋನ್ ನಂಬರ್ ಗೆ ಮೆಸೇಜ್ ಅಥವಾ ಇಮೇಲ್ ಮೂಲಕ ದೃಢೀಕರಣ ಮಾಹಿತಿ ಸಿಗುತ್ತದೆ.

ಫ್ರೀ ಬಸ್ ಗೆ ಹತ್ತುವ ಮುನ್ನ ಈ ವಿಚಾರಕ್ಕೆ ಗಮನ‌ಕೊಡಿ! ಶಕ್ತಿ‌ಯೋಜನೆಯಲ್ಲಿ ಹೊಸ ನಿಯಮ‌ ಜಾರಿ

big update on Link Ration Card with Aadhaar Card

Related Stories